Webdunia - Bharat's app for daily news and videos

Install App

ಗಣೇಶ ಪೂಜೆಯಲ್ಲಿ ಗರಿಕೆ-ಬಿಲ್ವ ಪತ್ರೆಗಳ ಮಹತ್ವ

Webdunia
WDWD
ಗಣಪತಿಗೆ ಪ್ರೀತಿ ಪಾತ್ರವಾದ ಸಂಖ್ಯೆ 21. ಆದುದರಿಂದ 21 ಗರಿಕೆ ಹಾಗೂ ಬಿಲ್ವ ಪತ್ರೆಗಳಿಂದ ಗಣೇಶನನ್ನು ಪೂಜಿಸುವುದು ರೂಢಿಯಲ್ಲಿದೆ. ಬಿಲ್ವ ಪತ್ರೆಗಳಲ್ಲಿ ಬಹುಔಷಧಿ ಗುಣಗಳಿವೆ. ಆರೋಗ್ಯವೇ ಮಹಾಭಾಗ್ಯ ಎನ್ನುವ ಸೂತ್ರವನ್ನು ಅರಿತವರಿಗೆ ಬಿಲ್ವ ಪತ್ರೆಗಳ ಮಹತ್ವದ ಅರಿವು ಇರುತ್ತದೆ.

ಕೇವಲ ಪತ್ರೆಗಳನ್ನು ಪೂಜಿಸುವುದಕ್ಕೆ ಮಾತ್ರ ಉಪಯೋಗಿಸಬಾರದು ಅದರ ಸೇವೆಯಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು.

ಮನಸ್ಸನ್ನು ಶುದ್ಧವಾಗಿರಿಸಿಕೊಂಡು ಲಂಬೋದರನನ್ನು ಏಕವಿಶಂತಿ (21) ಸಲ ಪೂಜಿಸಿದರೆ ಗಣೇಶನು ನಮ್ಮನ್ನು ಆಶೀರ್ವದಿಸುತ್ತಾನೆ ಎನ್ನುವ ನಂಬಿಕೆ ನಮ್ಮೆಲ್ಲರಲ್ಲಿ ಮನೆಮಾಡಿದೆ. ಓಂ ಔಷಧಿತಂತು ನಮಃ ಎನ್ನುವುದು ವಿಘ್ನೇಶ್ವರನ ಸಹಸ್ರ ನಾಮಗಳಲ್ಲಿ ಒಂದು.

ಈ ತತ್ವ ಸಮಸ್ತ ಔಷಧಿಗಳಿಗೆ, ಶಕ್ತಿಗಳಿಗೆ ಆಧಾರವನ್ನು ಹೊಂದಿದೆ. ಅಂತಹ ಅದ್ಭುತ ಪತ್ರೆಗಳ ಔಷಧಿಗಳಿಂದ ಪೂಜೆಯನ್ನು ಸಲ್ಲಿಸುವುದು ಗಣಪತಿ ಹಬ್ಬದ ವಿಶೇಷವಾಗಿದೆ. ಗಣೇಶನಿಗೆ ಗರಿಕೆ ಪೂಜೆಯನ್ನು ಮಾಡುವುದು ಪ್ರಧಾನವಾಗಿದೆ.

ಗರಿಕೆಯು ಬುದ್ಧಿಯ ಮೇಲೆ ಪ್ರಭಾವ ಬೀರುತ್ತದೆ. ಕೆಟ್ಟ ಕನಸುಗಳನ್ನು ದೂರ ಮಾಡುತ್ತದೆ. ಪಿತ್ಥ ನಿವಾರಣೆಗೆ ಗರಿಕೆ ಕಷಾಯವನ್ನು ಉಪಯೋಗಿಸುತ್ತಾರೆ.

" ಸೂರ್ಯನು ನಮಸ್ಕಾರ ಪ್ರಿಯ, ವಿಷ್ಣುವು ಅಲಂಕಾರ ಪ್ರಿಯ, ಗಣಪತಿ ತರ್ಪಣ ಪ್ರಿಯ, ಮಹಾಗಣಪತಿಗೆ ಪ್ರಿಯವಾದ ಚತುರಾವೃತ್ತಿ ತರ್ಪಣ ಅರ್ಪಿಸುವುದರಿಂದ ಬುದ್ಧಿ, ಯಶಸ್ಸು, ಐಶ್ವರ್ಯ, ಶಕ್ತಿ, ಭಕ್ತಿ, ಯುಕ್ತಿ, ಮುಕ್ತಿ ದೊರೆಯುತ್ತದೆ ಎನ್ನುವುದು ನಂಬಿಕೆ.

ರಾಗಿಯಿಂದ ವಿನಾಯಕನನ್ನು ಆರಾಧಿಸಿದಲ್ಲಿ ಐಶ್ವರ್ಯ ದೊರೆಯುತ್ತದೆ. ಬೆಳ್ಳಿಯಿಂದ ಗಣಪತಿಯನ್ನು ಪೂಜಿಸಿದಲ್ಲಿ ಆಯುಷ್ಯ ಹೆಚ್ಚಾಗುತ್ತದೆ. ಬಂಗಾರದಿಂದ ಗಣೇಶನ ವಿಗ್ರಹವನ್ನು ಮಾಡಿ ಪೂಜಿಸಿದಲ್ಲಿ ಸಂಕಲ್ಪ ಸಿದ್ಧಿಯಾಗುತ್ತದೆ. ಕಲ್ಲಿನಿಂದ ಗಣೇಶನ ವಿಗ್ರಹ ಮಾಡಿ ಪೂಜಿಸಿದಲ್ಲಿ ಜ್ಞಾನ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments