ಆಸ್ಟ್ರೇಲಿಯ ತಂಡದ ನಾಯಕ ರಿಕಿ ಪಾಂಟಿಂಗ್ ತನ್ನ 17ರ ಹರೆಯದಲ್ಲೇ ಬ್ಯಾಟ್ ಬೀಸಲಾರಂಭಿಸಿದವರು.
ಈ ಆಕ್ರಮಣಕಾರಿ ಬ್ಯಾಟ್ಸ್‌ಮನ್ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 96 ರನ್ ಬಾರಿಸಿದ್ದರು. ತಾಸ್ಮಾನಿಯಾದಲ್ಲಿ 1974ರ ಡಿಸೆಂಬರ್ 19ರಂದು ಜನಿಸಿದ ಪಾಂಟಿಂಗ್ ಸ್ಟೀವ್ ವಾ ಅವರ ಉತ್ತರಾಧಿಕಾರಿಯಾಗಲು ಶೇನ್ ವಾರ್ನ್ ಮತ್ತು ಆಡಂ ಗಿಲ್ ಕ್ರಿಸ್ಟ್ ಅವರಿಂದ ಸ್ಪರ್ಧೆ ಎದುರಿಸಿದ್ದರು.
2003ರ ಮತ್ತು 2007ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇವರ ನೇತೃತ್ವದಲ್ಲಿ ತಂಡ ಕಪ್ ಗೆದ್ದಿದೆ.