ಸಿಹಿಯ ಕಹಿ ಸುದ್ದಿ : ಹೆಚ್ಚಾಗಲಿದೆ ಸಕ್ಕರೆ ಬೆಲೆ
ನವದೆಹಲಿ , ಮಂಗಳವಾರ, 15 ಏಪ್ರಿಲ್ 2014 (18:38 IST)
ದೇಶದಲ್ಲಿ ನಡೆಯುತ್ತಿರುವ ಚುನಾವಣೆಯ ಕಾರಣ ಸಕ್ಕರೆಯ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಈಗ ಸಕ್ಕರೆ ಉತ್ಪಾದಿಸುವ ಕಾರ್ಖಾನೆಗಳಿಗೆ ಹಬ್ಬವಾಗಿದೆ. ಕಾರಣ ಸಕ್ಕರೆಗೆ ಹೆಚ್ಚಿದ ಬೇಡಿಕೆ. ಚುನಾವಣೆ ಪ್ರಚಾರ ಜೋರಾಗಿ ನಡೆಯಿತ್ತಿದ್ದು , ಈ ಸಮಯದಲ್ಲಿ ತಂಪು ಪಾನಿಯ ಮತ್ತು ಸಿಹಿತಿಂಡಿಗಳ ಬೇಡಿಕೆ ಹೆಚ್ಚಾಗಿದೆ, ಇದರಿಂದ ಸಕ್ಕರೆ ಬೆಲೆಯಲ್ಲಿ ಶೇ.10 ರಷ್ಟು ಹೆಚ್ಚಳವಾಗಿದೆ. ಇಷ್ಟೆ ಅಲ್ಲ ಬಿಸಿಲಿನ ಕಾರಣ ತಂಪು ಪಾನಿಯ . ಐಸ್ಕ್ರೀಮ್ ನಂತಹ ಪದಾರ್ಥಗಳ ಬೇಡಿಕೆ ಹೆಚ್ಚಳವಾದ ಕಾರಣ ಸಕ್ಕರೆ ಬೆಲೆಯಲ್ಲಿ ಕೂಡ ಹೆಚ್ಚಳವಾಗಿದೆ. ಕಳೆದ ವರ್ಷ ಎಪ್ರಿಲ್‌ನಲ್ಲಿ ದೇಶದಲ್ಲಿ ಸಕ್ಕರೆಯ ಬೇಡಿಕೆ 21 ಲಕ್ಷ ಟನ್ ಇತ್ತು ಆದರೆ ಈ ವರ್ಷ ಈ ಬೇಡಿಕೆಯಲ್ಲಿ ಶೇ.10 ರಷ್ಟು ಹೆಚ್ಚಳವಾಗಿದೆ ಎಂದು ಮುಂಬೈ ಸಕ್ಕರೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕ ಜೈನ್ ತಿಳಿಸಿದ್ದಾರೆ. ಮೇ ತಿಂಗಳಿನವರೆಗೆ ಸಕ್ಕರೆಯ ಬೇಡಿಕೆ ಹೆಚ್ಚಳವಾಗಿರಲಿದೆ. ಇನ್ನು ಒಂದು ತಿಂಗಳು ಚುನಾವಣೆ ಇರಲಿವೆ ಮತ್ತು ಚುನಾವಣೆ ನಂತರ ಮದುವೆ ಸೀಜನ್ ಪ್ರಾರಂಭವಾಗಲಿದೆ ಇದರಿಂದ ಸಕ್ಕರೆಯ ಬೇಡಿಕೆ ಹೆಚ್ಚಳವಾಗಲಿದೆ ಎಂದು ಅಶೋಕ್ ಜೈನ್ ತಿಳಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಪ್ರತಿ ಕ್ವಿಂಟಲ್ ಸಕ್ಕರೆಯ ಬೆಲೆ 3050 ರೂಪಾಯಿ ಇತ್ತು. ಆದರೆ ಕಳೆದ ಶನಿವಾರ ಸಕ್ಕರೆ ಬೆಲೆಯಲ್ಲಿ ಶೇ.11.47 ರಷ್ಟು ಹೆಚ್ಚಳವಾಗಿ ಪ್ರತಿ ಕ್ವಿಂಟಲ್‌ಗೆ 3400 ರೂಪಾಯಿ ಹೆಚ್ಚಳವಾಗಿದೆ.