Webdunia - Bharat's app for daily news and videos

Install App

ನಮ್ಮ ಬೆಳಗಾವಿಯ ಗಣಪ

Webdunia
WDWD
ಸತೀಶ್ ಪಾಗಾದ ್
ಅತ್ತ ಒಂದೈವತ್ತು ಕಿಲೋ ಮೀಟರ್ ಸರಿದರೆ ಗೋವಾ, ಇತ್ತ ಒಂದ್ಹತ್ತು ಕಿಲೋಮೀಟರ್ ಸರಿದರೆ ಸಿಗುವ ಮಹಾರಾಷ್ಟ್ರದ ಪಕ್ಕದಲ್ಲಿರುವ ಬೆಳಗಾವಿ, ಪ್ರಾಚೀನ ಇತಿಹಾಸ ಕಾಲದಿಂದಲೂ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಬೆಳೆಸಿಕೊಂಡು ಬಂದಿದೆ.

ಇತಿಹಾಸದ ಪುಟಗಳಲ್ಲಿ ಬೆಳಗಾವಿ ಮೊದಲು ರಾಷ್ಟ್ರಕೂಟರು, ನಂತರ ವಿಜಯನಗರ, ಮರಾಠಾ ಸಾಮ್ರಾಜ್ಯದ ಗಡಿ ಕೇಂದ್ರವಾಗಿ ಹಲವು ಸಾಂಸ್ಕೃತಿಕ ಮತ್ತು ರಾಜಕೀಯ ಸ್ಥಿತ್ಯಂತರಗಳಿಗೆ ಸದಾ ತನ್ನನ್ನು ತೆರೆದುಕೊಂಡು ನಿಂತಿದೆ.

ಈಗಲೂ ಕೂಡ ಬೆಳಗಾವಿ ಕರ್ನಾಟಕ-ಮಹಾರಾಷ್ಟ್ರಗಳ ರಾಜಕೀಯಕ್ಕೆ ಸಿಲುಕಿದೆ ಮತ್ತು ಮುಂದೆಯೂ ಸಿಲುಕಲಿದೆ.

ಮೊದಲೇ ಸ್ಪಷ್ಟಪಡಿಸಿದಂತೆ ಬೆಳಗಾವಿ ಹಲವು ಜೀವನ ಶೈಲಿಗಳ ನೆಲೆ. ದಕ್ಷಿಣ ಮಹಾರಾಷ್ಟ್ರ, ಕೊಂಕಣ ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ, ಬೆಳಗಾವಿಯಲ್ಲಿ ಅಖಂಡ ಹನ್ನೊಂದು ದಿನಗಳ ಕಾಲ ನಡೆಯುವ ಗಣೇಶ ಚೌತಿಯ ಸಂಭ್ರಮ ಪ್ರಸಿದ್ಧ.

ಈ ಹನ್ನೊಂದು ದಿನ ಬೆಳಗಾವಿಯ ಕಿರಿದಾದ ಗಲ್ಲಿಗಳು ರಾತ್ರಿಯಲ್ಲೂ ಸದಾ ಗಿಜಿಗಿಡುತ್ತಾ ಇರುತ್ತವೆ. ಹಾಗೆ ನೋಡಿದಲ್ಲಿ ಇಡೀ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಪಕ್ಕದ ಗೋವಾಗಳಲ್ಲಿ ಇಂತಹ ಗಣೇಶೋತ್ಸವ ಕಂಡುಬರುವುದಿಲ್ಲ.

ಈಗೀಗ ಹುಬ್ಬಳ್ಳಿಯಲ್ಲಿ ಗಣೇಶೋತ್ಸವ ಪ್ರವರ್ಧಮಾನಕ್ಕೆ ಬರುತ್ತಿದ್ದರೂ, ಬೆಳಗಾವಿ ಗಣಪನ ಖದರೇ ಬೇರೆ.

ದಕ್ಷಿಣ ಭಾರತದಲ್ಲಿ ಅದರಲ್ಲೂ ಗಣೇಶ ಚೌತಿ ಮಹಾರಾಷ್ಟ್ರ ಮತ್ತು ಮರಾಠಿ ಪ್ರಭಾವ ಇರುವ ಸ್ಥಳಗಳಲ್ಲಿ ಪ್ರಖ್ಯಾತವಾಗಿದೆ. ಗಣೇಶೋತ್ಸವದಲ್ಲಿ ಮುಂಬೈಗೆ ಪ್ರಥಮ, ಪೂನಾ ಗಣಪನಿಗೆ ಎರಡನೆ ಸ್ಥಾನ. ಮೂರನೆ ಸ್ಥಾನ ಬೆಳಗಾವಿ ಗಣಪನಿಗೆ ಮಿಸಲು.

ಸಹ್ಯಾದ್ರಿಯ ಸೆರಗಿನಂಚಿನಲ್ಲಿ ಬರುವ ಬೆಳಗಾವಿಯಲ್ಲಿ ಗಣೇಶನೊಂದಿಗೆ ಜಿಟಿ ಜಿಟಿ ಮಳೆ ಸದಾ ಇದ್ದೇ ಇರುತ್ತದೆ. ಕಿರಿದಾದ ಗಲ್ಲಿಗಳಲ್ಲಿ ಕುಳಿತಿರುವ ಗಣಪನನ್ನು ನೋಡಲು ಹರಸಾಹಸ ಮಾಡಬೇಕಾಗುತ್ತದೆ.

ಸರಿ ರಾತ್ರಿಯಲ್ಲಿ ಬೆಳಗಾವಿಯ ಗಣಪನನ್ನು ನೋಡುವುದೇ ದೊಡ್ಡ ಖುಷಿ. ಊಟ ಮುಗಿಸಿ ಹಾಗೆಯೇ ಸುತ್ತಾಡುತ್ತ ಪ್ರತಿದಿನ ಒಂದ್ಹತ್ತು ಸಾರ್ವಜನಿಕ ಮಂಡಳಿಗಳು ನಗರದ ಅಲ್ಲಲ್ಲಿ ಕೂರಿಸಿದ ಗಣಪತಿಯ ಮೂರ್ತಿಗಳನ್ನು ನೋಡಬಹುದು.

ಸರಿ ಸುಮಾರು 90ರ ದಶಕದ ಆರಂಭದಲ್ಲಿ ಉಂಟಾದ ಸಣ್ಣ ಕೋಮು ದಳ್ಳುರಿಯಲ್ಲಿ ಗಣಪತಿಯ ವಿಸರ್ಜನೆ ಒಂದು ತಿಂಗಳ ನಂತರ ಆಗಿದ್ದು ಮರೆಯಲಾರದ ಕಹಿ ಘಟನೆ. ಆ ದಿನಗಳಲ್ಲಿ ಲೀಟರ್ ಹಾಲಿಗೆ, ಕಿರಾಣಿ ಸಾಮಾನುಗಳಿಗೆ ಒದ್ದಾಡಿದ ಪರಿಸ್ಥಿತಿ ದೇವರಿಗೆ ಪ್ರೀತಿ.

ಬೆಳಗಾವಿಯಲ್ಲಿ ಪ್ರತಿಷ್ಠಾಪಿಸುವ ಕೆಲವು ಸಾರ್ವಜನಿಕ ಗಣಪತಿಯ ಮೂರ್ತಿಗಳು ಅಲ್ಲಿನ ಕಲಾವಿದರ ನೈಪುಣ್ಯತೆಗೆ ಹಿಡಿದ ಕನ್ನಡಿ. ಹುಬ್ಬಳ್ಳಿಯ ಕೆಲ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳವರು ಇಂದಿಗೂ ಬೆಳಗಾವಿ ಮೂಲದ ಕೆಲವೇ ಮೂರ್ತಿಕಾರರ ಹತ್ತಿರ ಗಣಪತಿಯ ಮೂರ್ತಿಗಳನ್ನು ಮಾಡಿಸಿ, ವಾಹನದಲ್ಲಿ ಬೆಳ್ಳಂಬೆಳಗೆ ತೆಗೆದುಕೊಂಡು ಹೋಗುತ್ತಾರೆ.

ಮುಂಬೈ, ಪೂನಾ ಮತ್ತು ಬೆಳಗಾವಿಯ ಸಾರ್ವಜನಿಕ ಗಣಪತಿಯ ಮೂರ್ತಿಗಳಲ್ಲಿ ಅಜಗಜಾಂತರ ವ್ಯತ್ಯಾಸ ಇದೆ. ಮುಂಬೈ ಗಣಪ ವಿಗ್ರಹಗಳು ಗಾತ್ರಕ್ಕೆ ಹೆಸರು ವಾಸಿ. ಪೂನಾದಲ್ಲಿನ ಗಣಪ ಮೂರ್ತಿಗಳು ಶೃಂಗಾರ ಪ್ರಿಯರು. ಬೆಳಗಾವಿ ಗಣಪ ಸೃಜನಶೀಲತೆಗೆ ಹೆಸರು ಪಡೆದುಕೊಂಡವ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments