ಆಸ್ಟ್ರೇಲಿಯ ವಿರುದ್ಧ ನಡೆದ ಮೊದಲ ಫೈನಲ್ ಪಂದ್ಯದ ಸಮಯದಲ್ಲಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಪ್ರೇಕ್ಷಕರನ್ನು ಕೋತಿಯ ಹಾವ ಭಾವ ಪ್ರದರ್ಶಿಸಿ ಅಣಕಿಸಿದರು ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿದ್ದು. ಆದರೆ ಈ ಕುರಿತು ಆಸ್ಟ್ರೇಲಿಯದ ಕ್ರಿಕೆಟ್ ಪ್ರೇಕ್ಷಕರಾಗಲಿ. ಅಧಿಕಾರಗಳಾಗಲಿ ದೂರು ಸಲ್ಲಿಸಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಭಾರತೀಯ ಪ್ರವಾಸಕ್ಕೆ ಬಂದಿದ್ದ ಆಂಡ್ರ್ಯೂ ಸೈಮಂಡ್ಸ್ ಅವರನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಣಕಿಸಿದ ರೀತಿಯಲ್ಲಿ ಹರ್ಭಜನ್ ಸಿಂಗ್ ಅವರು ಆಸ್ಟ್ರೇಲಿಯದ ಪ್ರೇಕ್ಷಕರನ್ನು ಉದ್ದೇಶಿಸಿ ಅಣಕಿಸುತ್ತಿರುವ ಸಮಯದಲ್ಲಿ ಛಾಯಾ ಚಿತ್ರಕಾರರು ಫೋಟೊ ತೆಗೆದಿದ್ದಾರೆ.
ಹರ್ಭಜನ್‌ಸಿಂಗ್ ವಿರುದ್ಧ ಮಾಡಲಾಗಿರುವ ಜನಾಂಗೀಯ ನಿಂದನೆಯ ಆರೋಪ ಸಾಬೀತಾದಲ್ಲಿ ಐಸಿಸಿಯ ನಿಯಮಾವಳಿ 3.3 ರಡಿಯಲ್ಲಿ ಪಂದ್ಯ ನಿಷೇಧಕ್ಕೆ ಗುರಿಯಾಗಬೇಕಾಗುತ್ತದೆ. ಆಂಡ್ರ್ಯೂ ಸೈಮಂಡ್ಸ್ ಮತ್ತು ಭಜ್ಜಿ ನಡುವೆ ಉಂಟಾದ ವಿವಾದದ ಸಮಯದಲ್ಲಿ ಐಸಿಸಿ ಇದೇ ನಿಯಮದ ಅಡಿಯಲ್ಲಿ ಶಿಸ್ತು ಕ್ರಮ ಜರುಗಿಸಿತ್ತು.