Select Your Language

Notifications

webdunia
webdunia
webdunia
webdunia

ಅಸಾಮಾನ್ಯ ಸಚಿನ್ ಬಗ್ಗೆ ಹುಷಾರಾಗಿರಿ: ಆಫ್ರಿದಿ

ಅಸಾಮಾನ್ಯ ಸಚಿನ್ ಬಗ್ಗೆ ಹುಷಾರಾಗಿರಿ: ಆಫ್ರಿದಿ
ಕರಾಚಿ , ಶನಿವಾರ, 4 ಡಿಸೆಂಬರ್ 2010 (11:15 IST)
ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೇ ಪ್ರಮುಖ ಕೇಂದ್ರ ಬಿಂದುವಾಗಲಿದ್ದಾರೆ ಎಂದು ಹೇಳಿರುವ ಪಾಕಿಸ್ತಾನ ಕ್ರಿಕೆಟ್‌ನ ಏಕದಿನ ನಾಯಕ ಶಾಹಿದ್ ಆಫ್ರಿದಿ, ಈ ಬ್ಯಾಟಿಂಗ್ ದಿಗ್ಗಜನ ಬಗ್ಗೆ ಎಲ್ಲ ತಂಡಗಳು ಅತೀಯ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಸಚಿನ್ ಅಸಾಮಾನ್ಯ ಆಟಗಾರ. ಪ್ರಾಯವಾದಂತೆಯೇ ಅವರ ರನ್ ದಾಹ ಹೆಚ್ಚುತ್ತಲೇ ಇದೆ. ಕಳೆದ 20 ವರ್ಷಗಳಿಂದ ಆಡುತ್ತಿರುವ ಅವರಿಗೆ ಇದು ಕೊನೆಯ ವಿಶ್ವಕಪ್ ಆಗಿರಲಿದೆ. ಹಾಗಾಗಿ ಸಹಜವಾಗಿಯೇ ಇದನ್ನವರು ಅವಿಸ್ಮರಣೀಯವಾಗಿಸಲು ಪ್ರಯತ್ನಿಸಲಿದ್ದಾರೆ ಎಂದವರು ಡೈಲಿ ಟೈಮ್ಸ್‌ಗೆ ತಿಳಿಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಎಲ್ಲ ತಂಡಗಳು ಸಚಿನ್ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇದರಲ್ಲಿ ಯಾವುದೇ ವಿನಾಯತಿ ಇಲ್ಲ. ಸಚಿನ್ ಸೇರಿದಂತೆ ಕೆಲವು ಭಾರತೀಯ ಆಟಗಾರರ ವಿರುದ್ದ ಕೆಲವು ನಿರ್ದಿಷ್ಟ ಯೋಜನೆ ರೂಪಿಸಬೇಕಾದ ಅಗತ್ಯವಿದೆ ಎಂದವರು ಸೇರಿಸಿದರು.

ಅದೇ ಹೊತ್ತಿಗೆ ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದವರು ಹೇಳಿದರು. ನನ್ನ ಪ್ರಕಾರ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿದೆ. ಆದರೆ ಆತಿಥ್ಯ ವಹಿಸುತ್ತಿರುವ ಭಾರತ ಮತ್ತು ಶ್ರೀಲಂಕಾ ತಂಡ ಮೇಲೆ ಹೆಚ್ಚಿನ ಒತ್ತಡವಿರಲಿದೆ ಎಂದವರು ವಿವರಿಸಿದರು.

ಧೋನಿ ನಾಯಕತ್ವ ವಹಿಸಿದ ನಂತರ ಭಾರತ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದೆ. ಅಲ್ಲದೆ ತಂಡದ ಆತ್ಮವಿಶ್ವಾಸವು ಅತ್ಯುನ್ನತ ಮಟ್ಟದಲ್ಲಿದೆ. ಹೀಗಾಗಿ ಟೂರ್ನಿ ಬಹಳ ರೋಚಕವಾಗಿರಲಿದೆ ಎಂದವರು ಹೇಳಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

Share this Story:

Follow Webdunia kannada