ಹನ್ನೊಂದು ಮಕ್ಕಳ ತುಂಬು ಕುಟುಂಬದಲ್ಲಿ ಜನಿಸಿದ ಬ್ರಿಯಾನ್ ಲಾರ ಹಾರ್ವರ್ಡ್ ಕೋಚಿಂಗ್ ಕ್ಲಿನಿಕ್‌ನಲ್ಲಿ ಕ್ರಿಕೆಟ್ ಎಬಿಸಿಡಿ ಕಲಿತರು.
ಆರಂಭದ ಶಾಲಾ ದಿನಗಳಲ್ಲಿ ಫುಟ್‌ಬಾಲ್ ಮತ್ತು ಟೇಬಲ್ ಟೆನಿಸ್ ಆಡುತ್ತಿದ್ದ ಈ ಹುಡುಗ ನಂತರ ಕ್ರಿಕೆಟ್‌ನತ್ತ ಮುಖಮಾಡಿದವರು. 1969ರ ಮೇ 2ರಂದು ಜನಿಸಿದ ಲಾರ ತನ್ನ 14ರ ಹರೆಯದಲ್ಲಿ 745 ರನ್ ಗಳಿಸಿ ಟ್ರಿನಿಡಾಡ್‌ನ 16ರ ಹರೆಯದ ಕೆಳಗಿನ ತಂಡಕ್ಕೆ ಆಯ್ಕೆಯಾದರು.
ತದ ನಂತರ ಹಿಂತಿರುಗಿ ನೋಡದ ಈ ಕ್ರಿಕೆಟಿಗ ತನ್ನ ಅದ್ಭುತ ಬ್ಯಾಟಿಂಗ್ ಶೈಲಿಯಿಂದ ಕ್ರಿಕೆಟ್ ಪ್ರಿಯರ ಮನದಲ್ಲಿ ಅಚ್ಚಳಿಯದೆ ನಿಂತಿದ್ದಾರೆ.