Select Your Language

Notifications

webdunia
webdunia
webdunia
webdunia

ಬಸ್ ದುರಂತ: ಮೃತದೇಹಗಳ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ

ಬಸ್ ದುರಂತ: ಮೃತದೇಹಗಳ ಗುರುತು ಪತ್ತೆಗೆ ಡಿಎನ್‌ಎ ಪರೀಕ್ಷೆ
, ಬುಧವಾರ, 16 ಏಪ್ರಿಲ್ 2014 (12:14 IST)
PR
PR
ಚಿತ್ರದುರ್ಗ:ರಾಜ್ಯದಲ್ಲಿ ಇತ್ತೀಚೆಗೆ ಈ ರೀತಿಯ ಅಪಘಾತಗಳು ನಡೆಯುತ್ತಿರುವುದು ದುಃಖದ ಸಂಗತಿಯಾಗಿದ್ದು, ಇದಕ್ಕೇನಾದರೂ ಪರಿಹಾರ ಕಂಡುಹಿಡಿಯಬೇಕು ಎಂದು ಸಚಿವ ಎಚ್. ಆಂಜನೇಯ ಹೇಳಿದ್ದಾರೆ. ಬಸ್ ದುರಂತದ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಇನ್ನು ಮೇಲೆ ಎಲ್ಲಾ ಬಸ್ಸುಗಳು ನಿರ್ಗಮಿಸುವ ಮುಂಚೆ ತಪಾಸಣೆ ಮಾಡಿ ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳುವುದು ಸೂಕ್ತವೆಂದು ತಮಗೆ ಅನಿಸುತ್ತಿದೆ ಎಂದು ಆಂಜನೇಯ ಹೇಳಿದರು. ಈ ನಡುವೆ ಬಸ್ಸಿಗೆ ಬೆಂಕಿಹೊತ್ತಿಕೊಂಡು ಮೃತಪಟ್ಟವರ ಶವಗಳನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಇರಿಸಲಾಗುತ್ತದೆ.

ಮೃತದೇಹಗಳು ಸುಟ್ಟು ಕರಕಲಾಗಿರುವುದರಿಂದ ಅವುಗಳನ್ನು ಗುರುತಿಸುವುದಕ್ಕೆ ಡಿಎನ್‌ಎ ಪರೀಕ್ಷೆ ಮಾಡಬೇಕಾಗಿದೆ. ಚಾಲಕನ ಅಜಾಗರೂಕತೆ ಮತ್ತು ಅವೈಜ್ಞಾನಿಕವಾಗಿ ಸಾಗಿಸುವ ದಹನಕಾರಿ ವಸ್ತುಗಳು ಈ ಅಪಘಾತಗಳಿಗೆ ಕಾರಣವೆಂದು ಹೇಳಲಾಗುತ್ತಿದೆ. ಈ ಬಸ್ ಅಶೋಕ ಲೇಲ್ಯಾಂಡ್ ಕಂಪನಿಗೆ ಸೇರಿದ್ದು, ಬಸ್ಸಿಗೆ ಎಕ್ಸಿಟ್ ಡೋರ್ ಕೂಡ ಇರಲಿಲ್ಲವೆಂದು ಹೇಳಲಾಗಿದೆ. ಬಸ್‌ಗೆ ಬೆಂಕಿ ಹತ್ತಿಕೊಳ್ಳಲು ಒಳಗಡೆ ಇರಿಸಿದ್ದ ಬೀಡಿಕಟ್ಟುಗಳು ಕೂಡ ಕಾರಣವೆಂದು ದೂರಲಾಗುತ್ತಿದೆ. ಆದರೆ ಟೈರ್ ಸ್ಫೋಟಗೊಂಡ ನಂತರ ಬೆಂಕಿಹತ್ತಿಕೊಂಡಿತೆಂದು ಕೆಲವರು ಹೇಳುತ್ತಿದ್ದಾರೆ. ಆದರೆ ಬೆಂಕಿಹೊತ್ತಿಕೊಳ್ಳಲು ಸ್ಪಷ್ಟವಾದ ಕಾರಣವೇನೆಂದು ತನಿಖೆಯ ನಂತರವೇ ಗೊತ್ತಾಗಲಿದೆ.

Share this Story:

Follow Webdunia kannada