ಮೆಕ್ಸಿಕೋದಲ್ಲಿ ರಿಕ್ಟರ್ ಮಾಪಕ 7 ಪ್ರಮಾಣದ ಭೂಕಂಪ
ಮೆಕ್ಸಿಕೋ , ಶನಿವಾರ, 19 ಏಪ್ರಿಲ್ 2014 (08:15 IST)
ಮೆಕ್ಸಿಕೋ ಸಿಟಿಯಲ್ಲಿ ಶುಕ್ರವಾರ ರಿಕ್ಟರ್ ಮಾಪಕ 7 ಪ್ರಮಾಣದ ಭೂಕಂಪ ದಾಖಲಾಗಿದೆ ಎಂದು ವರದಿಯಾಗಿದೆ.
"
ಭೂಮಿ ಕಂಪಿಸಿದ್ದರಿಂದ ಕಟ್ಟಡಗಳು ಅಲುಗಾಡ ತೊಡಗಿದವು, ಕಿಟಕಿ ಗಾಜುಗಳು ಒಡೆಯಲ್ಪಟ್ಟವು. ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಭಯಗೊಂಡ ಜನರು ಜನರು ಬೀದಿಗೆ ಓಡಿ ಬಂದರು" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ಕೇಂದ್ರ ತೆಕಪಾನ್‌ನಿಂದ 31 ಕಿಲೊಮೀಟರ್ ಪಶ್ಚಿಮೋತ್ತರದ ಅಕಾಪುಲ್ಕೊ ಪೆಸಿಫಿಕ್ ರೆಸಾರ್ಟ್’ ಬಳಿ ದಾಖಲಾಗಿದೆ ಎಂದು ರಾಷ್ಟ್ರೀಯ ಸಿಸ್ಮೋಲಾಜಿ ಸರ್ವಿಸ್ ತಿಳಿಸಿದೆ.ಅಮೇರಿಕಾದ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ ಬೆಳಿಗ್ಗೆ ಒಂಬತ್ತು ಗಂಟೆ 27 ನಿಮಿಷಕ್ಕೆ ಸಂಭವಿಸಿದ ಈ ಕಂಪನದ ತೀವ್ರತೆ 7.5 ರಷ್ಟಿತ್ತು."
ಇಲ್ಲಿಯವರೆಗೆ, ಜೀವ ಮತ್ತು ಆಸ್ತಿ ಹಾನಿಯಾಗಿರುವುದರ ಬಗ್ಗೆ ಯಾವುದೇ ವರದಿ ಬಂದಿಲ್ಲ" ಎಂದು 'ರಾಷ್ಟ್ರೀಯ ನಾಗರಿಕ ರಕ್ಷಣಾ' ಮುಖ್ಯಸ್ಥ ಲೂಯಿ ಫಿಲಿಪ್ ಪುಂತೆ ತಿಳಿಸಿದ್ದಾರೆ. ಈ ಭೂಕಂಪದಿಂದ ಸುನಾಮಿ ಬರುವ ಸಾಧ್ಯತೆ ಕಡಿಮೆ ಇದೆ. ಭಯ ಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.