ವೈಜನಾಥ್ ಪಾಟೀಲ್ ಬಿಜೆಪಿಗೆ?

ನಾಯ್ಡು ಜೊತೆ ಮಾತುಕತೆ

Webdunia
ಸೋಮವಾರ, 5 ಮೇ 2008 (19:42 IST)
ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿರುವ ಹೈದರಾಬಾದ್-ಕರ್ನಾಟಕದ ಪ್ರಮುಖ ನಾಯಕ ವೈಜನಾಥ್ ಪಾಟೀಲ್ ಬಿಜೆಪಿಗೆ ಸೇರುವುದು ಬಹುತೇಕ ಖಚಿತವಾದಂತಾಗಿದೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಇಂದು (ಸೋಮವಾರ) ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಅವರು ಕಾಂಗ್ರೆಸ್‌ನ ಮುಖಂಡರಾಗಿರುವ ಎಂ.ರಘುಪತಿಯವರನ್ನು ಪಕ್ಷಕ್ಕೆ ಕರೆಸಿಕೊಂಡ ಬಳಿಕ ಮತನಾಡಿದ ನಾಯ್ಡು, ವೈಜನಾಥ್ ಸೇರ್ಪಡೆ ವಿಷಯ ಮಾತುಕತೆಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

ವೈಜನಾಥ್ ಪಾಟೀಲ್ ಈ ಹಿಂದೆ ಜೆಡಿಎಸ್‌ನಲ್ಲಿದ್ದರು. ಆದರೆ ಆ ಬಳಿಕ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ತಿರುಗಿ ಬಿದ್ದ ವೈಜನಾಥ್, ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈಗ ಮತ್ತೆ ಕಾಂಗ್ರೆಸ್‌ನಿಂದ ಟಿಕೆಟ್ ವಂಚಿತರಾಗಿರುವ ಪಾಟೀಲ್ ಬಿಜೆಪಿ ಬಾಗಿಲನ್ನು ತಟ್ಟಿದ್ದಾರೆ.

ಅಲ್ಲದೆ, ಇಂದು ನಡೆದ ಕಾರ್ಯಕ್ರಮದಲ್ಲಿ ರಘುಪತಿ ಬಿಜೆಪಿಗೆ ಸೇರ್ಪಡೆಗೊಂಡರೆ, ಇತ್ತ ಹೊಟೇಲ್‌ನ ಹೊರಭಾಗದಲ್ಲಿ ವೈಜನಾಥ್ ಕಾಣಿಸಿಕೊಂಡಿದ್ದು, ವದಂತಿಗೆ ಇಂಬು ನೀಡಿದಂತಾಗಿದೆ. ಬಿಜೆಪಿ ಮೂಲದ ಪ್ರಕಾರ ಇನ್ನೆರಡು ದಿನಗಳಲ್ಲಿ ವೈಜನಾಥ್ ಪಕ್ಷ ಸೇರುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿವೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆ ಸುತ್ತಮುತ್ತಾ ಸಿಗುವ ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು ಇಲ್ಲಿದೆ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

Show comments