Select Your Language

Notifications

webdunia
webdunia
webdunia
webdunia

ಸೆಹ್ವಾಗ್ ತ್ರಿಶತಕ: ಚೆನ್ನೈಯಲ್ಲಿ ರನ್ ಮಳೆ

ಸೆಹ್ವಾಗ್ ತ್ರಿಶತಕ: ಚೆನ್ನೈಯಲ್ಲಿ ರನ್ ಮಳೆ
ಚೆನ್ನೈ , ಶುಕ್ರವಾರ, 28 ಮಾರ್ಚ್ 2008 (18:10 IST)
ಆಕರ್ಷಕ ತ್ರಿಶತಕ, ಬಾಲ್‌ಗಳಿಗಿಂತಲೂ ಪೇರಿಸಿದ ರನ್‌ಗಳೇ ಹೆಚ್ಚು ಇದು ವೀರೇಂದ್ರ ಸೆಹವಾಗ್ ಭಾರತದ ಪರವಾಗಿ ದಕ್ಷಿಣ ಆಫ್ರಿಕದ ಸವಾಲಿಗೆ ನೀಡಿದ ಪ್ರತ್ತ್ಯುತ್ತರ ಕೇಂದ್ರಬಿಂದು ಮೂರನೆ ದಿನದಾಟ ಮುಗಿದಾಗ ಟೀಮ್ ಇಂಡಿಯಾ ಒಂದು ವಿಕೆಟ್ ಕಳೆದುಕೊಂಡು 468 ರನ್ ಮಾಡಿದೆ. ತ್ರಿಶತಕ ವೀರ ವೀರೇಂದ್ರ ಸೆಹವಾಗ್ ಅವರು ಮುಲ್ತಾನ್‌ನಲ್ಲಿ ಗಳಿಸಿದ 309 ರನ್‌ಗಳಿಗೆ ದಿನದ ಆಟ ನಿಂತಿದೆ ವಿನಃ ವೀರೂ ಅವರ ರನ್ ದಾಹ ತೀರಿಸಿಕೊಳ್ಳಲು ಅವಕಾಶ ಇದೆ.

ದಿನದಾಟ ಮುಗಿದಾಗ ಭಾರತದ ಸ್ಕೋರಿನಲ್ಲಿ ಸೆಹ್ವಾಗ್ ಆಟದಿಂದಲೇ ಅರ್ಧಕ್ಕಿಂತಲೂ ಹೆಚ್ಚು ರನ್ ಬಂದಿದ್ದು, ಕ್ರೀಸಿಗೆ ಬಂದಿರುವ ಈರ್ವರು ಬ್ಯಾಟ್ಸ್‌ಮನ್‌ಗಳು 159 ರನ್ ಮಾಡಿದ್ದಾರೆ.

82 ರನ್‌ಗಳನ್ನು ಖಾತೆಯಲ್ಲಿ ಇರಿಸಿಕೊಂಡು ಮೂರನೆ ದಿನದಾಟ ಆರಂಭಿಸಿದ ವಾಸೀಂ ಜಾಫರ್ ಮತ್ತು ವೀರೇಂದ್ರ ಸೆಹವಾಗ್ ಜೋಡಿಯು 213 ರನ್‌ ಮಾಡಿ ಭೋಜನ ವಿರಾಮದ ನಂತರ ಬೇರ್ಪಟ್ಟಿತು. ವೀರೇಂದ್ರ ಸೆಹವಾಗ್ ಆರ್ಭಟಕ್ಕೆ ಬೆಂಬಲವಾಗಿ ನಿಂತ ವಾಸೀಂ ಜಾಫರ್ ಪಾಲ್ ಹ್ಯಾರಿಸ್ ಬೌಲಿಂಗ್‌ನಲ್ಲಿ ಜಾಕ್ ಕಾಲಿಸ್‌ಗೆ ಕ್ಯಾಚ್ ನೀಡಿ ಔಟಾಗುವ ಮುನ್ನ 73 ರನ್ ಮಾಡಿ ಪೆವಿಲಿಯನ್‌ಗೆ ಮರಳಿದರು.

ಪ್ರಾರಂಭದಿಂದ ಕೊಂಚ ನಿದಾನವಾಗಿ ಆಡುತ್ತಿದ್ದ ವಿರೇಂದ್ರ ಸೆಹ್ವಾಗ್, ಭೋಜನ ವಿರಾಮದ ನಂತರ ತಮ್ಮ ಆಟದ ಶೈಲಿಯನ್ನು ಪೂರ್ಣವಾಗಿ ಬದಲಾಯಿಸಿಕೊಂಡರು. ಡೆಲ್ ಸ್ಟೇಯ್ನ್, ದಕ್ಷಿಣ ಆಫ್ರಿಕದ ಪ್ರತಿಭಾನ್ವಿತ ವೇಗದ ಬೌಲರ್ ಎದುರಾಳಿ ತಂಡವನ್ನು ಅದರಲ್ಲೂ ವೀರೇಂದ್ರ ಸೆಹವಾಗ್ ಅವರನ್ನು ಕಟ್ಟಿ ಹಾಕುವುದಕ್ಕೆ ಮಾಡಿದ ಪ್ರಯತ್ನ ಪೂರ್ಣವಾಗಿ ವಿಫಲಗೊಂಡಿತು. ನಿರಾಶಗೊಂಡ ಸ್ಟೇಯ್ನ್ ಅಂತಿಮವಾಗಿ ಸ್ಲಿಪ್‌ನಲ್ಲಿ ಕ್ಷೇತ್ರ ರಕ್ಷಕರು ಇಲ್ಲದೇ ಬೌಲಿಂಗ್ ಮಾಡಿ ಆದಷ್ಟೂ ಬೌಂಡರಿ ಉಳಿಸುವ ಪ್ರಯತ್ನಕ್ಕೆ ಕೈಹಾಕಿದರು ಆದರೆ ಆ ತಂತ್ರ ಕೂಡ ಭಾರತೀಯ ಬ್ಯಾಟ್ಸ್‌ಮನ್‌ಗಳ ಎದುರು ಫಲ ನೀಡಲಿಲ್ಲ.

ಜಾಫರ್ ಪೆವಿಲಿಯನ್‌ಗೆ ಮರಳಿದ ನಂತರ ಕ್ರೀಸಿಗೆ ಬಂದಿಳಿದ ದ್ರಾವಿಡ್ ಆತುರಕ್ಕೆ ಕೈಹಾಕುವ ಪ್ರಯತ್ನ ಮಾಡದೇ ಆಕ್ರಮಣಕಾರಿ ಆಟವನ್ನು ಸೆಹ್ವಾಗ್‌ಗೆ ಬಿಟ್ಟುಕೊಟ್ಟು ಅವಕಾಶ ಸಿಕ್ಕಿದ ಸಂದರ್ಭದಲ್ಲಿ ಒಂದೇರಡು ಮತ್ತು ಬೌಂಡರಿ ಹೆಕ್ಕುತ್ತ ಸಾಗಿ ಎಂಟು ಬೌಂಡರಿಗಳೊಂದಿಗೆ 65 ರನ್‌ಗಳನ್ನು ದಿನದ ಅಂತ್ಯಕ್ಕೆ ಗಳಿಸಿದರು.

Share this Story:

Follow Webdunia kannada