Select Your Language

Notifications

webdunia
webdunia
webdunia
webdunia

ಬಿಜೆಪಿಗೂ ನನಗೂ ಯಾವುದೇ ಸಂಬಂಧವಿಲ್ಲ: ಯಡ್ಡಿ

ಬಿಜೆಪಿಗೂ ನನಗೂ ಯಾವುದೇ ಸಂಬಂಧವಿಲ್ಲ: ಯಡ್ಡಿ
ಬೆಂಗಳೂರು , ಬುಧವಾರ, 31 ಅಕ್ಟೋಬರ್ 2012 (12:15 IST)
PR
ನಾನಂತೂ ಬಿಜೆಪಿಯಿಂದ ಎರಡೂ ಕಾಲುಗಳನ್ನು ಹೊರಗಿಟ್ಟಿದ್ದೇನೆ...' ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಏಕಕಾಲದಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಹಾಗೂ ಹೊಯ್ದಾಟದಲ್ಲಿರುವ ತಮ್ಮ ಬೆಂಬಲಿಗ ಸಚಿವರು-ಶಾಸಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಇದೇ ವೇಳೆ, ಜಗದೀಶ್‌ ಶೆಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ತಮ್ಮಿಂದ ಯಾವುದೇ ಅಪಾಯವಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿರುವ ಅವರು ಸರ್ಕಾರ ತನ್ನ ಅವಧಿ ಪೂರ್ಣಗೊಳಿಸಬೇಕು ಎಂದೂ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಯಾರೂ ಏನು ಬೇಕಾದರೂ ಹೇಳಲಿ. ನಾನು ಹೊಸ ಪಕ್ಷ ಕಟ್ಟುವುದು ಖಚಿತ. ನನ್ನ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಯಾವುದೇ ಕಾರಣಕ್ಕೂ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ' ಎಂದು ವಿಶ್ವಾಸದಿಂದ ನುಡಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನನ್ನ ಮೇಲೆ ನಂಬಿಕೆ ಇಟ್ಟು ನನ್ನೊಂದಿಗೆ ಬರುವವರು ಬರಲಿ. ಇಲ್ಲದಿದ್ದರೆ ತಮ್ಮ ಪಾಡಿಗೆ ತಾವಿರಲಿ. ನಾನು ಮಾತ್ರ ಯಾರನ್ನೂ ಒತ್ತಾಯಿಸುವುದಿಲ್ಲ. ನಾನು ನನ್ನ ಪಾಡಿಗೆ ಹೊಸ ಪಕ್ಷದ ಸಂಘಟನೆ, ರಾಜ್ಯ ಪ್ರವಾಸದಲ್ಲಿ ತೊಡಗುತ್ತೇನೆ. ಸರ್ಕಾರದ ಅವಧಿ ಮುಗಿದ ನಂತರ ನನ್ನ ಮೇಲೆ ನಂಬಿಕೆಯುಳ್ಳವರು ನನ್ನೊಂದಿಗೆ ಬರಬಹುದು ಎಂದು ಯಡಿಯೂರಪ್ಪ ತಿಳಿಸಿದರು.

Share this Story:

Follow Webdunia kannada