ಕೊಲ್ಕತ್ತಾದಲ್ಲಿ ಗಂಗೂಲಿ ಇಲ್ಲದ ಐಪಿಎಲ್ ತಂಡ ಅಸಾಧ್ಯ: ಎಸ್‌ಆರ್‌ಕೆ
ನವದೆಹಲಿ , ಸೋಮವಾರ, 10 ಜನವರಿ 2011 (13:28 IST)
ಐಪಿಎಲ್ ಹರಾಜಿನಲ್ಲಿ ಕಡೆಗಣಿಸಲ್ಪಟ್ಟಿರುವ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಇದೀಗ ಕ್ರಿಕೆಟ್ ವಲಯದಲ್ಲಿ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಐಪಿಎಲ್ ನಾಲ್ಕನೇ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಈ ಮಾಜಿ ನಾಯಕರನ್ನು ಖರೀದಿಸಲು ಕೊಲ್ಕತ್ತಾ ನೈಟ್ ರೈಡರ್ಸ್ ಸೇರಿದಂತೆ ಎಲ್ಲ ಹತ್ತು ಫ್ರಾಂಚೈಸಿಗಳು ತಂಡಗಳು ನಿರಾಕರಿಸಿದ್ದವು. ಆದರೆ ಇದೀಗ ಭಿನ್ನ ಹೇಳಿಕೆ ನೀಡಿರುವ ಕೊಲ್ಕತ್ತಾ ತಂಡದ ಮಾಲಿಕ ಶಾರೂಕ್ ಖಾನ್, ಕೊಲ್ಕತ್ತಾದಲ್ಲಿ ದಾದಾ ಇಲ್ಲದ ಐಪಿಎಲ್ ತಂಡ ಅಸಾಧ್ಯ ಎಂದಿದ್ದಾರೆ. ನಾವು ಗಂಗೂಲಿ ಜತೆ ಮಾತುಕತೆ ನಡೆಸಲಿದ್ದೇವೆ. ಅವರನ್ನು ಮರಳಿ ಪಡೆಯಲು ಕೆಕೆಆರ್ ಯತ್ನಸಲಿದೆ ಎಂದು ಬಾಲಿವುಡ್ ನಟ ನುಡಿದರು.ಮೊದಲ ದಿನ ಬಿಕರಿಯಾಗದೇ ಉಳಿದಿದ್ದ ಗಂಗೂಲಿ ಅವರು ಭಾನುವಾರವೂ ಹರಾಜಿಗೆ ಲಭ್ಯವಿದ್ದರೂ ಯಾವುದೇ ತಂಡಗಳು ಆಸಕ್ತಿ ತೋರಿರಲಿಲ್ಲ. ಇದರ ವಿರುದ್ಧ ಕೊಲ್ಕತ್ತಾದಲ್ಲಿ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತಲ್ಲದೆ ಶೂರೂಕ್ ಪ್ರತಿಕೃತಿಯನ್ನೂ ದಹಿಸಲಾಗಿತ್ತು. ಅಲ್ಲದೆ ಮುಂಬರುವ ಆವೃತ್ತಿನಲ್ಲಿ ಕೊಲ್ಕತ್ತಾ ಪಂದ್ಯಗಳನ್ನು ಬಹಿಷ್ಕರಿಸುವುದಾಗಿ ಅಭಿಮಾನಿಗಳು ಬೆದರಿಕೆಯೊಡ್ಡಿದ್ದರು. ಭಾನುವಾರ 28 ಆಟಗಾರರು ಮರು ಹರಾಜಿಗೆ ಬಯಸಿದ್ದರು. ಆದರೆ ಇದರಲ್ಲಿ ಮುರಳಿ ಕಾರ್ತಿಕ್ ಮತ್ತು ಮೊಹಮ್ಮದ್ ಕೈಫ್ ಮಾತ್ರ ಬಿಕರಿಯಾಗಿದ್ದರು. ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ