Webdunia - Bharat's app for daily news and videos

Install App

ಫ್ರುಟ್ ಪುಡ್ಡಿಂಗ್

Webdunia
ಮಾಡುವ ವಿಧಾನ- ಎರಡು ಹಣ್ಣು ಟೊಮೇಟೋ, ಎರಡು ಕಪ್ ಸಕ್ಕರೆ, ಒಂದು ಕಪ್ ವಿವಿಧ ಹಣ್ಣುಗಳು (ಆಪಲ್, ಬಾಳೆಹಣ್ಣು, ಅನನಾಸು, ಮಾವು ಇತ್ಯಾದಿ), ಅರ್ಧ ಕಪ್ ವೆನಿಲ್ಲಾ ಎಸೆನ್ಸ್, ಸ್ವಲ್ಪ ಗೋಡಂಬಿ, ಸ್ವಲ್ಪ ತುಪ್ಪ.

ಮಾಡುವ ವಿಧಾನ- ಎರಡು ಟೊಮೇಟೋಗಳಿಗೆ ಒಂದು ಕಪ್ ನೀರು ಸೇರಿಸಿ ನಯವಾದ ಪೇಸ್ಟ್ ಆಗುವಂತೆ ಮಿಕ್ಸಿಯಲ್ಲಿ ತಿರುಗಿಸಿ. ಹೊರತೆಗೆದು ಟೊಮೇಟೋ ರಸವ್ನು ಮಾತ್ರ ಹಿಂಡಿ ತೆಗೆಯಿರಿ. ಎಲ್ಲ ಹಣ್ಣುಗಳ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಟೊಮೇಟೋ ಜ್ಯೂಸಿಗೆ ಹಣ್ಣುಗಳು ಹಾಗೂ ಸಕ್ಕರೆ ಸೇರಿಸಿ ಒಲೆಯ ಮೇಲಿಡಿ. ತಿರುವುತ್ತಲೇ ಇರಿ. ಇದು ಬೇಯುತ್ತಾ ಬಂದಾಗ ಟೋಮೇಟೋವಿನ ಹಸಿ ವಾಸನೆ ಹೊರಟುಹೋಗಿರುತ್ತದೆ. ವಾಸನೆ ಹೋದ ಮೇಲೆ ಅದ್ಕಕೆ ವೆನಿಲ್ಲಾ ಎಸೆನ್ಸ್ ಹಾಕಿ. ಇದರಲ್ಲಿ ಗುಳ್ಳೆಗಳೇಳುತ್ತಿದ್ದಂತೆ ಹಾಗೂ ಮಿಶ್ರಣ ಸ್ವಲ್ಪ ಗಟ್ಟಿಯಾಗುತ್ತಾ ಬಂದಾಗ ಪಾತ್ರೆಯನ್ನು ಸ್ಟವ್‌ನಿಂದ ಕೆಳಗಿಳಿಸಿ. ಕಡಾಯಿಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ ಅದಕ್ಕೆ ಕತ್ತರಿಸಿದ ಗೋಡಂಬಿ ಹಾಕಿ ಹುರಿಯಿರಿ. ಅದು ಹೊಂಬಣ್ಣಕ್ಕೆ ತಿರುಗಲ ಶುರುವಾದಾಗ ಅದನ್ನು ಈಗಷ್ಟೇ ಕೆಳಗಿಳಿಸಿದ ಫ್ರುಟ್ ಪುಡ್ಡಿಂಗ್‌ಗೆ ಸೇರಿಸಿ. ತಣ್ಣಗಾದ ಮೇಲೆ ಫ್ರಿಡ್ಜ್‌ನಲ್ಲಿಡಿ. ಫ್ರುಟ್ ಪುಡ್ಡಿಂಗ್ ಸಿದ್ಧ.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಎಲ್ಲರೂ ಇಷ್ಟಪಟ್ಟು ತಿನ್ನುವ ರಾಂಬೂಟನ್ ಹಣ್ಣಿನ ಆರೋಗ್ಯ ಪ್ರಯೋಜನ ಇಲ್ಲಿದೆ

ರಾತ್ರಿ ನಿದ್ರೆ ಬರುವವರೆಗೂ ಬೆಡ್ ಮೇಲೆ ಮಲಗಿ ಮೊಬೈಲ್ ನೋಡುತ್ತಿದ್ದರೆ ಇದನ್ನು ತಪ್ಪದೇ ಓದಿ

ರಕ್ತ ತುಂಬಲು ಕೊಡುವ ಗುಳಿಗೆಗಳಿಂದ ಏನು ಅಡ್ಡಪರಿಣಾಮವಿದೆ ಎಂದು ತಿಳಿದುಕೊಳ್ಳಿ

ಪೇಪರ್ ಅವಲಕ್ಕಿಯಿಂದ ಆರೋಗ್ಯಕ್ಕೆ ಸಿಗುವ ಸಿಗುವ ಪ್ರಯೋಜನಗಳು ಇಲ್ಲಿದೆ

ಆಯುರ್ವೇದದ ಪ್ರಕಾರ ಬಿಸಿ ನೀರಿಗೆ ಜೇನು ತುಪ್ಪ ಸೇರಿಸಿ ಸೇವಿಸಬಾರದು ಯಾಕೆ ಗೊತ್ತಾ

Show comments