Webdunia - Bharat's app for daily news and videos

Install App

ಹರುಷ ತಂದ ಚಕ್ ದೇ ಗೋಲಿನ ವರ್ಷ

ನಾಗೇಂದ್ರ ತ್ರಾಸಿ
PTI
ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆಯಂತೆ. ಹಾಗೇ ಭಾರತೀಯ ಹಾಕಿ ತಂಡ ತದ್ವಿರುದ್ಧವಾಗಿ ಮೊದಲ ಬಾರಿಗೆ ದೋಹಾ ಏಷಿಯನ್ ಹಾಕಿ ಕ್ರೀಡಾಕೂಟದಲ್ಲಿ ಐದನೆ ಸ್ಥಾನಕ್ಕೆ ಇಳಿಯಿತು. ಮೊದಲ ಬಾರಿಗೆ ಪದಕ ಪಟ್ಟಿಯಿಂದ ಹೊರ ಬಿದ್ದ ತಂಡ ಅಲ್ಲಿಗೆ ಮುಗಿಯಿತು ಭಾರತೀಯ ಹಾಕಿಯ ಅಧ್ಯಾಯ ಎಂದುಕೊಂಡಿದ್ದರು ಹಲವರು.

ಹಾಗೆ ಆಗಲಿಲ್ಲ. ಪಾತಾಳ ಕಂಡ ತಂಡ, 2007ರಲ್ಲಿ ತೋರಿದ ಆ ಪ್ರದರ್ಶನ ಎಂದಿಗೂ ಮರೆಯಲಾರದಂತಹದು. 7ನೇ ಏಷ್ಯಾ ಕಪ್ ಹಾಕಿ ಗೆದ್ದ ಸಮಯದಲ್ಲಿ ಇಡೀ ದೇಶಕ್ಕೆ ದೇಶವೇ ಚಕ್ ದೇ ಇಂಡಿಯಾ ಎಂದು ಕೂಗಿತು. ಸಾಮಾನ್ಯ ಕ್ರೀಡಾಭಿಮಾನಿಗೆ ಕೂಡ ಅದು ಹರುಷ ತಂದ ಘಳಿಗೆ. ಇದೇ ಸಮಯದಲ್ಲಿ ಕಿಂಗ್ ಖಾನ್ ಅಭಿನಯದ ಚಕ್ ದೇ ಇಂಡಿಯಾ ಹಿಂದಿ ಚಿತ್ರ ಬಿಡುಗಡೆಯಾಗಿತ್ತು. ಅದು ಮಾಡಿದ ಮೋಡಿಗೆ ಇಂದು ಭಾರತೀಯ ಹಾಕಿ ತಂಡಕ್ಕೆ ಚಕ್ ದೇ ಇಂಡಿಯಾ ಎಂದೇ ನಾಮಕರಣವಾಗಿದೆ.

2006 ರ ದೋಹಾ ಏಷ್ಯನ್ ಕ್ರೀಡಾಕೂಟದ ಪತನವೇ 2007ರ ಪುನರುತ್ಥಾನಕ್ಕೆ ಹಾದಿ ಕಲ್ಪಿಸಿಕೊಟ್ಟಿತು. ಮೇ 2007ರಲ್ಲಿ ಮಲೇಷಿಯಾದಲ್ಲಿ ನಡೆದ ಸುಲ್ತಾನ್ ಅಜ್ಲಾನ್ ಷಾ ಹಾಕಿ ಕಪ್ ಟೂರ್ನಿಯಲ್ಲಿ ಭಾರತೀಯ ಹಾಕಿ ತಂಡ ತನ್ನ ಪೂರ್ಣ ಪರಿಶ್ರಮವನ್ನು ಹಾಕಿತು. ಫಲವಾಗಿ ಜಿಗುಟು ಸ್ವಭಾವದ ಕೊರಿಯನ್ನರನ್ನು 1-0 ಗೋಲುಗಳ ಅಂತರದಿಂದ ಸದೆಬಡಿದು ಕಂಚಿನೊಂದಿಗೆ ಮರಳಿದ್ದು, ಕೋಚ್ ಕರ್ವಾಲೋ ಮಾಡಿದ ಕರಾಮತ್ತು. ಒಂದೇ ವರ್ಷ ಎನ್ನುವುದಕ್ಕಿಂತ ಕೆಲವೇ ತಿಂಗಳುಗಳಲ್ಲಿ ದೂರ್ವಾಸ ಮುನಿ ಜಾಕ್ವಿಮ್ ಕರ್ವಾಲೋ ಅದೇನು ಮಾಡಿದರೊ ಗೊತ್ತಿಲ್ಲ. ಹಳಿ ತಪ್ಪಿದ ಹಾಕಿಯನ್ನು ಹಳಿಯ ಮೇಲೆ ತರುವ ಪ್ರಯತ್ನದಲ್ಲಿ ಸಫಲರಾದರು. ಭಾರತೀಯ ಹಾಕಿ ತಂಡದಲ್ಲಿ ಒಂದೇ ಒಂದು ಸಮಸ್ಯೆ ಇತ್ತು. ಅದು ಆತ್ಮ ವಿಶ್ವಾಸದ ಕೊರತೆ.

ಮತ್ತೆ ಜುಲೈನಲ್ಲಿ ಬಂದಿತು ಚಾಂಪಿಯನ್ ಚಾಲೆಂಜ್ ಹಾಕಿ ಟೂರ್ನಿ, ಈ ಬಾರಿ ಕೂಡ ಭಾರತದ ಗುರಿ ತಪ್ಪಲಿಲ್ಲ. ಇಂಗ್ಲೆಂಡ್ ತಂಡವನ್ನು 4-3 ಗೋಲುಗಳಿಂದ ಮಣಿಸಿದ ಭಾರತ ಕಂಚನ್ನು ದಕ್ಕಿಸಿಕೊಂಡು ಸ್ವದೇಶಕ್ಕೆ ಮರಳಿತು.

ಭಾರತೀಯ ಹಾಕಿ, ಜಗತ್ತಿಗೆ ಅಸಲು ಚಕ್ ದೇ ಹೇಳಿದ್ದು ಸೆಪ್ಟಂಬರ್ ತಿಂಗಳಿನಲ್ಲಿ, ಚೆನ್ನೈನ ಮೇಯರ್ ರಾಧಾಕೃಷ್ಣ ಹಾಕಿ ಕ್ರೀಡಾಂಗಣದಲ್ಲಿ ನಡೆದ ಏಳನೆ ಬಿಎಸ್ಎನ್ಎಲ್ ಏಷಿಯಾ ಕಪ್ ಹಾಕಿ ಟೂರ್ನಿಯಲ್ಲಿ ಅಪ್ಪಟ ಏಷಿಯಾ ಶೈಲಿಯನ್ನು ಆಡಿದ ಭಾರತ, ಒಂದೇ ಒಂದು ಲೀಗ್ ಹಂತದ ಪಂದ್ಯದಲ್ಲಿ ಸೋಲಲಿಲ್ಲ. ಟೂರ್ನಿಯ ಫೈನಲ್ ಪಂದ್ಯದಲ್ಲಿ ದ. ಕೊರಿಯ ತಂಡಕ್ಕೆ 7-2 ಗೋಲುಗಳ ಅಂತರದಿಂದ "ಚಕ್" ಹೇಳಿ ಚಾಂಪಿಯನ್ ಪಟ್ಟಕ್ಕೆರಿತು. ಭಾರತೀಯ ಹಾಕಿ ತಂಡವು ಏಷಿಯಾ ಕಪ್ ಹಾಕಿ ಟೂರ್ನಿಯಲ್ಲಿ ಸುರಿಸಿದ 57 ಗೋಲುಗಳು ಟೂರ್ನಿಯೊಂದರಲ್ಲಿ ತಂಡವೊಂದು ಗಳಿಸಿದ ಅತಿ ಹೆಚ್ಚು ಗೋಲುಗಳು.

ವನಿತೆಯರ ಚಕ್ ದೇ
PTI

ಪುರುಷ ಹಾಕಿ ತಂಡದಂತೆ ಮಹಿಳಾ ಹಾಕಿ ತಂಡ ಕೂಡ 2007ರಲ್ಲಿ ಅದ್ಬುತ ಪ್ರದರ್ಶನ ನೀಡಿತು. ಡಿಸೆಂಬರ್ ಐದರಂದು ಲಾಲ್ ಬಹಾದ್ದೂರ್ ಶಾಸ್ತ್ರಿ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಝರ್‌ಬೈಜಾನ್ ತಂಡವನ್ನು 1-0 ಗೋಲಿನ ಅಂತರದಿಂದ ಮಣಿಸಿ ತನ್ನ ಪುನರುತ್ಥಾನವನ್ನು ಜಗತ್ತಿಗೆ ತೋರ್ಪಡಿಸಿತು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments