Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎನ್ನುವುದು ಕಲ್ಪನೆ: ಮಮತಾ ಬ್ಯಾನರ್ಜಿ

ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎನ್ನುವುದು ಕಲ್ಪನೆ: ಮಮತಾ ಬ್ಯಾನರ್ಜಿ
ಕೋಲಕಾತಾ , ಮಂಗಳವಾರ, 15 ಏಪ್ರಿಲ್ 2014 (20:02 IST)
'ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ ಎನ್ನುವುದು ಕಲ್ಪನೆ' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
PTI

ಲೋಕಸಭಾ ಚುನಾವಣೆಯ ನಂತರ ಫೆಡರಲ್ ಫ್ರಂಟ್ ಸರ್ಕಾರ ರೂಪುಗೊಳ್ಳುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಕೋಲ್ಕತಾದಲ್ಲಿ ನಡೆದ ಸಂದರ್ಶನವೊಂದರಲ್ಲಿ ಮೋದಿ ಪ್ರಧಾನಿಯಾದರೆ ನೀವು ಉತ್ತಮ ಹಣಕಾಸು ಸೌಲಭ್ಯವನ್ನು ನಿರೀಕ್ಷಿಸುತ್ತೀರಾ ಎಂದು ಮಮತಾರವರನ್ನು ಕೇಳಿದಾಗ "ಮೋದಿ ಪ್ರಧಾನಿಯಾಗುತ್ತಾರೆ ಎನ್ನುವುದು ಕಲ್ಪನೆ . ಆದ್ದರಿಂದ, ನಾನು ಈ ಕಾಲ್ಪನಿಕ ಪ್ರಶ್ನೆಗೆ ಉತ್ತರ ನೀಡಲು ಬಯಸುವುದಿಲ್ಲ" ಎಂದು ಅವರು ತಿಳಿಸಿದರು.

"ಬಂಗಾಳಕ್ಕೆ ಭಿಕ್ಷಾಪಾತ್ರೆಯನ್ನು ಹಿಡಿದುಕೊಂಡು ಹೋಗುವ ಅಗತ್ಯವಿಲ್ಲ. ಎಡ ಪಂಥದವರ ಮೂರು ದಶಕಗಳ ಆಡಳಿತದಿಂದ ಉಂಟಾಗಿರುವ ಬಂಗಾಳದ ಹೊರೆಯನ್ನು ಪುನರ್ ರಚನೆ ಮಾಡುತ್ತೇವೆ ಎಂದು 2011ರ ಚುನಾವಣೆಗೆ ಮೊದಲು ಪ್ರಧಾನಿ ವಾಗ್ದಾನ ಮಾಡಿದ್ದರು".

"ನಾನು ಮತ್ತು ನನ್ನ ಹಣಕಾಸು ಸಚಿವರು ಅನೇಕ ಸಭೆಗಳನ್ನು ನಡೆಸಿದೆವು. ಆದರೆ ಅವರು ಏನನ್ನೂ ಮಾಡಲಿಲ್ಲ. ಅವರು ತಮ್ಮ ಭರವಸೆಯನ್ನು ಉಳಿಸಿಕೊಳ್ಳಲಿಲ್ಲ" ಎಂದು ಮಮತಾ ಹೇಳಿದ್ದಾರೆ.

ಪಶ್ಚಿಮ ಬಂಗಾಳವನ್ನು ಗುಜರಾತ್ ಜತೆ ಹೋಲಿಕೆ ಮಾಡಿದ ಮುಖ್ಯಮಂತ್ರಿ ಮಮತಾ, "ಗುಜರಾತ್ ಜತೆ,ಬಂಗಾಳವನ್ನು ಹೋಲಿಕೆ ಮಾಡುವುದು ಶ್ರೀಮಂತ, ಸವಲತ್ತು ಪಡದ ಮಗುವನ್ನು ಮತ್ತು ಪೋಷಣೆಯಿಲ್ಲದ ಮಗುವಿನ ಜತೆ ಹೋಲಿಸಿದ ಹಾಗೆ" ಎಂದು ಹೇಳಿದರು.

Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada