ಅರೆ ಇದೇನಿದು? : ಅವನು ಆಕೆಯ ನಾಯಿಯಾಗಿ ರಸ್ತೆಯಲ್ಲಿ ನಡೆದನು !
ಲಂಡನ್ , ಶನಿವಾರ, 12 ಏಪ್ರಿಲ್ 2014 (18:26 IST)
ಲಂಡನ್‌ನಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆದಿದೆ . ಒಬ್ಬ ಮಹಿಳೆ ಒಬ್ಬ ವ್ಯಕ್ತಿಯ ಜೊತೆಗೆ ವಿಚಿತ್ರವಾಗಿ ನಡೆದಿದ್ದಾಳೆ. ವ್ಯಕ್ತಿಯ ಕೊರಳಲ್ಲಿ ಹಗ್ಗ ಕಟ್ಟಲಾಗಿತ್ತು ಮತ್ತು ಆ ವ್ಯಕ್ತಿ ತನ್ನ ಎರಡು ಕೈ ಮತ್ತು ಎರಡು ಕಾಲಿನಿಂದ ನಡೆಯುತ್ತಿದ್ದ. ಆ ಕೊರಳಿನ ಹಗ್ಗ ಆಕೆಯ ಕೈಯೊಳಗಡೆ ಇತ್ತು. ನಾಯಿಯ ತರಹ ಆಕೆ ಆತನನ್ನು ಕರೆದೊಯ್ಯತೊಡಗಿದ್ದಳು. .
ಇದನ್ನು ನೋಡಿದ ಜನರು ಈ ದೃಶ್ಯವನ್ನು ವಿಡಿಯೋ ರಿಕಾರ್ಡ ಮಾಡಿದ್ದಾರೆ. ಕೆಲವೆ ಕ್ಷಣಗಳಲ್ಲಿ ಈ ಚಿತ್ರವನ್ನು ಅಂತರ್ಜಾಲದಲ್ಲಿ ಪೋಸ್ಟ ಆಗಿ ಬಿಟ್ಟಿತು. ಇಂಟರ್‌ನೆಟ್‌ನಲ್ಲಿ ಇದನ್ನು ನೋಡಿದ ಜನರು ಕಮೆಂಟ್ ನೀಡುವುದು ಮತ್ತು ಇತರರಿಗೆ ಪೋಸ್ಟ್ ಮಾಡಲು ಪ್ರಾರಂಭಿಸಿದರು. ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ವಿಶ್ವಾದ್ಯಂತ ಹರಿದಾಡ ತೊಡಗಿತು. ಆದರೆ ಅಷ್ಟಕ್ಕು ಈ ಮಹಿಳೆ ಆತನನ್ನು ನಾಯಿಯ ತರಹ ಕರೆದೊಯ್ಯದದ್ದು ಯಾಕೆ ಎನ್ನುವದು ಮಾತ್ರ ತಿಳಿದು ಬಂದಿಲ್ಲ. ಈ ವಿಡಿಯೋ ನೋಡಿದ ಕೆಲವರು ನಕ್ಕರೆ ಇನ್ನು ಕೆಲವು ಜನರು ಇದನ್ನು ವಿರೋಧಿಸಿದ್ದರು. ಆದರೆ ಜನರು ಮಾತ್ರ ಈ ವಿಡಿಯೋ ಇತರರಿಗೆ ಶೇರ್ ಮಾಡುತ್ತಲೇ ಇದ್ದರು. ಈಗಲು ಯಾರಿಗೂ ಅರ್ಥವಾಗದ ವಿಷಯವೇನೆಂದರೆ , ಅಷ್ಟಕ್ಕು ಆಕೆ ಆತನನ್ನು ನಾಯಿ ತರಹ ಕರೆದೊಯ್ಯತೊಡಗಿದ್ದು ಯಾಕೆ ಎಂದು ಅರ್ಥವಾಗಿಲ್ಲ.