ಅಸ್ಸಾಂನಲ್ಲಿ ರೈಲು ಹಳಿತಪ್ಪಿ 17 ಜನರಿಗೆ ಗಂಭೀರ ಗಾಯ
ದಿಸ್‌ಪುರ್ , ಬುಧವಾರ, 16 ಏಪ್ರಿಲ್ 2014 (10:24 IST)
ಕೇಂದ್ರ ಅಸ್ಸಾಂನ ಮೋರಿಗಾಂವ್ ಜಿಲ್ಲೆಯ ಆಜುರಿ ನಿಲ್ದಾಣದಲ್ಲಿ ಇಂದು ಮುಂಜಾನೆ 15666 ಬಿಜಿ ಎಕ್ಸ್ಪ್ರೆಸ್ ರೈಲುಗಾಡಿಯ ಹತ್ತು ಬೋಗಿಗಳು ಹಳಿತಪ್ಪಿ 50ಕ್ಕಿಂತ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬುಧವಾರ ಮುಂಜಾನೆ ಸುಮಾರು 2 ಗಂಟೆ 5 ನಿಮಿಷಕ್ಕೆ ಮೋರಿಗಾಂವ್ ಜಿಲ್ಲೆಯ ಆಜುರಿ ನಿಲ್ದಾಣದ ಬಳಿ ದಿಮಾಪುರ್- ಕಾಮಾಕ್ಯ ರೈಲುಗಾಡಿಯ ಹತ್ತು ಬೋಗಿಗಳು ಹಳಿತಪ್ಪಿ ಕೆಳಗೆ ಬಿದ್ದವು ಎಂದು ಪೋಲಿಸರು ತಿಳಿಸಿದ್ದಾರೆ. ಘಟನೆಯಲ್ಲಿ 17 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಗೌಹಾತಿ ವೈದ್ಯಕೀಯ ಕಾಲೇಜು ಆಸ್ಪತ್ರೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಉಳಿದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೋರಿಗಾಂವ್ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ಈಶಾನ್ಯ ಗಡಿನಾಡಿನ ರೈಲ್ವೆ ಮೂಲಗಳು ತಿಳಿಸಿವೆ. ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ರಕ್ಷಣಾ ಕಾರ್ಯ ಮುಂದುವರೆದಿದೆ.ಸಹಾಯವಾಣಿ ದೂರವಾಣಿ ಸಂಖ್ಯೆಗಳನ್ನು ಸಕ್ರಿಯ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಂಖ್ಯೆಗಳು ಈ ರೀತಿ ಇವೆ. ದಿಮಾಪುರ್-03862-228404, ಲುಮದಿಂಗ್-03674-264848/49/50 ಮತ್ತು ಗೌಹಾತಿ-0361-2731621/22/23 .