Select Your Language

Notifications

webdunia
webdunia
webdunia
webdunia

ಆಸೀಸ್ ಅವನತಿಗೆ ಐಪಿಎಲ್ ಕಾರಣ: ಮಿಯಾಂದಾದ್ ಕಿಡಿ

ಆಸೀಸ್ ಅವನತಿಗೆ ಐಪಿಎಲ್ ಕಾರಣ: ಮಿಯಾಂದಾದ್ ಕಿಡಿ
ಕರಾಚಿ , ಬುಧವಾರ, 12 ಜನವರಿ 2011 (13:00 IST)
ಒಂದು ಕಾಲದಲ್ಲಿ ಕ್ರಿಕೆಟ್‌ನ ಅಗ್ರ ತಂಡವಾಗಿದ್ದ ಆಸ್ಟ್ರೇಲಿಯಾದ ಅವನತಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಮುಖ ಕಾರಣವಾಗಿದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಕಟು ಟೀಕೆ ಮಾಡಿದ್ದಾರೆ.

ಹಾಗೆಯೇ ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಆಡಲು ಮುಂದಾಗುವ ಮೊದಲು ಆಸೀಸ್ ಆಟಗಾರರು ಎರಡು ಬಾರಿ ಯೋಚನೆ ಮಾಡುವುದು ಒಳಿತು ಎಂದು ಮಿಯಾಂದಾದ್ ಸಲಹೆ ಮಾಡಿದ್ದಾರೆ.

ಕಳೆದ ವರ್ಷದ ವರೆಗೂ ಅಜೇಯ ತಂಡವಾಗಿ ಮುಂದುವರಿದಿದ್ದ ಆಸೀಸ್ ಆಶಸ್ ಸರಣಿಯಲ್ಲಿ ದಿಢೀರನೆ ಕುಸಿತ ಕಂಡಿತ್ತು. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಆಶಸ್ ಸರಣಿಯನ್ನು 3-1ರ ಅಂತರದಲ್ಲಿ ಕಳೆದುಕೊಂಡ ಆಸ್ಟ್ರೇಲಿಯಾ ಮುಖಭಂಗಕ್ಕೊಳಗಾಗಿತ್ತು.

ಐಪಿಎಲ್‌ ಆಸೀಸ್ ಆಟಗಾರರ ಗಮನವನ್ನು ಬೇರೆಡೆ ಹರಿಸುವಂತೆ ಮಾಡಿದೆ. ಇದರಿಂದಾಗಿ ರಾಷ್ಟ್ರೀಯ ಕರ್ತವ್ಯವನ್ನೇ ಆಟಗಾರರು ಮರೆತಿದ್ದಾರೆ ಎಂದು ಹಣದ ಹೊಳೆಯನ್ನೇ ಹರಿಸುತ್ತಿರುವ ಐಪಿಎಲ್ ಬಗ್ಗೆ ಮಿಯಾಂದಾದ್ ಟೀಕಾಪ್ರಹಾರ ಮಾಡಿದರು.

ಗ್ಲೆನ್ ಮೆಕ್‌ಗ್ರಾಥ್, ಶೇನ್ ವಾರ್ನ್ ಮತ್ತು ಆಡಂ ಗಿಲ್‌ಕ್ರಿಸ್ಟ್ ನಿಗದಿತ ಅವಧಿಗಿಂತ ಮೊದಲೇ ನಿವೃತ್ತಿ ಸಲ್ಲಿಸಿದ್ದರಲ್ಲದೆ ಐಪಿಎಲ್‌ನಿಂದ ಸಾಕಷ್ಟು ಸಂಪಾದನೆ ಮಾಡಿದ್ದರು ಎಂಬುದನ್ನು ಅವರು ಉಲ್ಲೇಖಿಸಿದರು.

ಮಾತು ಮುಂದುವರಿಸಿದ ಅವರು ಇಂತಹ ಕ್ರಿಕೆಟ್ ಲೀಗ್‌ಗಳಿಂದಾಗಿ ಟೆಸ್ಟ್ ಹಾಗೂ ಏಕದಿನಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

Share this Story:

Follow Webdunia kannada