ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯದ ಆಡಳಿತಕ್ಕೆ ದಿಕ್ಸೂಚಿಯಲ್ಲ: ಸಿಎಂ
, ಶನಿವಾರ, 19 ಏಪ್ರಿಲ್ 2014 (16:37 IST)
ಕೃಷ್ಣಗಿರಿ: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಕನಿಷ್ಠ 20 ಸ್ಥಾನಗಳಲ್ಲಿ ಗೆಲವು ಗಳಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಶನಿವಾರ ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ಚುನಾವಣೆ ಫಲಿತಾಂಶ ರಾಜ್ಯದ ಆಡಳಿತಕ್ಕೆ ದಿಕ್ಸೂಚಿಯಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು. ಸಿಎಂ ಸ್ಥಾನದಿಂದ ಕೆಳಗಿಳಿಸುವುದಾಗಿ ಯಾವ ಎಚ್ಚರಿಕೆಯನ್ನೂ ತಮಗೆ ನೀಡಲಾಗಿಲ್ಲ. ಕೃಷ್ಣಗಿರಿ ಸೇರಿ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯದಿದ್ದರೆ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆಂದು ಸಿಎಂಗೆ ಹೈಕಮಾಂಡ್ ಎಚ್ಚರಿಸಿದೆಯೆಂಬ ಊಹಾಪೋಹಗಳು ಹರಡಿತ್ತು. ಆದರೆ ಈರೀತಿ ಯಾವುದೇ ಎಚ್ಚರಿಕೆಯನ್ನು ನೀಡಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.