ದ್ರಾವಿಡ್‌ನಿಂದಾಗಿ ನಂ.3 ಕ್ರಮಾಂಕದಲ್ಲಿ ಸ್ಥಿರತೆ: ಧೋನಿ
ನಾಗ್ಪುರ , ಬುಧವಾರ, 24 ನವೆಂಬರ್ 2010 (18:04 IST)
ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿರುವ 'ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಬಗ್ಗೆ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಮಾತು ಮುಂದುವರಿಸಿದ ಅವರು ದ್ರಾವಿಡ್ ಅವರ ಮೂಲಕ ನಂ.3 ಕ್ರಮಾಂಕದಲ್ಲಿ ಹೆಚ್ಚು ಸ್ಥಿರತೆ ಕಾಪಾಡಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ ಕಿವೀಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ 191 ರನ್ ಗಳಿಸಿದ್ದ ದ್ರಾವಿಡ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರಾಗಿದ್ದರು. ಆ ಮೂಲಕ ಸರಣಿಯಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದ್ದರು. ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಬಿರುಸಿನ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಒದಗಿಸುತ್ತಾರೆ. ಇದಾರ ನಂತರ ಮೂರು ನಾಲ್ಕು ಕ್ರಮಾಂಕದಲ್ಲಿ ಕ್ರೀಸಿಗಿಳಿಯುವ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಜವಾಬ್ದಾರಿ ವಹಿಸುತ್ತಾರೆ. ಇವರಿಬ್ಬರು ಒದಗಿಸುವ ಸುಭದ್ರ ಇನ್ನಿಂಗ್ಸ್‌ನಿಂದಾಗಿ ಕೆಳ ಕ್ರಮಾಂಕದ ಆಟಗಾರರು ಕೂಡಾ ತಮ್ಮ ಪಾತ್ರ ನಿರ್ವಹಿಸಲು ನೆರವಾಗುತ್ತದೆ ಎಂದು ನಾಯಕ ನುಡಿದರು. ಅದೇ ಹೊತ್ತಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ಘೋಷಿಸಿರುವ ಮಂಡಳಿಯ ನಿಲುವನ್ನು ನಾಯಕ ಧೋನಿ ಸಮರ್ಥಿಸಿಕೊಂಡರು. ಹಾಗೆಯೇ ದಕ್ಷಿಣ ಆಫ್ರಿಕಾ ಸರಣಿಗಾಗಿ ಆಟಗಾರರನ್ನು ಅದರಲ್ಲೂ ಪ್ರಮುಖವಾಗಿ ಬ್ಯಾಟ್ಸ್‌ಮನ್‌ಗಳನ್ನು ಬೇಗನೇ ಕಳುಹಿಸಿಕೊಡಬೇಕು ಎಂಬುದನ್ನು ಧೋನಿ ಒತ್ತಿ ಹೇಳಿದರು. ಇದು ಖಂಡಿತವಾಗಿಯೂ ನೆರವಾಗಲಿದೆ. ಆ ಮೂಲಕ ಅಲ್ಲಿನ ಬೌನ್ಸಿ ಪಿಚ್ ವೈಖರಿಯ ಬಗ್ಗೆ ಸ್ಪಷ್ಟವಾಗಿ ಅರಿತುಕೊಳ್ಳಬಹುದಾಗಿದೆ ಎಂದವರು ಹೇಳಿದರು.ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ