ಹಿಲರಿ ಭಾಷಣ ಮಾಡುವಾಗ ಅವರತ್ತ ಬೂಟು ಎಸೆದ ಮಹಿಳೆ
, ಶುಕ್ರವಾರ, 11 ಏಪ್ರಿಲ್ 2014 (14:12 IST)
ಲಾಸ್ ವೆಗಾಸ್: ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲೇರಿ ಕ್ಲಿಂಟನ್ ಗುರುವಾರ ಲಾಸ್ ವೆಗಾಸ್ ಹೊಟೆಲ್‌ನಲ್ಲಿ ಭಾಷಣ ಮಾಡುತ್ತಿದ್ದಾಗ ಹಿಲೇರಿ ಕ್ಲಿಂಟನ್ ಕಡೆಗೆ ಮಹಿಳೆಯೊಬ್ಬರು ಬೂಟನ್ನು ಎಸೆದ ಘಟನೆ ನಡೆದಿದೆ. ಆದರೆ ಕ್ಲಿಂಟನ್ ಆ ಬೂಟಿನ ಎಸೆತದಿಂದ ತಪ್ಪಿಸಿಕೊಂಡು, ತನ್ನ ಭಾಷಣವನ್ನು ಮುಂದುವರಿಸಿದರು ಎಂದು ಅಮೆರಿಕದ ಗುಪ್ತ ಸೇವೆಯ ವಕ್ತಾರ ತಿಳಿಸಿದರು.ಕ್ಲಿಂಟನ್ ಭಾಷಣಕ್ಕೆ ಪ್ರತಿಭಟನೆಕಾರ್ತಿ ಟಿಕೆಟ್ ಪಡೆದ ಅತಿಥಿಯಲ್ಲವೆಂದು ಗುಪ್ತ ಸೇವೆಯ ವಕ್ತಾರ ಜಾರ್ಜ್ ಒಗಿಲಿವಿ ತಿಳಿಸಿದ್ದು, ಘಟನೆಗೆ ಮುನ್ನ, ಗುಪ್ತ ಸೇವೆ ಏಜಂಟರು ಮತ್ತು ಹೊಟೆಲ್ ಭದ್ರತಾ ಕಾವಲುಗಾರರು ಅವಳನ್ನು ಪತ್ತೆಹಚ್ಚಿದ್ದರು. ಏಜಂಟರು ಮತ್ತು ಹೊಟೆಲ್ ಸೆಕ್ಯೂರಿಟಿ ಅವಳನ್ನು ಸಮೀಪಿಸುತ್ತಿದ್ದಂತೆ ಸೀಕ್ರೇಟ್ ಸರ್ವೀಸ್ ಮತ್ತು ಹೊಟೆಲ್ ಸೆಕ್ಯೂರಿಟಿ ಅವಳನ್ನು ವಶಕ್ಕೆ ತೆಗೆದುಕೊಂಡಿದ್ದರು.ಕೆಟಿಎನ್‌ವಿ-ಟಿವಿ ಪ್ರಸಾರ ಮಾಡಿದ ವಿಡಿಯೋಚಿತ್ರದಲ್ಲಿ 66 ವರ್ಷ ವಯಸ್ಸಿನ ಕ್ಲಿಂಟನ್ ವೇದಿಕೆಯಲ್ಲಿ ನಿಂತಿದ್ದಾಗ ಅವರ ಕಡೆ ಎಸೆದ ವಸ್ತುವಿನಿಂದ ತಪ್ಪಿಸಿಕೊಂಡಿದ್ದು ಕಂಡುಬಂತು.ಹಿಲೇರಿ ಕ್ಲಿಂಟನ್ ಈ ಘಟನೆ ಬಗ್ಗೆ ಜೋಕ್ ಮಾಡಿ ಲೋಹ ಪುನರ್‌ಬಳಕೆ ಸಮ್ಮೇಳನಕ್ಕೆ ಭಾಗವಹಿಸಿದ ಸುಮಾರು 1000 ಜನರಿಗೆ ತಮ್ಮ ಭಾಷಣವನ್ನು ಮುಂದುವರಿಸಿದರು. ಯಾರಾದರೂ ನನ್ನ ಕಡೆ ಏನಾದರೂ ಎಸೆದರಾ ಎಂದು ಕ್ಲಿಂಟನ್ ಕೇಳಿದರು. ನಂತರ ನನಗೆ ಗಟ್ಟಿ ತ್ಯಾಜ್ಯ ವ್ಯವಸ್ಥಾಪನೆ ಇಷ್ಟೊಂದು ವಿವಾದಾತ್ಮಕವಾಗಿರುತ್ತದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಕ್ಲಿಂಟನ್ ಹೇಳಿದರು.