ಕುಕ್ ಶತಕ, ಕೆವಿನ್, ಟ್ರಾಟ್ ಫಿಫ್ಟಿ; ಬೃಹತ್ ಮೊತ್ತದತ್ತ ಆಂಗ್ಲರು
ಆಡಿಲೇಡ್ , ಶನಿವಾರ, 4 ಡಿಸೆಂಬರ್ 2010 (15:10 IST)
ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್‌ನ 245 ರನ್ನುಗಳಿಗೆ ದಿಟ್ಟ ಉತ್ತರ ನೀಡಿರುವ ಪ್ರವಾಸಿ ಇಂಗ್ಲೆಂಡ್ ತಂಡವು ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆಶಸ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಂತ್ಯಕ್ಕೆ, ಆರಂಭಿಕ ಆಲಿಸ್ಟಾರ್ ಕುಕ್ (136*) ದಾಖಲಿಸಿದ ಅಮೋಘ ಶತಕ ಮತ್ತು ಕೆವಿನ್ ಪೀಟರ್‌ಸನ್ ಮತ್ತು ಜೊನಾಥನ್ ಟ್ರಾಟ್ (78) ಬಾರಿಸಿರುವ ಆಕರ್ಷಕ ಅರ್ಧಶತಕದ (85*) ನೆರವಿನಿಂದ 89 ಓವರುಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 317 ರನ್ ಪೇರಿಸಿದ್ದು, 72 ರನ್ನುಗಳ ಮುನ್ನಡೆ ದಾಖಲಿಸಿದೆ. ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿಬ್ರಿಸ್ಬೇರ್ನ್ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿಯೂ ದ್ವಿಶತಕ ಬಾರಿಸಿದ್ದ ಕುಕ್ ಇಲ್ಲಿಯೂ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದರು. ಬಹುತೇಕ ಎಲ್ಲಾ ಆಸೀಸ್ ಬೌಲರುಗಳನ್ನು ಬೆವರಿಳಿಸಿದ ಕುಕ್ ಮತ್ತು ಪೀಟರ್‌ಸನ್ ಜೋಡಿ ಇದೀಗಲೇ ಮುರಿಯದ ಮೂರನೇ ವಿಕೆಟ್‌ಗೆ 141 ರನ್ ಪೇರಿಸಿದೆ. ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಕುಕ್ 246 ಎಸೆತಗಳಲ್ಲಿ 17 ಬೌಂಡರಿಗಳ ನೆರವಿನಿಂದ 136 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅದೇ ರೀತಿ ಶತಕದತ್ತ ದಿಟ್ಟ ಹೆಜ್ಜೆಯನ್ನಿಟ್ಟಿರುವ ಪೀಟರ್‌ಸನ್ 85 ರನ್ ಗಳಿಸಿದ್ದು, ಆರಂಭಿಕ ಕುಕ್ ಅವರಿಗೆ ಉತ್ತಮ ಸಾಥ್ ನೀಡುತ್ತಿದ್ದಾರೆ. ತಮ್ಮ ಫಾರ್ಮ್ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿರುವ ಪೀಟರ್‌ಸನ್ ಟೀಕಾಕಾರರಿಗೆ ಸ್ಪಷ್ಟ ಉತ್ತರ ನೀಡಿದರು. ಇದಕ್ಕೂ ಮೊದಲು ದಿನದ ಮೊದಲ ಓವರ್‌ನಲ್ಲೇ ನಾಯಕ ಆಂಡ್ರ್ಯೂ ಸ್ಟ್ರಾಸ್ (1) ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ದ್ವಿತೀಯ ವಿಕೆಟ್‌ಗೆ ಟ್ರಾಟ್ ಜತೆ 173 ರನ್ನುಗಳ ಜತೆಯಾಟ ನೀಡಿದ್ದ ಕುಕ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ್ದರು. ಗಮನಾರ್ಹ ಪ್ರದರ್ಶನ ನೀಡಿದ್ದ ಟ್ರಾಟ್ 78 ರನ್ ಗಳಿಸಿದರು. ಆಸೀಸ್ ಪರ ಎಲ್ಲ ಬೌಲರುಗಳು ವಿಫಲರಾದರು. ದಿನದಲ್ಲಿ ಪತನಗೊಂಡ ಎರಡು ವಿಕೆಟುಗಳನ್ನು ವೇಗಿ ರೈನ್ ಹ್ಯಾರಿಸ್ ಮತ್ತು ಡೌಗ್ ಬೊಲ್ಲಿಂಗರ್ ಹಂಚಿಕೊಂಡರು. ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ