Select Your Language

Notifications

webdunia
webdunia
webdunia
webdunia

ರಷ್ಯಾ, ಉಕ್ರೇನ್ ನಡುವೆ ಬಿಗಡಾಯಿಸಿದ ಸಂಘರ್ಷ

ರಷ್ಯಾ, ಉಕ್ರೇನ್ ನಡುವೆ ಬಿಗಡಾಯಿಸಿದ ಸಂಘರ್ಷ
, ಭಾನುವಾರ, 13 ಏಪ್ರಿಲ್ 2014 (13:28 IST)
PR
PR
ಕಿವ್/ ಮಾಸ್ಕೋ: ರಷ್ಯಾ ಮತ್ತು ಉಕ್ರೇನ್ ನಡುವೆ ಸಂಘರ್ಷ ಅಪಾಯಕಾರಿ ಹಂತವನ್ನು ಮುಟ್ಟಿದ್ದು, ಸಶಸ್ತ್ರ ಪ್ರತ್ಯೇಕತಾವಾದಿಗಳು ಪೂರ್ವ ಉಕ್ರೇನ್‌ನಲ್ಲಿ ನಗರವೊಂದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೀವ್ ಇದನ್ನು ರಷ್ಯಾದ ಆಕ್ರಮಣಕಾರಿ ಕೃತ್ಯ ಎಂದು ಆರೋಪಿಸಿದ್ದು ತನ್ನ ಪಡೆಗಳನ್ನು ಸಿದ್ಧವಾಗಿರಿಸಿದೆ.ಸ್ವಯಂಚಾಲಿತ ಶಸಾಸ್ತ್ರಗಳನ್ನು ಹಿಡಿದಿದ್ದ ರಷ್ಯಾ ಪರ ಕಾರ್ಯಕರ್ತರು ರಷ್ಯಾ ಗಡಿಗೆ 150 ಕಿಮೀ ದೂರದ ಸ್ಲಾವಿಯಾನ್‌ಸ್ಕ್ ಪಟ್ಟಣದ ಸರ್ಕಾರಿ ಕಟ್ಟಡಗಳನ್ನು ವಶಪಡಿಸಿಕೊಂಡಿದ್ದು, ನಗರದ ಹೊರಗೆ ತಡೆಗೋಡೆಗಳನ್ನು ಸ್ಥಾಪಿಸಿದ್ದಾರೆ.ಕ್ರಾಮಾಟೋರ್ಸ್ಕ್‌ನಲ್ಲಿ ಬಂದೂಕುಧಾರಿಗಳು ಪೊಲೀಸರ ಜತೆ ಗುಂಡಿನ ಚಕಮಕಿ ನಡೆಸಿ ಪೊಲೀಸ್ ಠಾಣೆಯೊಂದನ್ನು ವಶಕ್ಕೆ ತೆಗೆದುಕೊಂಡರು.

ಡಾನೆಟ್‌ಸ್ಕ್ ಮತ್ತು ಲುಹಾನ್‌ಸ್ಕ್ ಪ್ರದೇಶಗಳ ಅನೇಕ ಪಟ್ಟಣಗಳಲ್ಲಿರುವ ಸರ್ಕಾರಿ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಅಮೆರಿಕ ಈ ಘಟನೆ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು, ರಷ್ಯಾ ಉಕ್ರೇನ್ ಕ್ರೀಮಿಯಾ ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ನಡೆದ ವಿದ್ಯಮಾನಗಳನ್ನು ನೆನಪಿಸುತ್ತದೆಂದು ತಿಳಿಸಿದೆ. ರಷ್ಯಾ ಪರ ಪ್ರತ್ಯೇಕತವಾದಿಗಳು ರಷ್ಯಾದ ಬೆಂಬಲದೊಂದಿಗೆ ಹಿಂಸಾಚಾರ ಮತ್ತು ವಿಧ್ವಂಸ ಕೃತ್ಯಗಳಿಗೆ ಪ್ರೇರಣೆ ನೀಡುತ್ತಿದ್ದು, ಉಕ್ರೇನ್ ನಗರವನ್ನು ಅಸ್ಥಿರಗೊಳಿಸಲು ಯತ್ನಿಸಿದ್ದಾರೆ ಎಂದು ಶ್ವೇತಭವನ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರೆ ಲಾರಾ ಲುಕಾಸ್ ಮ್ಯಾಗ್ನುಸನ್ ತಿಳಿಸಿದ್ದಾರೆ.

Share this Story:

Follow Webdunia kannada