Select Your Language

Notifications

webdunia
webdunia
webdunia
webdunia

ಭಜ್ಜಿ ಹೋರಾಟ ವ್ಯರ್ಥ: ಭಾರತಕ್ಕೆ ರೋಚಕ ಸೋಲು

ಭಜ್ಜಿ ಹೋರಾಟ ವ್ಯರ್ಥ: ಭಾರತಕ್ಕೆ ರೋಚಕ ಸೋಲು
ವಡೋದರಾ , ಭಾನುವಾರ, 25 ಅಕ್ಟೋಬರ್ 2009 (17:20 IST)
ಹರಭಜನ್‌ ಸಿಂಗ್ ಮತ್ತು ಪ್ರವೀಣ್ ಕುಮಾರ್ ಅವರ ದಿಟ್ಟ ಹೋರಾಟದ ನಡುವೆಯೂ ಭಾರತ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 4 ರನ್‌ಗಳಿಂದ ಸೋಲನುಭವಿಸಿದೆ.

ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಿ 293ರನ್ ಗಳ ಗೆಲುವಿನ ಗುರಿ ನೀಡಿತ್ತು. ಆದರೆ ಗಂಭೀರ್ (68) ಹೊರತುಪಡಿಸಿ ಭಾರತ ಅಗ್ರದಾಂಡಿಗರ ವೈಫಲ್ಯತೆಯಿಂದಾಗಿ ಆರಂಭದಲ್ಲಿ ಗರಿಷ್ಠ ಮೊತ್ತ ಪೇರಿಸುವಲ್ಲಿ ವಿಫಲವಾಯಿತು.

ಏಂಟನೇ ವಿಕೆಟ್ ಜೊತೆಯಾಟದಲ್ಲಿ ಹರಭಜನ್ ಸಿಂಗ್ (49) ಮತ್ತು ಪ್ರವೀಣ್ ಕುಮಾರ್(40*) ಅವರು 84 ರನ್‌ಗಳ ಜೊತೆಯಾಟವಾಡಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪಂದ್ಯವನ್ನು ರೋಚಕವಾಗಿಸಿದರು.

ತಂಡದ ಮತ್ತ 25 ರನ್‌ಗಳಿದ್ದಾಗ ವಿರೇಂದ್ರ ಸೆಹ್ವಾಗ್ (13)ರನ್ ಗಳಿಸಿದ್ದಾಗ ಬ್ರೆಟ್‌ ಲೀ ಬೌಲಿಂಗ್‌ನಲ್ಲಿ ಪೈನೆಗೆ ಕ್ಯಾಚ್ ನೀಡಿ ಔಟಾದರು. ಬ್ರೆಟ್‌ ಲೀ ಯವರ ಮೊದಲ ಓವರ್‌ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿ ಪ್ರೇಕ್ಷಕರಲ್ಲಿ ಆಸೆಮೂಡಿಸಿದ್ದರು. ಆದರೆ ಬ್ರೆಟ್ ಅವರ ಔಟ್ ಸ್ಪಿಂಗ್‌ ಬೌಲಿಂಗ್‌ಗೆ ಅನಾವಶ್ಯಕವಾಗಿ ಬಾರಿಸಲು ವಿಕೆಟ್ ಕಳೆದುಕೊಂಡರು.

ಆರಂಭದಿಂದಲೇ ಸಚಿನ್ ತೆಂಡೂಲ್ಕರ್ ಭರ್ಜರಿ ಆಟದ ಪ್ರದರ್ಶನ ನೀಡುವ ಮೂಡ್‌ನಲ್ಲಿರಲಿಲ್ಲ ಎಂದು ಭಾಸವಾಗುತ್ತಿತ್ತು.ಸಚಿನ್ ಕೇವಲ 14 ರನ್‌ಗಳಿಸಿದ್ದಾಗ ಶೇನ್ ವಾಟ್ಸನ್‌ ಅವರ ಬೌಲಿಂಗ್‌ನಲ್ಲಿ ಪಾಂಟಿಂಗ್‌ಗೆ ಕ್ಯಾಚ್ ನೀಡಿ ಔಟಾದರು.

ಭಾರತ ತಂಡದ ಮೊತ್ತ 21 ಓವರ್‌ಗಳಲ್ಲಿ 103ರ ನ್‌ಗಳಾಗಿದ್ದಾಗ ವಿರಾಟ್ ಕೊಹ್ಲಿಯನ್ನು ಕಳೆದುಕೊಂಡಿತು.ವೊಗ್ಸ್ ಬೌಲಿಂಗ್‌ನಲ್ಲಿ ಸಿಕ್ಸರ್ ಪೇರಿಸುವ ಯತ್ನದಲ್ಲಿ ಶೇನ್ ವಾಟ್ಸನ್‌ಗೆ ಕ್ಯಾಚ್ ನೀಡಿ ಔಟಾದರು.

ಗೌತಮ್ ಗಂಭೀರ್ 85 ಎಸೆತಗಳಲ್ಲಿ 1 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 68 ರನ್‌ಗಳಿಸಿ ಜಾನ್ಸನ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲೂ ಬಲೆಗೆ ಸಿಲುಕಿ ಔಟಾದರು.ಧೋನಿ (34) ಮತ್ತು ಗಂಭೀರ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.ರೈನಾ (9) ಜಡೇಜಾ (5)ರನ್ ಗಳಿಸಿ ಔಟಾದರು.

ಕೊನೆಯದಾಗಿ ಪ್ರವೀಣ್ ಕುಮಾರ್ (40*) ಮತ್ತು ಆಶೀಷ್ ನೆಹ್ರಾ(2*)ಅಜೇಯರಾಗಿ ಉಳಿದರು.

ವಾಟ್ಸನ್ ಮತ್ತು ಜಾನ್ಸನ್ ತಲಾ ಎರಡು ವಿಕೆಟ್ ಕಬಳಿಸಿದರೆ ಬ್ರೆಟ್‌ ಲೀ ಪೀಟರ್ ಸಿಡ್ಲೆ, ವೊಗ್ಸ್ ಮತ್ತು ಹುರಿಟ್ಜ್ ತಲಾ ಒಂದೊಂದು ವಿಕೆಟ್ ಪಡೆದರು.

ಮೈಕಲ್ ಹಸ್ಸಿ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.

ಇದಕ್ಕಿಂತ ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ, ಏಕದಿಸರಣಿಯ ಮೊದಲ ಪಂದ್ಯದಲ್ಲಿ ಪಾಂಟಿಂಗ್ (74) ಮತ್ತು ಮೈಕಲ್ ಹಸ್ಸಿಯವರ(73) ಭರ್ಜರಿ ಆಟದ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಿಗೆ 292 ರನ್‌ಗಳನ್ನು ಪೇರಿಸಿದೆ. ಭಾರತ ತಂಡದ ಗೆಲುವಿಗೆ 293 ರನ್‌ಗಳ ಸವಾಲನ್ನು ನೀಡಿದೆ.

ತಂಡದ ನಾಯಕ ರಿಕಿ ಪಾಂಟಿಂಗ್ ತಮ್ಮ ಎಂದಿನ ಬ್ಯಾಟಿಂಗ್ ಲಯವನ್ನು ಮುಂದುವರಿಸಿ 85 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು 8 ಬೌಂಡರಿಗಳೊಂದಿಗೆ 74 ರನ್‌ಗಳಿಸಿ ಜಡೇಜಾ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲೂ ಬಲೆಗೆ ಸಿಲುಕಿ ಔಟಾದರು.

ಮೈಕಲ್ ಹಸ್ಸಿ ಕೂಡಾ ಭರ್ಜರಿ ಹೊಡೆತಗಳಿಂದ ಭಾರತೀಯ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ 54 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿಗಳೊಂದಿಗೆ 73 ರನ್‌ಗಳನ್ನು ಪೇರಿಸಿ ಶರ್ಮಾ ಅವರ ಬೌಲಿಂಗ್‌ನಲ್ಲಿ ವಿರಾಟ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು.

ಪೈನೆ(50) ಮತ್ತು ಕ್ಯಾಮರೂನ್ ವೈಟ್ (51) ಕೂಡಾ ಉತ್ತಮ ಅರ್ಧಶತಕಗಳನ್ನು ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ನೆರವಾದರು.ಶೇನ್ ವಾಟ್ಸನ್ (5)ವೊಗ್ಸ್ (3) ಹೊಪ್ಸ್ (14) ಜಾನ್ಸನ್ (14) ಬ್ರೆಟ್‌ಲೀ (0)ರನ್‌ಗಳಿಗೆ ಔಟಾದರು.

ಧೋನಿ ಪಡೆ ಬೌಲರ್‌ಗಳಾದ ಇಶಾಂತ್ ಶರ್ಮಾ 10 ಓವರ್‌ಗಳ ಎಸೆತದಲ್ಲಿ 50 ರನ್‌ ನೀಡಿ ಮೂರು ವಿಕೆಟ್ ಕಬಳಿಸಿದರು. ಆಶೀಷ್ ನೆಹ್ರಾ 10 ಓವರ್‌ಗಳಲ್ಲಿ 58 ರನ್ ನೀಡಿ 2 ವಿಕೆಟ್ ಪಡೆದರು. ಹರಭಜನ್‌ಸಿಂಗ್ ಮತ್ತು ರವೀಂದ್ರ್ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

Share this Story:

Follow Webdunia kannada