ದಾರಿ ತಪ್ಪಿದ ರೈಲು: ಎರ್ನಾಕುಲಂ ಪ್ರಯಾಣಿಕರ ಪರದಾಟ
, ಮಂಗಳವಾರ, 15 ಏಪ್ರಿಲ್ 2014 (14:48 IST)
ಗುಲ್ಬರ್ಗ:ಓಕಾದಿಂದ ಎರ್ನಾಕುಲಂಗೆ ಹೊರಟಿದ್ದ ರೈಲು ದಾರಿ ತಪ್ಪಿ ಗುಲ್ಬರ್ಗಕ್ಕೆ ಆಗಮಿಸಿದ ಘಟನೆ ನಡೆದಿದೆ. ಗುಜರಾತ್ ಓಕಾದಿಂದ ಕೇರಳದ ಎರ್ನಾಕುಲಂಗೆ ತೆರಳುತ್ತಿದ್ದ ರೈಲು ಮಾರ್ಗ ತಪ್ಪಿ ಬೇರೆ ಮಾರ್ಗದಲ್ಲಿ ಸಂಚರಿಸಿ ಗುಲ್ಬರ್ಗಕ್ಕೆ ತೆರಳಿತು. ತುರ್ತು ಕೆಲಸಕ್ಕೆ ಕೇರಳಕ್ಕೆ ತೆರಳಬೇಕಿದ್ದ ಪ್ರಯಾಣಿಕರು ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದರು. ಚಾಲಕನ ಅಚಾತುರ್ಯದಿಂದ ಮಾರ್ಗ ಬದಲಾಯಿಸಿ ಗುಲ್ಬರ್ಗ ನಿಲ್ದಾಣಕ್ಕೆ ರೈಲು ಬಂದುನಿಂತಿದೆ.ಮಹಾರಾಷ್ಟ್ರದ ಬಳಿ ರೈಲೊಂದು ಹಳಿ ತಪ್ಪಿನಿಂತಿದ್ದರಿಂದ ಚಾಲಕ ರೈಲಿನ ಹಳಿಯನ್ನು ಬದಲಾಯಿಸಿದ್ದರಿಂದ ಈ ಅಚಾತುರ್ಯ ನಡೆದಿರುವುದಾಗಿ ಚಾಲಕ ತಿಳಿಸಿದ್ದಾನೆ. ಗುಲ್ಬರ್ಗದಿಂದ ಸುಮಾರು 300 ಕಿಮೀ ಮತ್ತೆ ಪ್ರಯಾಣಿಸಿ ಎರ್ನಾಕುಲಂ ತಲುಪಬೇಕಿದೆ.