ಅಬ್ಬಾ , ಈಕೆಯ ಹತ್ತಿರ 16 ಸಾವಿರ ಚಪ್ಪಲಿಗಳಿವೆ !
ಲಂಡನ್ , ಶನಿವಾರ, 12 ಏಪ್ರಿಲ್ 2014 (19:04 IST)
ಸಾಮಾನ್ಯವಾಗಿ ಎಲ್ಲರ ಹತ್ತಿರ ಒಂದು ಜೊತೆ ಚಪ್ಪಲಿ ಇರುತ್ತವೆ, ಇನ್ನೂ ಕೆಲವರಲ್ಲಿ 5 ರಿಂದ 10 ಜೊತೆ ಚಪ್ಪಲಿಗಳು ಇರುತ್ತವೆ. ಆದರೆ ಅಮೆರಿಕಾದ ಕ್ಯಾಲಿಫೋರ್ನಿಯಾ ನಗರದಲ್ಲಿ ಒಬ್ಬ ಮಹಿಳೆ 16 ಸಾವಿರ ಚಪ್ಪಲಿಗಳನ್ನು ಸಂಗ್ರಹಿಸಿ ವಿಶ್ವ ದಾಖಲೆ ಮಾಡಿದ್ದಾಳೆ. ಶೂ ಕೆಡಿ ಎನ್ನುವ ಹೆಸರು ಹೊಂದಿರುವ ಪ್ರಖ್ಯಾತ ಡರ್ಲೆನ್ ಫ್ಲಿನ್ ಮನೆಯಲ್ಲಿ ಚಪ್ಪಲಿಯ ಆಕಾರದ ಫರ್ನಿಚರ್, ಬಟ್ಟೆ , ಕಪ್ಪು ಮತ್ತು ಫೋನ್ ಇವೆ. ಈಕೆಯ ಮನೆಯಲ್ಲಿ ಟಾಯ್ಲೆಟ್ ಕೂಡ ಬೂಟಿನ ಆಕಾರದಲ್ಲಿ ಇದೆ. ದಿ ಸನ್ ಎನ್ನುವ ಪತ್ರಿಕೆ ಅನುಸಾರ, 2006 ರಲ್ಲಿ ಈಕೆ 7765 ಚಪ್ಪಲಿ ಮತ್ತು ಬೂಟುಗಳನ್ನು ಸಂಗ್ರಹ ಮಾಡಿಕೊಂಡು ವಿಶ್ವ ದಾಖಲೆ ಮಾಡಲು ಬಯಸಿದ್ದಳು ಮತ್ತು ಈಗ ಇಕೆ 5 ಲಕ್ಷ ಡಾಲರ್ ಖರ್ಚು ಮಾಡಿ ತನ್ನ ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಪ್ಪಲಿ ಮತ್ತು ಬೂಟುಗಳನ್ನು ಸಂಗ್ರಹ ಮಾಡಿಕೊಂಡಿದ್ದಾಳೆ. "
ಅಷ್ಟಕ್ಕೂ ನಾನು ಚಪ್ಪಲಿಗಳನ್ನು ಏಕೆ ಇಷ್ಟ ಪಡುತ್ತಿನಿ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ನಾನು ಕೇವಲ ಚಪ್ಪಲಿಯನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಎಲ್ಲಕ್ಕಿಂತ ಹೆಚ್ಚು ಪ್ರೀತಿ ನನಗೆ ಚಪ್ಪಲಿ ಮೇಲೆಯೆ ಇದೆ." ಎಂದು ಫ್ಲಿನ್ ತಿಳಿಸಿದ್ದಾಳೆ. 2001 ರಲ್ಲಿ ಈಕೆ ತನ್ನ ಪತಿಗೆ ಡೈವೋರ್ಸ ನೀಡಿದ ನಂತರ ಚಪ್ಪಲಿಗಳ ಸಂಗ್ರಹ ಮಾಡಲು ಪ್ರಾರಂಭಿಸಿದ್ದಾಳಂತೆ.