Select Your Language

Notifications

webdunia
webdunia
webdunia
webdunia

ಕಿವೀಸ್ ಸರಣಿಯಲ್ಲಿ ಮಂಕಾದ ಸಚಿನ್; ದ್ರಾವಿಡ್ 199!

ಕಿವೀಸ್ ಸರಣಿಯಲ್ಲಿ ಮಂಕಾದ ಸಚಿನ್; ದ್ರಾವಿಡ್ 199!
ನಾಗ್ಪುರ , ಮಂಗಳವಾರ, 23 ನವೆಂಬರ್ 2010 (15:18 IST)
ಪ್ರಸಕ್ತ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು 1-0 ಅಂತರದಲ್ಲಿ ಗೆದ್ದುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. ಆದರೆ ವೈಯಕ್ತಿಕ ಪ್ರದರ್ಶನದತ್ತ ಗಮನ ಹಾಯಿಸಿದಾಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ಪಾಲಿಗಿದು ಹಿನ್ನಡೆಯ ಸರಣಿಯಾಗಿತ್ತು.

ಅಭಿಮಾನಿಗಳು ಭಾರಿ ಕಾತರದಿಂದ ಎದುರು ನೋಡುತ್ತಿದ್ದ ತಮ್ಮ 50ನೇ ಟೆಸ್ಟ್ ಶತಕ ಬಾರಿಸುವಲ್ಲಿ ಸಚಿನ್ ವಿಫಲರಾಗಿದ್ದರು. ಇದೀಗ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯ ವರೆಗೆ ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕಿವೀಸ್ ವಿರುದ್ಧದ ಏಕದಿನ ಸರಣಿಯ ನಂತರ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ. ಈ ಸಂದರ್ಭದಲ್ಲಿ ಸಚಿನ್ ಈ ಐತಿಹಾಸಿಕ ದಾಖಲೆ ಮಾಡುವ ಭರವಸೆಯಲ್ಲಿದ್ದಾರೆ.

ಕಿವೀಸ್ ವಿರುದ್ಧ ಅಹಮದಾಬಾದ್ ಮತ್ತು ಹೈದರಾಬಾದ್‌ನಲ್ಲಿ ನಡೆದ ಮೊದಲೆರಡು ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಸಚಿನ್ ನಾಗ್ಪುರದಲ್ಲಿ ಆಕರ್ಷಕ ಅರ್ಧಶತಕ ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅದನ್ನು ಶತಕವಾಗಿ ಮಾರ್ಪಡಿಸುವಲ್ಲಿ ವಿಫಲರಾಗಿದ್ದರು.

ದ್ರಾವಿಡ್ 199...
ಮತ್ತೊಂದೆಡೆ ಕ್ಯಾಚುಗಳ ದ್ವಿಶತಕ ಎದುರು ನೋಡುತ್ತಿದ್ದ ರಾಹುಲ್ ದ್ರಾವಿಡ್ ಕೂಡಾ ಈ ಸರಣಿಯಲ್ಲಿ ನಿರಾಸೆ ಅನುಭವಿಸುವಂತಾಗಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಕೇವಲ ಒಂದು ಕ್ಯಾಚ್ ಮಾತ್ರ ಪಡೆದಿರುವ ದ್ರಾವಿಡ್ ಸಂಖ್ಯೆಯನ್ನು 199ಕ್ಕೆ ಏರಿಸಿದ್ದಾರೆ. ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ದ್ರಾವಿಡ್ ಕೂಡಾ ಐತಿಹಾಸಿಕ ಸಾಧನೆ ಮಾಡುವ ಭರವಸೆಯಲ್ಲಿದ್ದಾರೆ.

ಕಿವೀಸ್ ವಿರುದ್ಧದ ಅಂತಿಮ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮಂಚಿದ್ದ ದ್ರಾವಿಡ್ 191 ರನ್ ಗಳಿಸಿದ್ದರಲ್ಲದೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆ ಮೂಲಕ ದ್ವಿಶತಕ ವಂಚಿತರಾಗಿದ್ದರೂ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಗೆಳ್ಳುವಲ್ಲಿ ಯಶಸ್ವಿಯಾಗಿದ್ದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

Share this Story:

Follow Webdunia kannada