ಬಜೆಟ್‌ನಿಂದ ಬ್ಯಾಂಕಿಂಗ್ ವಲಯದ ನಿರೀಕ್ಷೆ ಏನು ?

Webdunia
ಗುರುವಾರ, 21 ಫೆಬ್ರವರಿ 2008 (14:04 IST)
ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಮಂಡಿಸಲಿರುವ ಬಜೆಟ್‌‍ನಿಂದ ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಕೆಲ ನಿರೀಕ್ಷೆ ಮತ್ತು ರಿಯಾಯಿತಿಗಳನ್ನು ಇಟ್ಟುಕೊಂಡಿವೆ. ಇತ್ತೀಚೆಗಷ್ಟೆ ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಾಹಕರುಗಳು ಪಿ ಚಿದಂಬರಂ ಅವರನ್ನು ಭೇಟಿಯಾಗಿ ಬ್ಯಾಂಕಿಂಗ್ ವಲಯ ಬಜೆಟ್‌ನಲ್ಲಿ ಕೆಲ ರಿಯಾಯಿತಿಗಳನ್ನು ನೀಡುವಂತೆ ಕೇಳಿಕೊಂಡಿದ್ದಾರೆ.

ಬ್ಯಾಂಕ್ ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ನಿವೃತ್ತಿ ವೇತನ ನಿಧಿಗೆ ಬ್ಯಾಂಕ್‌ನಿಂದ ನೀಡಲಾಗುತ್ತಿರುವ ಮೊತ್ತದಲ್ಲಿ ಕಡಿತ; ಗ್ರ್ಯಾಚುಯಿಟಿ ಫಂಡ್‌ಗಳಿಗೆ ನೀಡಲಾಗುತ್ತಿರುವ ಬ್ಯಾಂಕ್ ಮೂಲಕ ಸಂದಾಯವಾಗುತ್ತಿರುವ ಮೊತ್ತದಲ್ಲಿ ಕಡಿತಗೊಳಿಸುವುದು; ಸದರಿ ಕಡಿತ ವಾರ್ಷಿಕ ಸಂಬಳದ ಮೊತ್ತದ ಶೇ 8.5 ಮೀರಕೂಡದು; ಕೆಟ್ಟ ಮತ್ತು ಸಂಶಯಾಸ್ಪದ ಸಾಲಗಳ ವಸೂಲಾತಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ಬದಲಾವಣೆ; ಕಲಂ 196ರ ಅನ್ವಯ ಬ್ಯಾಂಕುಗಳಿಗೆ ಮೂಲ ಆದಾಯದಲ್ಲಿ ತೆರಿಗೆ ಕಡಿತ ( TDS) ನಿಂದ ವಿನಾಯಿತಿ ನೀಡುವುದು; ವಿಶ್ವ ಬ್ಯಾಂಕಿನ ಕಲಂ 115ರ ಅಡಿಯಲ್ಲಿ ಬರುವ ಹೆಚ್ಚುವರಿ ಆದಾಯ ತೆರಿಗೆಗೆ (ಉದಾ; ನಿವೃತ್ತಿ ವೇತನ ನಿಧಿ) ಸಂಬಂಧಿಸಿದಂತೆ ಇರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಲು ಮನವಿ ಮಾಡಿಕೊಂಡಿದ್ದಾರೆ.

ನಿವೃತ್ತಿ ವೇತನ ನಿಧಿ ಇಲ್ಲವೆ ಭವಿಷ್ಯ ನಿಧಿಗೆ ಬ್ಯಾಂಕ್‌ನಿಂದ ಸಂದಾಯವಾಗುತ್ತಿರುವ ಮೊತ್ತವನ್ನು ನಿಯಮ 87ರಡಿಯಲ್ಲಿ ಶೇ 27ಕ್ಕೆ ಸೀಮಿತಗೊಳಿಸಬೇಕು. 1962ರಲ್ಲಿ ಆದಾಯ ತೆರಿಗೆ ಕಾನೂನು ಜಾರಿಗೆ ಬಂದ ನಂತರ ಮತ್ತು ಕಳೆದ 45 ವರ್ಷಗಳ ಅವಧಿಯಲ್ಲಿ ವ್ಯಕ್ತಿಗಳ ಸರಾಸರಿ ಜೀವಿತಾವಧಿ ಹೆಚ್ಚಾಗಿರುವ ಕಾರಣ; ಈಗಾಗಲೇ ಜಾರಿಯಲ್ಲಿರುವ ನಿವೃತ್ತಿ ವೇತನ ಯೋಜನೆಯ ನಿಯಮಗಳನ್ನು ಸರಿಪಡಿಸಬೇಕಾಗಿದೆ. ನಿರ್ದಿಷ್ಟ ಪಡಿಸಿರುವ ನಿವೃತ್ತಿ ವೇತನದ ನಿಯಮಗಳ ಕಾರಣ ಬ್ಯಾಂಕಿಂಗ್ ವಲಯದ ಮೇಲೆ ಆರ್ಥಿಕ ಹೊಣೆ ಹೆಚ್ಚಿದೆ ಎಂದು ಬ್ಯಾಂಕುಗಳ ಮುಖ್ಯಸ್ಥರು ವಾದಿಸಿದ್ದಾರೆ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

Show comments