Select Your Language

Notifications

webdunia
webdunia
webdunia
webdunia

ಬಜೆಟ್ 2008-09 ಮುಖ್ಯಾಂಶಗಳು ಇಲ್ಲಿವೆ

ಬಜೆಟ್ 2008-09 ಮುಖ್ಯಾಂಶಗಳು ಇಲ್ಲಿವೆ
, ಶುಕ್ರವಾರ, 29 ಫೆಬ್ರವರಿ 2008 (14:14 IST)

ಬಜೆಟ್ 2008-09 ಮುಖ್ಯಾಂಶಗಳು

* ನೇರ ಡಿವಿಡೆಂಡ್ ತೆರಿಗೆಯಲ್ಲಿ (ಶೇ.15) ಬದಲಾವಣೆಯಿಲ್ಲ

* ಎಲ್ಲಾ ಫಾರ್ಮಾ ಸರಕುಗಳ ಮೇಲೆ ಅಬಕಾರಿ ಸುಂಕ ರಿಯಾಯಿತಿ ಶೇ.16ರಿಂದ ಶೇ.8ಕ್ಕೆ

* ಸಗಟು ಸಿಮೆಂಟ್ ಮೇಲೆ ಅಬಕಾರಿ ಸುಂಕ ಟನ್‌ಗೆ 400 ರೂ.

* ಕೇಂದ್ರೀಯ ಮಾರಾಟ ತೆರಿಗೆ ಶೇ.3ರಿಂದ ಶೇ.2ಕ್ಕೆ ಇಳಿಕೆ

* ಬ್ಯಾಂಕಿಂಗ್ ನಗದು ವ್ಯವಹಾರ ತೆರಿಗೆ ಹಿಂದಕ್ಕೆ

* ನಗರಕ್ಕೆ ಹೊರತಾದ ಪ್ರದೇಶಗಳಲ್ಲಿ ಆಸ್ಪತ್ರೆ ನಿರ್ಮಿಸಲು ಇರುವ ತೆರಿಗೆ ರಜೆ 5 ವರ್ಷ

* ಯುನೆಸ್ಕೋ ಹೆರಿಟೇಜ್ ಪ್ರದೇಶಗಳಲ್ಲಿ 2,3,4 ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ 5 ವರ್ಷ ತೆರಿಗೆ ರಜೆ

* ಹಿರಿಯ ನಾಗರಿಕರ ತೆರಿಗೆ ರಿಯಾಯಿತಿ ಮಿತಿ ರೂ. 1,95,000 ರಿಂದ 2,25,000 ರೂ.ಗೆ

* ಕಾರ್ಪೊರೇಟ್ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ

* ಸರ್ಚಾರ್ಜ್ ದರದಲ್ಲಿ ಯಾವುದೇ ಬದಲಾವಣೆಯಿಲ್ಲ

* ಆದಾಯ ತೆರಿಗೆ ಮಿತಿ 1.5 ಲಕ್ಷಕ್ಕೆ ಏರಿಕೆ, ಮಹಿಳೆಯರಿಗೆ 1.8 ಲಕ್ಷ

* ತೆರಿಗೆ-ಜಿಡಿಪಿ ಅನುಪಾತ 12.5 ಶೇ.ಕ್ಕೆ ಏರಿಕೆ

* ಸೇವಾ ತೆರಿಗೆಯಡಿ ನಾಲ್ಕು ಹೊಸ ಸೇವೆಗಳು

* ಹೈಬ್ರಿಡ್ ಕಾರುಗಳ ಅಬಕಾರಿ ಸುಂಕ ಶೇ.24ರಿಂದ ಶೇ.14ಕ್ಕೆ ಇಳಿಕೆ

* ಫಿಲ್ಟರ್ ಮತ್ತು ಫಿಲ್ಟರ್ ರಹಿತ ಸಿಗರೇಟುಗಳಿಗೆ ಸಮಾನ ಅಬಕಾರಿ ಸುಂಕ

* ಏಡ್ಸ್-ನಿರೋಧಕ ಔಷಧಗಳಿಗೆ ಅಬಕಾರಿ ಸುಂಕ ಇಲ್ಲ

* ಸಣ್ಣ ಕಾರು, ದ್ವಿ-ತ್ರಿ ಚಕ್ರ ವಾಹನಗಳ ಅಬಕಾರಿ ಸುಂಕ ಶೇ.16ರಿಂದ ಶೇ.12ಕ್ಕೆ ಇಳಿಕೆ

* ಕೆಲವು ಐಟಿ, ಹಾರ್ಡ್‌ವೇರ್ ಪರಿಕರಗಳಿಗೆ ಕಸ್ಟಮ್ಸ್ ಸುಂಕ ರಿಯಾಯಿತಿ

* ಫಾರ್ಮಾಸ್ಯೂಟಿಕಲ್ ವಲಯ ಅಬಕಾರಿ ಸುಂಕ ಶೇ.16ರಿಂದ ಶೇ.8ಕ್ಕೆ ಇಳಿಕೆ

* ಸೆಟ್ ಟಾಪ್ ಬಾಕ್ಸ್‌ಗಳಿಗೆ ಅಬಕಾರಿ ಸುಂಕ ಪೂರ್ಣ ರಿಯಾಯಿತಿ

* ಜೀವರಕ್ಷಕ ಔಷಧಿಗಳಿಗೆ ಅಬಕಾರಿ ಶುಲ್ಕ ಶೂನ್ಯ

* ಜೀವರಕ್ಷಕ ಔಷಧ ತಯಾರಿಕೆಗೆ ಬಳಸುವ ವಸ್ತುಗಳ ಕಸ್ಟಮ್ಸ್ ಸುಂಕ ಶೇ.10ರಿಂದ ಶೇ.5ಕ್ಕೆ ಇಳಿಕೆ

* ರಾಜ್ಯಾದಾಯ ಕೊರತೆ ಶೇ.3.1

* ಕಾಮನ್ವೆಲ್ತ್ ಕ್ರೀಡೆಗೆ 624 ಕೋಟಿ ರೂ.

* 1.57 ದಶಲಕ್ಷ ಗೃಹಗಳ ನಿರ್ಮಾಣ

* 22 ಸೈನಿಕ ಶಾಲೆಗಳಿಗೆ 44 ಕೋಟಿ ರೂ.

* ರಾಷ್ಟ್ರೀಯ ವ್ಯಾಘ್ರ ಸಂರಕ್ಷಣಾ ಪ್ರಾಧಿಕಾರಕ್ಕೆ 50 ಕೋಟಿ ರೂ. ಅನುದಾನ

* ರಕ್ಷಣಾ ಅನುದಾನ ಶೇ.10 ಅಂದರೆ 1,05,000 ಕೋಟಿಗೆ ಏರಿಕೆ

* ಎಲ್ಐಸಿಗೆ 1 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ

* ರಾಷ್ಟ್ರೀಯ ಹೆದ್ದಾರಿ ಯೋಜನೆಗೆ 12,966 ಕೋಟಿ ರೂ.

* ಪಿಡಿಎಸ್ ಯೋಜನೆಯಡಿ ಆಹಾರ ಸಬ್ಸಿಡಿಗೆ 32,667 ಕೋಟಿ ರೂ.

* ಎಲ್ಲಾ ವಹಿವಾಟುಗಳಿಗೆ ಪಾನ್ (ಪಿಎಎನ್) ಕಾರ್ಡ್ ಅಗತ್ಯ

* ಟ್ರೇಡಿಂಗ್, ಕಾರ್ಪೊರೇಟ್ ಬಾಂಡ್‌ಗಳಿಗೆ ಮಾರುಕಟ್ಟೆ ವಿಸ್ತರಣೆ

* ನೇಕಾರಿಕೆ ವಲಯದ ಕ್ಲಸ್ಟರ್‌ಗಳಿಗೆ 340 ಕೋಟಿ ರೂ.

* ಜವಳಿ ಪಾರ್ಕ್‌ಗಳಿಗೆ 450 ಕೋಟಿ ರೂ., 30 ಜವಳಿ ಪಾರ್ಕ್‌ಗಳ ಸ್ಥಾಪನೆ

* ರಫ್ತು ವಲಯಕ್ಕೆ 8,351 ಕೋಟಿ ರೂ. ಸಬ್ಸಿಡಿ

* ವಿದ್ಯುತ್ ವಿತರಣೆಗೆ 800 ಕೋಟಿ ರೂ.

* ಮಾರ್ಚ್ ಒಳಗೆ 17 ಲಕ್ಷ ನೇಕಾರರು ಆರೋಗ್ಯ ವಿಮಾ ಯೋಜನೆಯಡಿ

* ಒಂದು ಲಕ್ಷ ಹೊಸ ಗ್ರಾಮೀಣ ಬ್ರಾಡ್‌ಬ್ಯಾಂಡ್ ಕೇಂದ್ರಗಳು

* 11ನೇ ಯೋಜನೆಯಡಿ ವಿದ್ಯುತ್ ಉತ್ಪಾದನಾ ಮಿತಿ 77,500 ಮೆ.ವಾ.

* ಸಾಲ ಮನ್ನಾದಿಂದ 4 ಕೋಟಿ ರೈತರಿಗೆ ಲಾಭ

* ಸಾಲ ಮನ್ನಾದ ಒಟ್ಟು ಅಂದಾಜು ಮೊತ್ತ 50 ಸಾವಿರ ಕೋಟಿ ರೂ.

* ಬಜೆಟ್ ಘೋಷಣೆಯಾದ ತಕ್ಷಣ ಸೆನ್ಸೆಕ್ಸ್ ಶೇ.2 ಇಳಿಕೆ

* ರೈತರ ಸಾಲಮನ್ನಾ ಯೋಜನೆ 2008ರ ಜೂನ್ 30ರೊಳಗೆ ಪೂರ್ಣ

* ಕಿರು ರೈತರಿಗೆ ಸಾಲಮನ್ನಾ ಘೋಷಣೆ: ಬ್ಯಾಂಕು ಶೇರುಗಳ ಸೂಚ್ಯಂಕ ಕುಸಿತ

* 24 ಬೃಹತ್, 750 ಕಿರು ನೀರಾವರಿ ಯೋಜನೆಗಳು

* ಸರಕಾರಿ ಬ್ಯಾಂಕುಗಳ ಎಲ್ಲಾ ಕೃಷಿ ಸಾಲಗಳು ಸಾಲಮನ್ನಾ ಯೋಜನೆಯಡಿ.

* ಸಾಮಾನ್ಯ ಮತ್ತು ಕಿರು ರೈತರ ಎಲ್ಲಾ ಸಾಲಗಳ ಮನ್ನಾ

* ರಾಷ್ಟ್ರೀಯ ತೋಟಗಾರಿಕಾ ಮಿಶನ್‌ಗೆ 1100 ಕೋಟಿ ರೂ.

* ಗಡಿ ಪ್ರದೇಶಗಳ ಅಭಿವೃದ್ಧಿಗೆ 500 ಕೋಟಿ ರೂ.

* ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ 2,80,000 ಕೋಟಿ ರೂ.

* ಹಿರಿಯ ನಾಗರಿಕರಿಗಾಗಿ 400 ಕೋಟಿ ರೂ. ರಾಷ್ಟ್ರೀಯ ಯೋಜನೆ

* ಖಾರಿಫ್, ರಾಬಿ ಬೆಳೆಗಳಿಗೆ ರಾಷ್ಟ್ರೀಯ ಕೃಷಿ ಯೋಜನೆ ಮುಂದುವರಿಕೆ

* ಚಹಾ ಸಂಶೋಧನಾ ಸಂಸ್ಥೆಗೆ 20 ಕೋಟಿ ರೂ.

* ಹಿರಿಯ ನಾಗರಿಕರಿಗಾಗಿ 400 ಕೋಟಿ ರೂ.ಗಳ ರಾಷ್ಟ್ರೀಯ ಯೋಜನೆ

* 14 ರಾಷ್ಟ್ರೀಯ ಯೋಜನೆಗಳಿಗೆ ಸರಕಾರ ಅಸ್ತು

* ಅಲ್ಪಸಂಖ್ಯಾತ ಸಚಿವಾಲಯದ ನಿಧಿ ದುಪ್ಪಟ್ಟು ಏರಿಕೆ (1 ಸಾವಿರ ಕೋಟಿ ರೂ.)

* ಚೆನ್ನೈ ಸಮೀಪ ಸ್ಥಾಪಿಸಲಿರುವ ಉಪ್ಪು ನೀರು ಸಂಸ್ಕರಣಾ ಕೇಂದ್ರಕ್ಕೆ 300 ಕೋಟಿ ರೂ.

* ರಾಷ್ಟ್ರೀಯ ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಪೊರೇಶನ್‌ಗೆ 75 ಕೋಟಿ ರೂ.

* ರಾಜೀವ್ ಗಾಂಧಿ ರಾಷ್ಟ್ರೀಯ ಫೆಲೋಶಿಪ್ ಕಾರ್ಯಕ್ರಮಕ್ಕೆ 75 ಕೋಟಿ ರೂ.

* ಮಹಿಳಾ-ಉದ್ದೇಶಿತ ಯೋಜನೆಗಳಿಗೆ 11,460 ಕೋಟಿ ರೂ.

* ರಾಜೀವ್ ಗಾಂಧಿ ಕುಡಿಯುವ ನೀರು ಯೋಜನೆಗೆ 6500 ಕೋಟಿಯಿಂದ 7300 ಕೋಟಿಗೆ ಏರಿಕೆ

* ಪರಿಶಿಷ್ಟ ಜಾತಿ/ವರ್ಗಗಳಿಗೆ 3966 ಕೋಟಿ ರೂ.

* ಉ.ಪ್ರ., ಬಿಹಾರದಲ್ಲಿ ಪೋಲಿಯೋ ನಿರ್ಮೂಲನೆಗೆ 1,042 ಕೋಟಿ ರೂ.

* ಗ್ರಾಮೀಣ ಉದ್ಯೋಗ ಯೋಜನೆಗೆ 160 ಶತಕೋಟಿ ರೂ.

* ಈಶಾನ್ಯ ಅಭಿವೃದ್ಧಿ ಸಚಿವಾಲಯಕ್ಕೆ 1455 ಕೋಟಿ ರೂ.

* ಅಸಂಘಟಿತ ಕ್ಷೇತ್ರದ ಪ್ರತಿಯೊಬ್ಬ ಕಾರ್ಮಿಕರಿಗೆ 30 ಸಾವಿರ ರೂ. ಆರೋಗ್ಯ ವಿಮೆ

* ಅಂಗನವಾಡಿ ಸಹಾಯಕರ ವೇತನ 750 ರೂ.ಗೆ ಏರಿಕೆ

* 16 ಕೇಂದ್ರೀಯ ವಿವಿಗಳ ಸ್ಥಾಪನೆ

* ಭೋಪಾಲ ಮತ್ತು ತಿರುವನಂತಪುರಗಳಲ್ಲಿ ಮೂರು ಐಐಎಸ್ಸಿಗಳ ಸ್ಥಾಪನೆ

* ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಗೆ ಶೇ.15 ಹೆಚ್ಚು ಅನುದಾನ

* ಸರ್ವ ಶಿಕ್ಷಾ ಅಭಿಯಾನಕ್ಕೆ 13,100 ಕೋಟಿ ರೂ.

* ಮಧ್ಯಾಹ್ನದೂಟ ಯೋಜನೆ ಹಿರಿಯ ಪ್ರಾಥಮಿಕ ಶಾಲೆಗಳಿಗೂ ವಿಸ್ತರಣೆ

* ಆಂಧ್ರ, ಬಿಹಾರ, ರಾಜಸ್ಥಾನಗಳಲ್ಲಿ ಮೂರು ಹೊಸ ಐಐಟಿಗಳ ಸ್ಥಾಪನೆ

* 6000 ಅತ್ಯುತ್ತಮ ದರ್ಜೆಯ ಶಾಲೆಗಳ ಸ್ಥಾಪನೆ

* ಭಾರತ್ ನಿರ್ಮಾಣ್ ಯೋಜನೆಗೆ 31,280 ಕೋಟಿ ರೂ. ಅನುದಾನ

* ಶಿಕ್ಷಣ ವೆಚ್ಚ ಶೇ.20 ಹೆಚ್ಚಳ

* ಶೇ. 2.6 ಕೃಷಿ ಬೆಳವಣಿಗೆ ನಿರೀಕ್ಷೆ

* ಹಣದುಬ್ಬರ ನಿಯಂತ್ರಣದಲ್ಲಿಡುವುದೇ ಪರಮೋಚ್ಚ ಗುರಿ: ವಿತ್ತ ಸಚಿವ

* ಜಿಡಿಪಿ ಶೇ.8.8ರ ಗತಿಯಲ್ಲಿ ಪ್ರಗತಿ : ಚಿದಂಬರಂ ವಿಶ್ವಾಸ

Share this Story:

Follow Webdunia kannada