Select Your Language

Notifications

webdunia
webdunia
webdunia
webdunia

ತಂಡಕ್ಕೆ ನಾನೇನೂ ಫೀಲ್ಡಿಂಗ್ ಕಲಿಸಿ ಕೊಡಬೇಕಿಲ್ಲ: ಯೂನಿಸ್

ತಂಡಕ್ಕೆ ನಾನೇನೂ ಫೀಲ್ಡಿಂಗ್ ಕಲಿಸಿ ಕೊಡಬೇಕಿಲ್ಲ: ಯೂನಿಸ್
ಕರಾಚಿ , ಮಂಗಳವಾರ, 9 ಜೂನ್ 2009 (16:13 IST)
ತಂಡದಲ್ಲಿನ ಕಳಪೆ ಮಟ್ಟದ ಕ್ಷೇತ್ರರಕ್ಷಣೆಗೆ ತಂಡದ ಆಟಗಾರರನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿರುವ ಪಾಕಿಸ್ತಾನ ನಾಯಕ ಯ‌ೂನಿಸ್ ಖಾನ್, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟಿಗರಿಗೆ ಈಗಲೂ ಫೀಲ್ಡಿಂಗ್ ಕುರಿತಾಗಿನ ಬಾಲಪಾಠಗಳನ್ನು ಹೇಳಿಕೊಡಬೇಕಿಲ್ಲ ಎಂದು ಕಿಡಿ ಕಾರಿದ್ದಾರೆ. ಮಾತು ಮುಂದುವರಿಸಿದ ಪಾಕ್ ಕಪ್ತಾನ, ಹಾಲಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಾದರೂ ಫೀಲ್ಡರುಗಳು ಉತ್ತಮ ಪ್ರದರ್ಶನ ನೀಡುವಂತೆ ಕರೆ ನೀಡಿದರು.

PTIPTI
ಪ್ರತಿಯೊಬ್ಬ ಆಟಗಾರನಿಗೂ ತಂಡದಲ್ಲಿ ತನ್ನದೇ ಆದ ಜವಾಬ್ದಾರಿಯಿದ್ದು, ಅದನ್ನು ಅರಿತು ಆಡುವಂತೆ ಯ‌ೂನಿಸ್ ತನ್ನ ಸಹ ಆಟಗಾರರಿಗೆ ಕಿವಿಮಾತು ನೀಡಿದರು.

ಟ್ವೆಂಟಿ-20 ವಿಶ್ವಕಪ್‌ನ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಪಾಕ್ ಆಟಗಾರರು ನಾಲ್ಕು ಕ್ಯಾಚ್‌ಗಳನ್ನೂ ಕೈಚೆಲ್ಲಿದ್ದಲ್ಲದೆ ಪಂದ್ಯದುದ್ದಕ್ಕೂ ಕಳಪೆ ಮಟ್ಟದ ಪ್ರದರ್ಶನವನ್ನು ನೀಡಿದ್ದು ಪಾಕ್ ಕಪ್ತಾನನ ಆಕ್ರೋಶಕ್ಕೆ ಪ್ರಮುಖ ಕಾರಣ.

ಪಾಕಿಸ್ತಾನದ ಮಾಜಿ ಆಟಗಾರರು ಹಾಗೂ ವಿಮರ್ಶಕರು ತಂಡದಲ್ಲಿನ ಕಳಪೆ ಕ್ಷೇತ್ರರಕ್ಷಣೆ ನಿವಾರಿಸಲು ನಾಯಕ ಇನ್ನೂ ಹೆಚ್ಚಿನ ಕಟ್ಟುನಿಟ್ಟಾದ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಮಾಜಿ ಆಟಗಾರರ ಇಂತಹ ಸಲಹೆಯನ್ನು ನಿರಾಕರಿಸಿದ ಯ‌ೂನಿಸ್, ಇದರಿಂದಾಗಿ ಸಯೀದ್ ಅಜ್ಮಲ್‌ರಂತಹ ಯುವ ಆಟಗಾರರ ಮೇಲೆ ಒತ್ತಡ ಬೀರಲಿದ್ದು, ಇದು ಸಹಜವಾಗಿ‌ಯೂ ಇನ್ನೂ ಹೆಚ್ಚಿನ ಕಳಪೆ ಆಟಕ್ಕೆ ದಾರಿಮಾಡಿಕೊಡಲಿದೆ ಎಂದರು.

Share this Story:

Follow Webdunia kannada