ಸೆನ್ಸೆಕ್ಸ್: ಲಾಭದಾಯಕ ವಹಿವಾಟಿನಿಂದ ಸಂವೇದಿ ಸೂಚ್ಯಂಕ ಕುಸಿತ
ಮುಂಬೈ , ಮಂಗಳವಾರ, 15 ಏಪ್ರಿಲ್ 2014 (17:04 IST)
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಬಾರಿ ಕುಸಿತ ಕಂಡಿದೆ.ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 167.96 ಪಾಯಿಂಟ್‌ಗಳ ಕುಸಿತ ಕಂಡು 22,419.51 ಅಂಕಗಳಿಗೆ ತಲುಪಿದೆ.ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 51.10 ಪಾಯಿಂಟ್‌ಗಳ ಕುಸಿತ ಕಂಡು 6725.20 ಅಂಕಗಳಿಗೆ ತಲುಪಿದೆ. ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್ , ಹಿಂಡಾಲ್ಕೋ, ಹೀರೋ ಮೋಟಾರ್ ಕಾರ್ಪೋರೇಶನ್, ಸನ್‌ಫಾರ್ಮಾ ಮತ್ತು ಐಟಿಸಿ ಶೇರುಗಳು ವಹಿವಾಟಿನಲ್ಲಿ ಭಾರಿ ನಷ್ಟ ಅನುಭವಿಸಿವೆ. ಏತನ್ಮಧ್ಯೆ, ಇನ್ಫೋಸಿಸ್, ಭಾರ್ತಿ ಏರ್‌ಟೆಲ್, ವಿಪ್ರೋ ಮತ್ತು ಟಿಸಿಎಸ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.