Webdunia - Bharat's app for daily news and videos

Install App

ಫುಟ್ಬಾಲ್‌ಗೆ ಸವಿನೆನಪಿನ ವರುಷದ ಹರುಷ

Webdunia
ಮಂಗಳವಾರ, 25 ಡಿಸೆಂಬರ್ 2007 (17:52 IST)
PTI
2007. ಭಾರತೀಯ ಫುಟ್ಬಾಲ್‌ಗೆ ಸವಿನೆನಪಿನ ವರುಷ, ಸೋಲಿನ ಸುಳಿಯಲ್ಲಿ ಸಿಲುಕಿ ಎಲ್ಲಿಯೂ ಕಾಣದಿದ್ದ ತಂಡವೊಂದು ದಿಢೀರನೆ ಅಟ್ಟಕ್ಕೇರಿದರೆ ಆಗುವ ಖುಷಿ ಇದೆಯಲ್ಲ ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕೆನಿಸುತ್ತದೆ.

ಹಾಗೇ ನೋಡಿದರೆ ನೆಹರು ಕಪ್ ಗೆಲುವು ಇತರರಿಗೆ ಹೋಲಿಸಿದರೆ ಚಿಕ್ಕದೇ. ನಮಗೆ ಮಾತ್ರ ದೊಡ್ಡದು. ಇದ್ದೂ ಇಲ್ಲದಂತೆ ಇದ್ದ ಭಾರತೀಯ ಫುಟ್ಬಾಲ್ ತಂಡವು ಭಾರತೀಯರಿಗೆ ಅಪರಿಚಿತವಾಗಿತ್ತು. ಸುನಿಲ್ ಚೇತ್ರಿಗಿಂತ ರೋಮಾರಿಯೊ, ಲಿಯೋನಲ್ ಮೆಸ್ಸಿ ಹೆಸರುಗಳು ಭಾರತೀಯ ಯುವಕರ ಮನದಲ್ಲಿ ಕುಳಿತುಕೊಂಡಿದ್ದವು.

ಅಲ್ಲಲ್ಲಿ ಬೈಚುಂಗ್ ಭೂತಿಯಾ ಹೆಸರು ಕೇಳಿಬರುತ್ತಿತ್ತು. ಅದು ಅಲ್ಲಿಗೆ ಮಾತ್ರ ಸೀಮಿತ. ಬೆಡ್ ರೂಂನ ಗೋಡೆಗಳವರೆಗೆ ಮಾತ್ರ ಆ ಹೆಸರು ಬರಲಿಲ್ಲ, ಇನ್ನೂ ಬಂದಿಲ್ಲ ಬಿಡಿ, ಅದು ಬೇರೆ ಮಾತು.
PTI

ದೆಹಲಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ 113ನೇ ಶ್ರೇಯಾಂಕ ಪಡೆದ ಸಿರಿಯಾ ತಂಡವನ್ನು ಬೈಚುಂಗ್ ಭೂತಿಯಾ ತಂಡ ಸೋಲಿಸಿ ಗೆಲುವಿನ ಮೊದಲಕ್ಷರವನ್ನು ಭಾರತೀಯ ಫುಟ್ಬಾಲ್ ಇತಿಹಾಸದಲ್ಲಿ ಬರೆಯಿತು. ಈ ಗೆಲುವಿಗೆ ಕೋಚ್ ಬಾಬ್ ಹ್ಯೂಟನ್ ಅವರ ಮಾರ್ಗದರ್ಶನ ಕಾರಣ ಎಂದು ತಮ್ಮ ಗುರು ವಿಧೇಯತೆಯನ್ನು ಮೆರೆದರು. ಈ ಸಣ್ಣದೊಂದು ಗೆಲುವಿಗೆ ಪೋರ್ತುಗಲ್‌ಗೆ ತೆರಳಿ ಹದಿನೈದು ದಿನಗಳ ಕಾಲ ನಡೆಸಿದ ಅಭ್ಯಾಸ ಮತ್ತು ಅಲ್ಲಿನ ಡಿವಿಜನ್ ಲೀಗ್ ಟೂರ್ನಿಗಳಲ್ಲಿ ಆಡಿದ್ದು ಕಾರಣ.

2010 ರ ವಿಶ್ವ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆಡುವುದಕ್ಕೆ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ. ಲೆಬನಾನ್ ವಿರುದ್ಧ ನಡೆದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ 1-4 ರ ಅಂತರದಲ್ಲಿ ಸೋತಿದ್ದು ವಿಷಾದಕರ. ಈ ವಿಷಾದದ ನಡುವೆ ಗೋವಾದಲ್ಲಿ ನಡೆದ ಪಂದ್ಯವನ್ನು 2-2 ರ ಅಂತರದಲ್ಲಿ ಡ್ರಾ ಮಾಡಿಕೊಂಡ ಸಮಾಧಾನವೂ ಇದೆ. ಶ್ರೇಯಾಂಕ ಪಟ್ಟಿಯಲ್ಲಿ ಭಾರತ 157ರಿಂದ 143ಕ್ಕೆ ತಲುಪಿದ್ದು ಸಂತಸದ ಸಂಗತಿ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments