Select Your Language

Notifications

webdunia
webdunia
webdunia
webdunia

ಭಾರತಕ್ಕೆ ಗಗನಕುಸುಮವಾದ ವಿಶ್ವಕಪ್‌ ಫೈನಲ್‌

ವಿಂಡೀಸನ್ನು ಭಾರತ ಮಣಿಸಿದರೂ ಫೈನಲ್ ಪ್ರವೇಶ ಸಾಧ್ಯವಾಗಲಿಲ್ಲ

ಭಾರತಕ್ಕೆ ಗಗನಕುಸುಮವಾದ ವಿಶ್ವಕಪ್‌ ಫೈನಲ್‌
ಸಿಡ್ನಿ , ಗುರುವಾರ, 19 ಮಾರ್ಚ್ 2009 (12:19 IST)
ವಿಶ್ವಕಪ್ ಫೈನಲ್ ಪ್ರವೇಶದ ಬಗೆಗಿದ್ದ ನಿರೀಕ್ಷೆಗಳು ನಿಜವಾಗಿವೆ. ವೆಸ್ಟ್‌ಇಂಡೀಸ್ ತಂಡವನ್ನು ಭಾರತದ ವನಿತೆಯರು 8 ವಿಕೆಟ್‌ಗಳಿಂದ ಮಣಿಸಿದರೂ, ಅತ್ತ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ತಮ್ಮ ಎದುರಾಳಿಗಳಾದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಜಯ ದಾಖಲಿಸಿರುವುದರಿಂದ ಭಾರತ ಫೈನಲ್‌ ಪ್ರವೇಶ ಕನಸಾಗಿಯೇ ಉಳಿಯಿತು. ಫೈನಲ್‌ನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್‌ಗಳು ಕಾದಾಡಲಿದ್ದು, ಮ‌ೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಬೇಕಿದೆ.

ಇಂದಿನ ಕೊನೆಯ ಸೂಪರ್ ಸಿಕ್ಸ್ ಪಂದ್ಯಗಳಲ್ಲಿ ಭಾರತವು ವೆಸ್ಟ್‌ಇಂಡೀಸ್ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು. ಟಾಸ್ ಗೆದ್ದ ವೆಸ್ಟ್‌ಇಂಡೀಸ್ ನಿಗದಿತ 50 ಓವರು ಪೂರೈಸಲಾಗದೆ 44.4 ಓವರುಗಳಲ್ಲಿ 84ಕ್ಕೆ ಸರ್ವಪತನ ಕಂಡಿತು. ಇದನ್ನು ಬೆಂಬತ್ತಿದ ಭಾರತ ಕೇವಲ 17.5 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ 86 ರನ್ ಮಾಡಿ ಪಂದ್ಯವನ್ನು ಜಯಿಸಿತು.

ಆದರೆ ಅತ್ತ ನ್ಯೂಜಿಲೆಂಡ್ ವನಿತೆಯರು ಪಾಕಿಸ್ತಾನ ತಂಡವನ್ನು 223 ರನ್‌ಗಳ ಅಂತರದಿಂದ ಮಣಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್‌ಗಳನ್ನು ದಾಖಲಿಸಿತ್ತು. ಆದರೆ ಪಾಕಿಸ್ತಾನ 48.1 ಓವರುಗಳಲ್ಲಿ 150 ಗಳಿಸುವಷ್ಟರಲ್ಲಿ ಆಲೌಟಾಯಿತು.

ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ಜಯಗಳಿಸಬೇಕಿತ್ತು. ಆದರೆ ಆಸ್ಟ್ರೇಲಿಯಾವು 8 ವಿಕೆಟ್‌ಗಳ ಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 49.3 ಓವರುಗಳಲ್ಲಿ 161ಕ್ಕೆ ಸರ್ವಪತನ ಕಂಡಿತ್ತು. ಆಸ್ಟ್ರೇಲಿಯಾವು 33.5 ಓವರುಗಳಲ್ಲಿ 2 ವಿಕೆಟ್ ನಷ್ಟಕ್ಕೆ 163 ರನ್ ದಾಖಲಿಸಿತ್ತು.

ಭಾರತ ತಂಡವು ವೆಸ್ಟ್‌ಇಂಡೀಸ್ ಎದುರು ಭಾರೀ ಅಂತರದ ಜಯ ದಾಖಲಿಸಿದ್ದರೂ ಸಹ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಸೋಲದ ಕಾರಣ ಫೈನಲ್ ಪ್ರವೇಶ ಸಾಧ್ಯವಾಗಿಲ್ಲ. ಅಂಕಗಳ ಪಟ್ಟಿಯಲ್ಲಿ 8 ದಾಖಲಿಸಿರುವ ನ್ಯೂಜಿಲೆಂಡ್ ಸುಲಭವಾಗಿ ಫೈನಲ್ ಪ್ರವೇಶಿಸಿದೆ. ತಲಾ 6 ಅಂಕಗಳನ್ನು ಗಳಿಸಿರುವ ಭಾರತ ಮತ್ತು ಆಸ್ಟ್ರೇಲಿಯಾಗಳು ಮ‌ೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಹಾಗೂ ಪಾಕಿಸ್ತಾನ ಮತ್ತು ವೆಸ್ಟ್‌ಇಂಡೀಸ್‌ಗಳು ಐದು ಮತ್ತು ಆರನೇ ಸ್ಥಾನಕ್ಕಾಗಿ ಮಾರ್ಚ್ 21ರಂದು ಹೋರಾಡಲಿವೆ. ಫೈನಲ್ ಮಾರ್ಚ್ 22ರಂದು ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ.

ಕೊನೆಯ ಸೂಪರ್ ಸಿಕ್ಸ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ವೆಸ್ಟ್‌ಇಂಡೀಸ್ ಪರ ಯಾರೊಬ್ಬರೂ ಅರ್ಧಶತಕದ ಹತ್ತಿರ ಸುಳಿಯಲಿಲ್ಲ. ಮೆರಿಸ್ಸಾ ಅಗ್ಯುಲೇರಾ, ಚಾರ್ಲೆನ್ ಟೈಟ್, ದಿಯೇಂದ್ರಾ ಡಾಟಿನ್, ಕಿರ್ಬಿನಾ ಅಲೆಕ್ಸಾಂಡರ್ ಮತ್ತು ಡೇನಿಯಲ್ ಸ್ಮಾಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರೆ, ಶಾನೆಲ್ ಡಾಲೇ 4, ಶಕೀರಾ ಸೆಲ್ಮಾನ್ 2 ರನ್ ಗಳಿಸಲಷ್ಟೇ ಶಕ್ತರಾದರು. ಸ್ಟಾಫೆನಿ ಟೇಲರ್ (29), ಪಮೇಲಾ ಲಾವಿನ್ (20), ಕಾರ್ಡೆಲ್ ಜಾಕ್ (11) ಮತ್ತು ಡೆಬಿ ಅನ್ನಾ ಲೇವಿಸ್ (12) ಹತ್ತರ ಗಡಿ ದಾಟಿದವರು. ಒಟ್ಟಾರೆ 44.4 ಓವರುಗಳಲ್ಲಿ 84 ರನ್ ಗಳಿಸಿದ್ದ ವಿಂಡೀಸ್ ಸರ್ವಪತನ ಕಂಡಿತ್ತು. ಭಾರತದ ಪರ ಪ್ರಿಯಾಂಕ ರಾಯ್ 4 ವಿಕೆಟ್ ಪಡೆದು ಮಿಂಚಿದ್ದಾರೆ. ಉಳಿಂದೆ ಅಮಿತಾ ಶರ್ಮಾ 2, ರುಮೇಲಿ ಧಾರ್, ಗೌಹರ್ ಸುಲ್ತಾನ ಮತ್ತು ಪೂನಮ್ ರಾವುತ್ ತಲಾ ಒಂದೊಂದು ವಿಕೆಟ್ ಪಡೆದರು.

ಭಾರತದ ಪರ ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಸುಲಕ್ಷಣಾ ನಾಯ್ಕ್ 39 ಹಾಗೂ 34 ರನ್ ಗಳಿಸಿದ ಮಿಥಾಲಿ ರಾಜ್ ಅಜೇಯರಾಗುಳಿದು ತಂಡವನ್ನು ಗೆಲುವಿನ ದಡ ಹತ್ತಿಸಿದ್ದಾರೆ. ಅಂಜುಮ್ ಛೋಪ್ರಾ 3 ಮತ್ತು ಪೂನಮ್ ರಾವುದ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡಿದ್ದರು. ಒಟ್ಟಾರೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ 17.5 ಓವರುಗಳಲ್ಲಿ 86 ರನ್ ದಾಖಲಿಸಿತ್ತು.

Share this Story:

Follow Webdunia kannada