Select Your Language

Notifications

webdunia
webdunia
webdunia
webdunia

ಟ್ವೆಂಟಿ20 : ಭಾರತಕ್ಕೆ ಪಾಕ್ ವಿರುದ್ಧ 9 ವಿಕೆಟ್‌ಗಳ ಜಯ

ಟ್ವೆಂಟಿ20 : ಭಾರತಕ್ಕೆ ಪಾಕ್ ವಿರುದ್ಧ 9 ವಿಕೆಟ್‌ಗಳ ಜಯ
ಲಂಡನ್ , ಗುರುವಾರ, 4 ಜೂನ್ 2009 (09:17 IST)
ಟ್ವಿಂಟಿ-20 ವಿಶ್ವಕಪ್‌ ಆರಂಭಕ್ಕಿಂತ ಮೊದಲು ನಡೆದ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಭಾರತ ತಂಡ, ಬುಧವಾರ ನಡೆದ ಪಾಕ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ (80) ಹಾಗೂ ಗೌತಮ್ ಗಂಭೀರ್ (52) ಉತ್ತಮ ಆಟದ ಪ್ರದರ್ಶನದಿಂದಾಗಿ 9 ವಿಕೆಟ್‌ಗಳ ಜಯ ಗಳಿಸಿತು.

ಪಾಕಿಸ್ತಾನ ಭಾರತಕ್ಕೆ ನೀಡಿದ 159 ರನ್‌ಗಳ ಸವಾಲನ್ನು ಸ್ವೀಕರಿಸಿದ ಭಾರತ ತಂಡ ಆರಂಭಿಕ ಆಟಗಾರರಾದ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮಾ ವೇಗದ ಜೊತೆಯಾಟವಾಡಿ 140 ರನ್‌ಗಳನ್ನು ಪೇರಿಸಿ ಉತ್ತಮ ಅಡಿಪಾಯವನ್ನು ಹಾಕುವಲ್ಲಿ ಯಶಸ್ವಿಯದರು.

ಉಭಯ ಆರಂಭಿಕ ಆಟಗಾರರು, ಅಕ್ರಮಣಕಾರಿ ಆಟದೊಂದಿಗೆ ವೇಗದಿಂದ ರನ್‌ಗಳನ್ನು ಪೇರಿಸಿ ಎದುರಾಳಿ ತಂಡದ ಬೌಲರ್‌ಗಳನ್ನು ಮನಬಂದಂತೆ ಚಚ್ಚಿದರು. ಗೌತಮ್ ಗಂಭೀರ್ ಅವರನ್ನು ರನ್‌ ಔಟ್ ಮಾಡುವ ಸುಲಭ ಅವಕಾಶವನ್ನು ಪಾಕಿಸ್ತಾನದ ಆಟಗಾರರು ಕಳೆದುಕೊಂಡರು.

ರೋಹಿತ್ ಶರ್ಮಾ 37 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. 53 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ಸಹಾಯದಿಂದ 80 ರನ್‌ಗಳಿಸಿ ಆಮಿರ್ ಅವರ ಬೌಲಿಂಗ್‌ನಲ್ಲಿ ಶಹಜಾದ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು. ಉಭಯ ಆಟಗಾರರು 67 ಎಸೆತಗಳಲ್ಲಿ ಶತಕದ ಗಡಿಯನ್ನು ತಲುಪಿದರು.

ಗೌತಮ್ ಗಂಭೀರ್ 45 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ತಿಗೊಳಿಸಿದರು. 47 ಎಸೆತಗಳಲ್ಲಿ 52 ರನ್‌ಗಳನ್ನು ಕಲೆಹಾಕಿದರು. ಇನ್ನೂ ಮೂರು ಒವರ್‌ಗಳಿರುವಂತೆ ಭಾರತ ಪಾಕ್ ವಿರುದ್ಧ ಗೆಲುವು ಸಾಧಿಸಿತು. ತಂಡದ ನಾಯಕ ಮಹೇಂದ್ರ್ ಸಿಂಗ್ ಧೋನಿ ಒಂಬತ್ತು ರನ್‌ಗಳನ್ನು ಸೇರಿಸಿದ್ದರು.

ಪಾಕಿಸ್ತಾನ 45 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿರುವಾಗ ಮಿಸ್ಬಾ ಉಲ್ ಹಕ್ (37) ಹಾಗೂ ಯಾಸರ್ ಅರಾಫತ್ ‌ (25) ಕೇವಲ 25 ಎಸೆತಗಳಲ್ಲಿ 47 ರನ್‌ಗಳ ಜೊತೆಯಾಟ ಪಾಕ್ ತಂಡದ ಮೊತ್ತವನ್ನು 150 ರನ್‌ಗಳಿಗೆ ತಲುಪಿಸಲು ಸಹಕಾರಿಯಾಯಿತು.

ಆರಂಭಿದ ವಿಕೆಟ್‌ಗಳನ್ನು ಪಾಕಿಸ್ತಾನ ಬೇಗ ಕಳೆದುಕೊಂಡರೂ 4 ಒವರ್‌ಗಳಿಗೆ 45 ರನ್‌ಗಳನ್ನು ಪೇರಿಸಿ ಆಕ್ರಮಣಕಾರಿ ಪ್ರದರ್ಶನ ಆರಂಭಿಸಿತು. ಆದರೆ 45 ರನ್‌ಗಳ ಮೊತ್ತವಿರುವಾಗ ಅಹ್ಮದ್ ಶಹಾಜಾದ್ (25) ಯೂನುಸ್ ಖಾನ್ (32) ಅವರುಗಳ ವಿಕೆಟ್ ಕಳೆದುಕೊಂಡ ಪಾಕ್ ಸಂಕಟಕ್ಕೆ ಸಿಲುಕಿತು.ಮಿಸ್ಬಾ ಉಲ್ ಹಕ್ ಮತ್ತು ಅರಾಫತ್ ಅವರ ಜೊತೆಯಾಟದಿಂದ ಗೌರವ ಮೊತ್ತ ಪೇರಿಸುವಲ್ಲಿ ಪಾಕ್ ಯಶಸ್ವಿಯಾಯಿತು.

ಪಾಕಿಸ್ತಾನ ತಂಡದ ನಾಯಕ ಯುನೂಸ್ ಖಾನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಶಾಹಜೇಬ್ ಹಸನ್ ಮತ್ತು ಶಹಜಾದ್ ಅವರನ್ನು ಆರಂಭಿಕ ಆಟಗಾರರಾಗಿ ಕಳುಹಿಸಿಕೊಟ್ಟರು. ಆದರೆ ಹಸನ್ ಖಾತೆ ತೆರೆಯುವುದಕ್ಕಿಂತ ಮುಂಚೆ ಪ್ರವೀಣ್ ಕುಮಾರ್ ಬೌಲಿಂಗ್‌ನಲ್ಲಿ ಔಟಾಗಿ ಪೆವಿಲಿಯನ್‌ಗೆ ಮರಳಿದರು.

ಆರ್‍‌ ಪಿ.ಸಿಂಹ್ ಎಸೆತದಲ್ಲಿ ಶಹಜಾದ್ ನೀಡಿದ ಕ್ಯಾಚ್‌ ಹಿಡಿಯುವಲ್ಲಿ ವಿಫಲವಾಗಿ ಹರಭಜನ್ ಜೀವದಾನ ನೀಡಿದರು. ಆ ಸಮಯದಲ್ಲಿ ಶಹಾಜಾದ್ ಕೇವಲ 5 ರನ್‌ಗಳಿಸಿದ್ದರು. ನಂತರ ಭಾರತೀಯ ಬೌಲರ್‌ಗಳನ್ನು ದಂಡಿಸಿದ ಶಹಜಾದ್ 19 ಎಸೆತಗಳಿಗೆ 25 ರನ್‌ಗಳನ್ನು ಪೇರಿಸಿದರು.

ಶಹಜಾದ್ ಅವರ ಅಕ್ರಮಣಕಾರಿ ಆಟದಿಂದ ಪ್ರೇರಿತರಾದ ಕಮರಾನ್ ಅಕ್ಮಲ್ ಕೂಡಾ ಬಿರುಸಿನ ಆಟ ಆರಂಭಿಸಿದರು. ಆದರೆ ಸುರೇಶ್ ರೈನಾ ಅವರ ಉತ್ತಮ ಕ್ಷೇತ್ರರಕ್ಷಣೆಯಿಂದಾಗಿ ಕೇವಲ ಐದು ಎಸೆತಗಳಲ್ಲಿ ಪಾಕ್ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ರೈನಾ ಜಾಂಟಿ ರೋಡ್ಸ್‌ರಂತೆ ಹಿಡಿದ ಅದ್ಭುತ ಕ್ಷೇತ್ರರಕ್ಷಣೆ ಮಾಡಿ ಅಕ್ಮಲ್‌ರನ್ನು ರನ್ನೌಟ್ ಮಾಡುವಲ್ಲಿ ಯಶಸ್ವಿಯಾದರು ಇದೇ ಒವರ್‌ನ ಇಶಾಂತ್ ಅವರ ಬೌಲಿಂಗ್‌ನಲ್ಲಿ ಶಹಜಾದ್ ಅವರ ಕ್ಯಾಚ್ ಹಿಡಿದ ರೈನಾ, ಪಾಕ್ ಬೆನ್ನೆಲಬು ಮುರಿಯುವಲ್ಲಿ ಕನಿಕರ ತೋರಲಿಲ್ಲ.

ಇರ್ಫಾನ್ ಪಠಾಣ್ ಬೌಲಿಂಗ್‌ನಲ್ಲಿ ಶಾಹಿದ್ ಆಫ್ರಿದಿ ಭರ್ಜರಿ ಹೊಡೆತ ಬಾರಿಸಲು ಹೋಗಿ ಧೋನಿಗೆ ಕ್ಯಾಚ್ ನೀಡಿ ಶೂನ್ಯ ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು.

ಶೋಯಬ್ ಮಲಿಕ್ (14) ಆರಂಭದಲ್ಲಿ ಉತ್ತಮವಾಗಿ ಆಡುತ್ತಿದ್ದರು. ಆದರೆ ಪ್ರಜ್ಞಾ ಒಝಾ ಅವರ ಮೊದಲ ಓವರ್‌ನಲ್ಲಿಯೇ ಮಲಿಕ್ ಅವರ ವಿಕೆಟ್ ಪಡೆದುಕೊಂಡರು. ಈ ಸಂದರ್ಭದಲ್ಲಿ ಪಾಕಿಸ್ತಾನ ತಂಡ ಐದು ವಿಕೆಟ್‌ಗಳನ್ನು ಕಳೆದುಕೊಂಡು 63 ರನ್‍‌ಗಳಿಸಿತ್ತು.

ಯುನೂಸ್ ಮತ್ತ ಮಿಸ್ಬಾ 7.3 ಓವರ್‌ಗಳಲ್ಲಿ 50 ರನ್‌ಗಳಿಸಿದರು. ಹರಭಜನ್ ಯುನೂಸ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಮಿಸ್ಬಾ ಉಲ್ ಹಕ್ ಮತ್ತು ಅರಾಫತ್ ಅಂತಿಮ ಎರಡು ಓವರ್‌ಗಳಲ್ಲಿ ಆರ್‌ಪಿ ಸಿಂಗ್ ಮತ್ತು ಪ್ರವೀಣ್ ಕುಮಾರ್ ಅವರ ಎಸೆತಗಳಿಗೆ ಭರ್ಜರಿ ಹೊಡೆತಗಳನ್ನು ಬಾರಿಸಿ ಪಾಕ್ ತಂಡವನ್ನು 150 ರನ್‌ಗಳ ಗೌರವ ಮೊತ್ತಕ್ಕೆ ತಲುಪಿಸಿದರು.

Share this Story:

Follow Webdunia kannada