Webdunia - Bharat's app for daily news and videos

Install App

ಏಷಿಯಾದ ಪ್ರಬಲ ಮಹಿಳೆಯರು

Webdunia
ಸೋನಿಯಾ ಗಾಂಧಿ

ಇಟಲಿಯ ಲೂಸಿಯಾನಾದಿಂದ ಕೇವಲ 50 ಕಿ.ಮಿ. ದೂರದಲ್ಲಿರುವ ವೈಸೆಂಜಾ ಗ್ರಾಮದಲ್ಲಿ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಸ್ಟೆಫಾನೊ ಮತ್ತು ಪಾವೊಲಾ ಮೈನೊ ದಂಪತಿಗಳಿಗೆ 1946 ಡಿಸೆಂಬರ್ 9 ರಂದು ಸೋನಿಯಾಗಾಂಧಿ ಜನಿಸಿದರು.

ಕ್ಯಾಂಬ್ರಿಡ್ಜ್‌ ನಗರದ ಬೆಲ್ ಎಜುಕೇಶನಲ್ ಟ್ರಸ್ಟ್‌ನಲ್ಲಿ ಇಂಗ್ಲಿಷ್ ಭಾಷೆಯನ್ನು ಕಲಿಯಲು ಸೇರ್ಪಡೆಗೊಂಡರು. ಬಡಕುಟುಂಬವಾಗಿದ್ದರಿಂದ ಶಾಲಾ ಶುಲ್ಕವನ್ನು ಭರಿಸಲು ರೆಸ್ಟಾರೆಂಟ್‌ನಲ್ಲಿ ವೇಟರ್ ಕೆಲಸ ಮಾಡಿದರು ಸೋನಿಯಾ ಈ ಸಂದರ್ಭದಲ್ಲಿ ರಾಜೀವ್ ಗಾಂಧಿಯವರನ್ನು ಭೇಟಿ ಮಾಡಿದರು. 1969ರಲ್ಲಿ ರಾಜೀವ್ ಗಾಂಧಿಯವರೊಂದಿಗೆ ಮದುವೆಯಾಯಿತು.

1970 ರಲ್ಲಿ ರಾಹುಲ್ 1972ರಲ್ಲಿ ಪ್ರಿಯಾಂಕಾ ಜನಿಸಿದರು. 1883ರಲ್ಲಿ ಸೋನಿಯಾ ಭಾರತದ ಪೌರತ್ವವನ್ನು ಪಡೆದರು. ಫೋರ್ಬ್ಸ್ ಮ್ಯಾಗಜಿನ್ ಜಗತ್ತಿನ ಮೂರನೇಯ ಪ್ರಭಾವಶಾಲಿ ಮಹಿಳೆಯಂದು ಪ್ರಕಟಿಸಿತು.
ಟೈಮ್ಸ್ ಮ್ಯಾಗ್‌ಜಿನ್ ಜಗತ್ತಿನ 100 ಪ್ರಭಾವಿ ವ್ಯಕ್ತಿಗಳಲ್ಲಿ ಸೋನಿಯಾ ಮೂರನೇಯ ಸ್ಥಾನವನ್ನು ಪಡೆದಿದ್ದಾರೆ ಎಂದು ಪ್ರಕಟಿಸಿದೆ.ಲೋಕಸಭೆಯ ಸಂಸದರಾಗಿ ಯುಪಿಎ ಸರಕಾರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾನಿಯಾ ಮಿರ್ಜಾ

ದೇಶದ ಹೆಸರಾಂತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ 1986ರ ನವೆಂಬರ್ 15ರಂದು ಮುಂಬೈನಲ್ಲಿ ಜನಿಸಿದಳು.ನಂತರ ಸಾನಿಯಾ ಕುಟುಂಬ ಹೈದ್ರಾಬಾದ್‌ಗೆ ಬಂದು ನೆಲೆಸಿತು.ತಂದೆ ಇಮ್ರಾನ್ ಮಿರ್ಜಾ ಮಗಳಿಗೆ ಟೆನಿಸ್ ತರಬೇತಿಯನ್ನು ನೀಡಿದರು. 2003ರಲ್ಲಿ ವೃತ್ತಿಪರ ಆಟಗಾರ್ತಿಯಾದ ಸಾನಿಯಾ, ದೇಶದಲ್ಲಿ ಯಾವುದೇ ಮಹಿಳಾ ಆಟಗಾರ್ತಿ ಪಡೆಯದ ಶ್ರೇಯಾಂಕವನ್ನು ಪಡೆದಿದ್ದಾರೆ. 27 ಸಿಂಗಲ್ಸ್, 18 ಡಬಲ್ಸ್ ಪಂದ್ಯಗಳಲ್ಲಿ ಜಯಗಳಿಸಿದ ಸಾನಿಯಾ ಡಬ್ಲುಟಿಎ ಶ್ರೇಯಾಂಕ ಪಟ್ಟಿಯಲ್ಲಿ ,ಸಿಂಗಲ್ಸ್‌ನಲ್ಲಿ 31 ಡಬಲ್ಸ್‌ನಲ್ಲಿ 18ನೇಯ ಸ್ಥಾನವನ್ನು ಪಡೆದಿದ್ದಾರೆ.

2005 ರಲ್ಲಿ ನಡೆದ ಅಮೆರಿಕ ಓಪನ್ ಪಂದ್ಯಾವಳಿಯಲ್ಲಿ ಗ್ರ್ಯಾಂಡ್‌ ಸ್ಲ್ಯಾಮ್ ಪ್ರಶಸ್ತಿಯನ್ನು ಪಡೆದು, 26ನೇಯ ಶ್ರೇಯಾಂಕವನ್ನು ತಲುಪಿದ್ದರು. ಅಮೆರಿಕ ಓಪನ್ ಪಂದ್ಯಾವಳಿಯಲ್ಲಿ ನಾಲ್ಕನೇಯ ಸುತ್ತನ್ನು ಪ್ರವೇಶಿಸಿದ ಏಕೈಕ ಭಾರತೀಯ ಮಹಿಳೆಯಾಗಿದ್ದಾರೆ. 2005ರಲ್ಲಿ ನಡೆದ ಏಷಿಯನ್ ಟೆನಿಸ್ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ರನ್ನರ್‌ಅಪ್ ಸ್ಥಾನದವರೆಗೂ ಹೋರಾಟ ನಡೆಸಿದ್ದರು.ಹೈದ್ರಾಬಾದ್‌ ಓಪನ್ ಪಂದ್ಯಾವಳಿಯಲ್ಲಿ ಉಕ್ರೆನ್‌ ದೇಶದ ಬೊಂಡಾರೆಂಕೊ ಅವರನ್ನು ಸೋಲಿಸಿ ಗ್ರ್ಯಾಂಡ್‌ ಸ್ಲ್ಯಾಮ್ ಪ್ರಶಸ್ತಿ ಪಡೆದ ಸಾನಿಯಾ ಭಾರತದಲ್ಲಿ ಏಕೈಕ ಮಹಿಳೆಯರಾಗಿದ್ದಾರೆ.

ತಸ್ಲಿಮಾ ನಸ್ರಿನ್

ಬಾಂಗ್ಲಾ ದೇಶದ ಮೈಮೆನ್‌ಸಿಂಗ್‌‌ನಲ್ಲಿ 1962ರ ಅಗಸ್ಟ್‌ 25 ರಂದು ಜನಿಸಿದ ತಸ್ಲಿಮಾ ನಸ್ರಿನ್ ವೃತ್ತಿಯಲ್ಲಿ ವೈದ್ಯರು. ಇಸ್ಲಾಮ್ ಸಮುದಾಯದಲ್ಲಿ ಮಹಿಳೆಯರನ್ನು ನಿಕಷ್ಟವಾಗಿ ನೋಡುವ ರೀತಿಯಿಂದ ನೊಂದು ಇಸ್ಲಾಮ್‌ನಲ್ಲಿ ಮಹಿಳೆಯರ ಸ್ಥಿತಿಗತಿ ಕುರಿತಂತೆ ಬರೆದ ಪುಸ್ತಕ ವಿವಾದದ ಬಿರುಗಾಳಿ ಎಬ್ಬಿಸಿತು.

ಮೈಮೆನ್‌ಸಿಂಗ್‌ ಮೆಡಿಕಲ್ ಕಾಲೇಜ್‌ನಲ್ಲಿ ತಮ್ಮ ವೈದ್ಯಕೀಯ ಅಭ್ಯಾಸವನ್ನು1986ರಲ್ಲಿ ಪೂರ್ಣಗೊಳಿಸಿದ ನಂತರ 1994ರವರೆಗೆ ಫಿಜಿಸಿಯನ್ ಕಾರ್ಯವನ್ನು ನಿರ್ವಹಿಸಿದರು.

1986 ರಲ್ಲಿ ಶಿಕೊರೆ ಬಿಪುಲ್ ಖುದಾ ಎನ್ನುವ ಕವನ ಸಂಕನದಿಂದ ಸಾಹಿತಿಗಳ ಸಾಲಿನಲ್ಲಿ ಹೊಸತೊಂದು ನಕ್ಷತ್ರ ಉದಯವಾದಂತಾಯಿತು. ಆದರೆ ಅಲ್ಪಸಮಯದಲ್ಲಿ ಇಸ್ಲಾಮ್ ವಿರುದ್ದ ಬರೆದ ಲೇಖನಗಳು ದೇಶದಾದ್ಯಂತ ಇರುವ ಮುಸ್ಲಿಮ್‌ರ ಅಕ್ರೋಶಕ್ಕೆ ಏಡೆಮಾಡಿಕೊಟ್ಟಿತು.

ಬಾಂಗ್ಲಾ ದೇಶದಲ್ಲಿ ಹಿಂದು ಧರ್ಮದ ಬಾಲಕಿಯನ್ನು ಮುಸ್ಲಿಮ್ ಧರ್ಮದ ವ್ಯಕ್ತಿ ಅತ್ಯಾಚಾರವೆಸಗಿದ ಘಟನೆಯ ಕುರಿತಂತೆ ಬರೆದ 76 ಪುಟಗಳ ಲಜ್ಜಾ ಕೃತಿ, ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸ್ಥಿತಿಯನ್ನು ಎತ್ತಿ ತೋರಿಸಿತ್ತು.

1993 ರಲ್ಲಿ ಇಸ್ಲಾಮ್ ಮೂಲಭೂತವಾದಿಗಳು ತಸ್ಲಿಮಾ ವಿರುದ್ದ ಮರಣದಂಡನೆಯ ಫತ್ವಾವನ್ನು ಹೊರಡಿಸಿದರು.ಇಸ್ಲಾಮ್ ವಿರುದ್ದ ಲೇಖನವನ್ನು ಬರೆದಿದ್ದಕ್ಕಾಗಿ ಬಾಂಗ್ಲಾ ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿತು. ಎರಡು ತಿಂಗಳ ನಂತರ ನ್ಯಾಯಾಲಯಕ್ಕೆ ಶರಣಾದ ತಸ್ಲಿಮ್ ನಸ್ರಿನ್ ಜಾಮೀನಿನ ಮೇಲೆ ಹೊರಬಂದರು. ಬಾಂಗ್ಲಾದೇಶವನ್ನು ಬಿಟ್ಟು ಫ್ರಾನ್ಸ್,ಸ್ವೀಡನ್, ದೇಶಗಳಲ್ಲಿ ಕೆಲ ಕಾಲ ನೆಲೆಸಿ ಪ್ರಸ್ತುತ ಭಾರತದಲ್ಲಿ ಅಜ್ಞಾತ ಸ್ಥಳದಲ್ಲಿ ವಾಸವಾಗಿದ್ದಾರೆ.

ನೊಬೆಲ್ ವಿಜೇತೆ ಆಂಗ್ ಸಾನ್ ಸು ಕೀ

1947 ರಲ್ಲಿ ಬ್ರಿಟಿಷ್‌ ದಾಸ್ಯದಿಂದ ಬರ್ಮಾದ ಹೊರಬರಲು ಕಾರಣಿಭೂತರಾದ ಆಂಗ್ ಸಾನ್ ಅವರ ಪುತ್ರಿಯೇ ಆಂಗ್ ಸಾನ್ ಸು ಕೀ. ಅದರೆ ಅದೇ ವರ್ಷ ವಿರೋಧಿಗಳು ಹಾರಿಸಿದ ಗುಂಡಿಗೆ ಆಂಗ್ ಸಾನ್ ಬಲಿಯಾದರು. ನಂತರ ರಂಗೂನ್‌ಗೆ ತಾಯಿಯೊಂದಿಗೆ ತೆರಳಿದ ಆಂಗ್ ಸಾನ್ ಸು ಕೀ ಕ್ಯಾಥೋಲಿಕ್ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಣವನ್ನು ಪಡೆದರು.

ನೂತನವಾಗಿ ರಚಿಸಲಾದ ಬರ್ಮಾ ಸರಕಾರದಲ್ಲಿ ತಾಯಿ ಖಿನ್ ಕೈ ಅವರಿಗೆ 1960ರಲ್ಲಿ ಭಾರತ ದೇಶದ ರಾಯಭಾರಿಯನ್ನಾಗಿ ನೇಮಕ ಮಾಡಲಾಯಿತು. ಆಂಗ್ ಸಾನ್ ಸು ಕೀ ನವದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಪಡೆದರು.

1985 ರಲ್ಲಿ ಲಂಡನ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದ ನಂತರ ಬರ್ಮಾ ಸರಕಾರದ ಪರವಾಗಿ ಕರ್ತವ್ಯವನ್ನು ನಿರ್ವಹಿಸಿದರು.1972ರಲ್ಲಿ ಭೂತಾನದ ವಾಸಿಯಾಗಿದ್ದ ಡಾ.ಮೈಕಲ್ ಅರಿಸ್ ಅವರನ್ನು ವಿವಾಹವಾದರು. ಅಲೆಕ್ಸಾಂಡರ್ ಮತ್ತು ಕಿಮ್ ಎನ್ನುವ ಮಕ್ಕಳನ್ನು ಸೂಕಿ ಪಡೆದರು.

1988 ರಲ್ಲಿ ಬರ್ಮಾದಲ್ಲಿ ಅಧಿಕಾರದಲ್ಲಿದ್ದ ಸೋಷಿಯಾಲಿಸ್ಟ್ ಪಕ್ಷ ಅಧಿಕಾರವನ್ನು ಕಳೆದುಕೊಂಡ ನಂತರ ಮಿಲಿಟರಿ ಅಡಳಿತವನ್ನು ಹೇರಲಾಯಿತು. ಮಹಾತ್ಮ ಗಾಂಧಿಯನ್ನು ಆದರ್ಶವಾಗಿರಿಸಿಕೊಂಡಿದ್ದ ಆಂಗ್ ಸಾನ್ ಸು ಕೀ ದೇಶವನ್ನು ಪ್ರಜಾಪ್ರಭುತ್ವದತ್ತ ಸಾಗಿಸಲು ರಾಜಕೀಯವನ್ನು ಪ್ರವೇಶಿಸಿದರು.1989ರಲ್ಲಿ ನ್ಯಾಷನಲ್ ಲೀಗ್ ಆಫ್ ಡೆಮಾಕ್ರೆಸಿ ಎನ್ನುವ ಪಕ್ಷವನ್ನು ಸ್ಥಾಪಿಸಿ ಹೋರಾಟವನ್ನು ಆರಂಭಿಸಿದರು.

ಆದರೆ ಮಿಲಿಟರಿ ಅಡಳಿತ ಆಂಗ್ ಸಾನ್ ಸು ಕೀ ದೇಶವನ್ನು ಬಿಟ್ಟು ತೆರಳದಿದ್ದಲ್ಲಿ ಅವರನ್ನು ಬಂಧಿಸುವುದಾಗಿ ಪ್ರಕಟಿಸಿತು. 1989ರ ಜುಲೈ ತಿಂಗಳ 20ರಂದು ಮಿಲಿಟರಿ ಅಡಳಿತ ಗೃಹ ಬಂಧನ ಘೋಷಿಸಿತು. ಶಾಂತಿಗಾಗಿ ಹೋರಾಟ ನಡೆಸಿದ ಆಂಗ್ ಸಾನ್ ಸು ಕೀ ಅವರಿಗೆ ಅಮೆರಿಕ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಿದೆ.

ಸುನೀತಾ ವಿಲಿಯಮ್ಸ್

ಭಾರತ ಸಂಜಾತೆ ಅಮೆರಿಕ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ 1965ರಲ್ಲಿ ಅಮೆರಿಕದ ಒಹಿವೊ ರಾಜ್ಯದ ಯುಕ್ಲಿಡ್ ನಗರದಲ್ಲಿ ಗುಜರಾತ್‌ನಿಂದ ಅಮೆರಿಕೆಗೆ ವಲಸೆ ಹೋದ ಡಾ.ದೀಪಕ್ ಪಾಂಡ್ಯ ಅವರಿಗೆ ಜನಿಸಿದಳು.

ಫ್ಲೋರಿಡಾದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದ ನಂತರ ಗಗನಯಾತ್ರಿಯಾಗಿ ಆಯ್ಕೆಗೊಂಡರು. 1987ರಲ್ಲಿ ಅಮೆರಿಕದ ನಾವೆಲ್ ಅಕಾಡೆಮಿಗೆ ಆಯ್ಕೆಯಾಗಿ ನಾವೆಲ್ ಅವಿಯೇಟರ್ ಹುದ್ದೆಯನ್ನು ನಿರ್ವಹಿಸಿದರು.

ಅಮೆರಿಕದ ನಾಸಾ ಸಂಸ್ಥೆ 2006ರ ಮೇ 6 ರಂದು 14ನೇಯ ಗಗನನೌಕೆ ಉಡಾವಣೆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಗಗನ ನಿಲ್ದಾಣದಲ್ಲಿ ಯೋಜನೆಯ ಫ್ಲೈಟ್ ಇಂಜೀನಿಯರ್ ಕಾರ್ಯವನ್ನು ಸುನೀತಾ ವಿಲಿಯಮ್ಸ್‌ಗೆ ವಹಿಸಲಾಯಿತು.

ಅಂತಾರಾಷ್ಟ್ರೀಯ ಗಗನ ನಿಲ್ದಾಣದಲ್ಲಿ ದುರಸ್ತಿ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿ ಮರಳಿದ ಸುನೀತಾಗೆ ಜಗತ್ತು ಸ್ವಾಗತ ಬಯಸಿತು.ಅಮೆರಿಕದ ಡೆಪ್ಯೂಟಿ ಮಾರ್ಷಲ್ ಮೈಖಲ್ ವಿಲಿಯಮ್ಸ್ ಅವರನ್ನು ಮದುವೆಯಾದ ಸುನೀತಾಗೆ ಭಾರತದೊಡನೆ ಅವಿನಾವಭಾವ ಸಂಬಂಧ

ಕಲ್ಪನಾ ಚಾವ್ಲಾ‌ಳ ನಂತರ ಎರಡನೇಯ ಸ್ಥಾನವನ್ನು ಪಡೆದ ಸುನೀತಾ,ಗಗನನೌಕೆಯ ದುರಂತದಲ್ಲಿ ಮಡಿದ ಕಲ್ಪನಾಳ ನೆನಪನ್ನು ಮರುಕಳಿಸಿದ್ದಾರೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments