Webdunia - Bharat's app for daily news and videos

Install App

ಸ್ಲಂ ಡಾಗ್ ಮಿಲಿಯನೇರ್ ವಿಶೇಷಗಳು

Webdunia
ಸೋಮವಾರ, 23 ಫೆಬ್ರವರಿ 2009 (13:02 IST)
ಭಾರತದ ಕೊಳೆಗೇರಿ ಹುಡುಗನೊಬ್ಬ ಮಿಲಿಯಾಧಿಪತಿಯಾದ ಕಥೆಯುಳ್ಳ ಆಸ್ಕರ್ ಅತ್ಯುತ್ತಮ ಚಿತ್ರ ಪ್ರಶಸ್ತಿ ವಿಜೇತ 'ಸ್ಲಂ ಡಾಗ್ ಮಿಲಿಯನೇರ್' 8 ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಈ ಚಿತ್ರದ ಕುರಿತು ಪ್ರಮುಖ ಐದು ಅಂಶಗಳು ಇಲ್ಲಿವೆ:

* ಫಾಕ್ಸ್ ಸರ್ಚ್‌ಲೈಟ್ ನಿರ್ಮಾಣ ಸಂಸ್ಥೆಯಿಂದ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವು, ಇದುವರೆಗೆ ಉತ್ತರ ಅಮೆರಿಕದ ಬಾಕ್ಸಾಫೀಸಿನಲ್ಲಿ 98 ದಶಲಕ್ಷ ಡಾಲರ್ ಸಂಗ್ರಹಿಸಿದೆ ಎನ್ನುತ್ತವೆ ಸ್ಟುಡಿಯೋ ಮೂಲಗಳು. ವಿಶ್ವಾದ್ಯಂತ ಅದು 150 ದಶಲಕ್ಷ ಡಾಲರ್ ಕಬಳಿಸಿಕೊಂಡಿದೆಯಂತೆ.

* ಈ ಚಿತ್ರವು 10 ಆಸ್ಕರ್ ಪುರಸ್ಕಾರಗಳಿಗೆ ನಾಮನಿರ್ದೇಶನಗೊಂಡಿತ್ತು. ಭಾನುವಾರ ಅದು 8 ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೊದಲು, ಅದು ಗೋಲ್ಡನ್ ಗ್ಲೋಬ್, ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಮತ್ತು ಬ್ರಿಟಿಷ್ ಬಾಫ್ಟಾ ಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು.

* ಈ ಚಿತ್ರವು ದಕ್ಷಿಣ ಆಫ್ರಿಕಾಕ್ಕೆ ಭಾರತದ ಉಪ ರಾಯಭಾರಿಯಾಗಿರುವ ವಿಕಾಸ್ ಸ್ವರೂಪ್ ಅವರು ಬರೆದಿದ್ದ "ಕ್ಯೂ&ಎ" ಕಾದಂಬರಿ ಆಧರಿತವಾಗಿದೆ. ಲಂಡನ್‌ನಲ್ಲಿ ರಾಜತಾಂತ್ರಿಕ ಕಾರ್ಯ ಮಾಡುತ್ತಿದ್ದ ಅವಧಿಯಲ್ಲಿ ಸ್ವರೂಪ್ ಅವರು ಈ ಕಾದಂಬರಿ ಬರೆದಿದ್ದರು.

* ಈ ಚಿತ್ರದಲ್ಲಿ ಕೊಳಚೆ ನಿವಾಸಿಗಳ ಪಾತ್ರವನ್ನು ಅದ್ಭುತವಾಗಿ ಬಿಂಬಿಸಿದ್ದ ಬಾಲ ನಟರನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂಬ ಕಾರಣಕ್ಕೆ ಮಾಧ್ಯಮಗಳಿಂದ ಈ ಚಿತ್ರ ನಿರ್ಮಾಪಕರು ತೀವ್ರ ಟೀಕೆಗೆ ಗುರಿಯಾಗಿದ್ದರು. ಇದಕ್ಕೆ ಪ್ರತಿಯಾಗಿ, ಚಿತ್ರ ವಿತರಕರಾದ ಫಾಕ್ಸ್ ಸರ್ಚ್‌ಲೈಟ್, ಎಲ್ಲ ಬಾಲ ನಟರನ್ನು ಭಾನುವಾರದ ಹಾಲಿವುಡ್‌ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕರೆದೊಯ್ದಿತ್ತು.

* ಚಿತ್ರವು 2007ರಲ್ಲಿ ನಿರ್ಮಾಣಗೊಂಡಿದ್ದರೂ, ಹಣಕಾಸು ಪೂರೈಕೆದಾರ ವಾರ್ನರ್ ಇಂಡಿಪೆಂಡೆಂಟ್ ಪಿಕ್ಚರ್ಸ್ ಈ ಚಿತ್ರದ ಕೈಬಿಟ್ಟಿತ್ತು. ಆ ಬಳಿಕ ಫಾಕ್ಸ್ ಸರ್ಚ್‌ಲೈಟ್ ಸಂಸ್ಥೆಯು ಹೆಗಲು ನೀಡಿದ ಕಾರಣ ಅದು ತೆರೆ ಕಂಡಿತ್ತು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments