ಚೀನಾ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿಬಿದ್ದಿರುವ 22 ಕಾರ್ಮಿಕರು
, ಶನಿವಾರ, 12 ಏಪ್ರಿಲ್ 2014 (16:32 IST)
ಬೀಜಿಂಗ್: ನೈರುತ್ಯ ಚೀನಾದ ಯುನಾನ್ ಪ್ರಾಂತ್ಯದಲ್ಲಿ ದಿಢೀರ್ ಪ್ರವಾಹದ ನಂತರ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿಬಿದ್ದ 22 ಕಾರ್ಮಿಕರನ್ನು ಇನ್ನೂ ರಕ್ಷಿಸಲು ಸಾಧ್ಯವಾಗಿಲ್ಲ.ಕ್ವಿಲಿನ್ ಜಿಲ್ಲೆಯಲ್ಲಿರುವ ಈ ಗಣಿಯಿಂದ ಅರ್ಧದಷ್ಟು ನೀರನ್ನು ರಕ್ಷಣಾ ತಂಡ ತೆಗೆದಿದ್ದು, ಸಾಕಷ್ಟು ಪ್ರಗತಿಯಾಗಿಲ್ಲ ಎಂದು ಕ್ಸಿನುವಾ ವರದಿ ಮಾಡಿದೆ.ಕಾರ್ಮಿಕರು ಪ್ರವಾಹದ ನೀರಿಗೆ 10 ಮೀಟರ್ ಕೆಳಗೆ 1876 ಮೀಟರ್ ಆಳದಲ್ಲಿ ಸಿಕ್ಕಿಬಿದ್ದಿದ್ದಾರೆಂದು ನಂಬಲಾಗಿದೆ. ಶನಿವಾರ ಬೆಳಿಗ್ಗೆ 8ಕ್ಕೆ ರಕ್ಷಣಾ ತಂಡ 22,000 ಕ್ಯೂಬಿಕ್ ಮೀಟರ್ ನೀರನ್ನು ತೆಗೆದಿದ್ದು, ಮುಂಚಿನ 10ಮೀಟರುಗಳಿಂದ 4.5 ಮೀಟರ್‌ಗೆ ನೀರಿನ ಮಟ್ಟವನ್ನು ತಗ್ಗಿಸಿದ್ದಾರೆ.