Select Your Language

Notifications

webdunia
webdunia
webdunia
webdunia

ಹುಂಡೈಗೆ ಅರವಿಂದ್ ಸಕ್ಸೇನಾ ರಾಜೀನಾಮೆ

ಹುಂಡೈಗೆ ಅರವಿಂದ್ ಸಕ್ಸೇನಾ ರಾಜೀನಾಮೆ
ಚೆನ್ನೈ , ಶನಿವಾರ, 21 ಜುಲೈ 2012 (17:28 IST)
PR
ಪ್ರತಿಷ್ಟಿತ ಕಾರು ತಯಾರಕ ಹುಂಡೈ ಇಂಡಿಯಾ ಕಂಪನಿಯನ್ನು ಏಳು ವರ್ಷ ಮುನ್ನಡೆಸಿದ್ದ ಅರವಿಂದ್ ಸಕ್ಸೇನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮಾರ್ಕೆಟಿಂಗ್ ಮತ್ತು ಮಾರಾಟದ ನಿರ್ದೇಶಕರಾಗಿದ್ದ ಅವರು, ಕಂಪನಿಗೆ ಸೇರುವಾಗ ಉಪಾಧ್ಯಕ್ಷರಾಗಿ ನೇಮಕವಾಗಿದ್ದರು.

ತಾನು ಸೇವೆಯಲ್ಲಿದ್ದಾಗ ಹುಂಡೈ ಮಾರುಕಟ್ಟೆಯಲ್ಲಿ ಸಾಕಷ್ಟು ಉನ್ನತ ಘಟ್ಟಗಳನ್ನು ತಲುಪಿರುವುದಾಗಿ ಅವರು ತಿಳಿಸಿದ್ದಾರೆ. ಈ ಅವಧಿಯಲ್ಲಿ ಕಂಪನಿಯ ಪ್ರಸಿದ್ದ ಆರು ವಾಹನಗಳು ಮಾರುಕಟ್ಟೆ ಪ್ರವೇಶಿಸಿದೆ.

ಸಾಕಷ್ಟು ಪೈಪೋಟಿಯ ನಡುವೆಯೂ ತಮ್ಮ ಮಾರುಕಟ್ಟೆ ಪಾಲನ್ನು ಶೇಕಡಾ 19 ರಷ್ಟು ಆವರಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ತನ್ನ ಮುಂದಿನ ನಿರ್ಧಾರವನ್ನು ಎರಡು ಮೂರು ವಾರಗಳಲ್ಲಿ ನಿರ್ಧರಿಸುವುದಾಗಿ ಅವರು ತಿಳಿಸಿದ್ದಾರೆ.

Share this Story:

Follow Webdunia kannada