ಕೋಲಾರಕ್ಕೆ ಮುನಿಯಪ್ಪ ಏನೂ ಮಾಡಿಲ್ಲ, ಮೋದಿ ಸರ್ಕಾರ ಬರ್ಬೇಕು: ಪವನ್ ಕಲ್ಯಾಣ್
, ಮಂಗಳವಾರ, 15 ಏಪ್ರಿಲ್ 2014 (12:21 IST)
ಕಾಂಗ್ರೆಸ್ ಪ್ರಭುತ್ವದ ಮೇಲೆ ತಮಗೆ ವ್ಯಕ್ತಿಗತ ದ್ವೇಷ ಇಲ್ಲ. ಆಂಧ್ರ ಛಿದ್ರವಾಗಲು ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ ಎಂದು ಎಂ. ನಾರಾಯಣ ಸ್ವಾಮಿ ಪರ ಕೋಲಾರದಲ್ಲಿ ಚುನಾವಣೆ ಪ್ರಚಾರ ಮಾಡುತ್ತಾ ತೆಲುಗು ಚಿತ್ರನಟ ಪವನ್ ಕಲ್ಯಾಣ್ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ವಿರುದ್ಧ ಪವನ್ ವಾಗ್ದಾಳಿ ಮಾಡುತ್ತಾ,. ಕೋಲಾರದಲ್ಲಿ ಈಗಲೂ ಫ್ಲೋರೈಡ್ ಯುಕ್ತ ನೀರು ಕುಡಿಯುವ ಸ್ಥಿತಿಯಿದೆ. ಲಕ್ಷಾಂತರ ಜನರಿಗೆ ಕಾಂಗ್ರೆಸ್ ಏನ್ಮಾಡಿದೆ. ಕೋಲಾರ ಕ್ಷೇತ್ರಕ್ಕೆ ಮುನಿಯಪ್ಪ ಕೊಡುಗೆ ಏನೂ ಇಲ್ಲ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಏಕೀಕೃತ ಮನೋಭಾವನೆಯನ್ನು ಪವನ್ ಶ್ಲಾಘಿಸಿದರು. ಕರ್ನಾಟಕದಲ್ಲಿ ಬಹುಭಾಷೆಗಳಿದ್ದರೂ ಏಕತೆ ಇದೆ. ಆಂಧ್ರದಲ್ಲಿ ಒಂದೇ ಭಾಷೆಯಿದ್ದರೂ ಐಕ್ಯತೆ ಇಲ್ಲ ಎಂದು ಪವನ್ ಹೇಳಿದರು. ನರೇಂದ್ರ ಮೋದಿಯನ್ನು ಹೊಗಳಿದ ಪವನ್, ದೇಶ ಕಾಯಲು ಒಬ್ಬ ಬಲವಾದ ನಾಯಕ ಬೇಕು. ಅದಕ್ಕಾಗಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ನಾನು ಬೆಂಬಲ ನೀಡಿದ್ದೇನೆ. ಗಬ್ಬರ್ ಸಿಂಗ್ ಶೂಟಿಂಗ್‌ಗಾಗಿ ನಾನು ಗುಜರಾತಿಗೆ ಹೋಗಿದ್ದೆ. ಮೋದಿ ಎಂತ ನಾಯಕ ಎಂದು ಅಲ್ಲಿನ ಹೊಟೆಲ್ ಮುಸ್ಲಿಂ ಉದ್ಯಮಿ ವಿವರಿಸಿದ್ದರು ಎಂದು ಪವನ್ ಹೇಳಿದರು.