ಆಕ್ರಮಣಕಾರಿ ಬ್ಯಾಟ್ಸ್‌ಮನ್ ಹಬೀಬುಲ್ ಬಶರ್ 2004ರಲ್ಲಿ ಕಾಲಿದ್ ಮಹ್ಮೂದ್ ಅವರ ಬಳಿಕ ಬಾಂಗ್ಲಾ ತಂಡದ ನಾಯಕತ್ವ ವಹಿಸಿದ್ದಾರೆ.
ನಾತ್‌ವೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ವಿಕೆಟ್ ಗೆಲುವು ಅವರ ನಾಯಕತ್ವದಲ್ಲಿನ ಮಹಾಗೆಲುವು ಎಂದು ಬಣ್ಣಿಸಲ್ಪಟ್ಟಿದೆ. 2006ರಲ್ಲಿನ ಚಾಂಪಿಯನ್ ಟ್ರೋಪಿಯ ನಿರಾಸಾದಾಯಕ ಪ್ರದರ್ಶನದ ಬಳಿಕ ಜಿಂಬಾಂಬ್ವೆ ಮತ್ತು ಸ್ಕಾಟ್‌ಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಗೆದ್ದಿದ್ದರು.
2007ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಪರ್ ಏಯ್ಟ್ ಹಂತಕ್ಕೆ ತಂಡವನ್ನು ಒಯ್ದಿದ್ದಾರೆ.