Webdunia - Bharat's app for daily news and videos

Install App

'ವಾರೆಕೋರೆ' ಹಾಸ್ಯ ಮಾಸಿಕ ಬಿಡುಗಡೆ

Webdunia
ಮಂಗಳವಾರ, 27 ಜನವರಿ 2009 (10:53 IST)
PR
ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ನೇತೃತ್ವದಲ್ಲಿ, ಹಾಸ್ಯ ಮತ್ತು ಕಾರ್ಟೂನ್‌ಗಳಿಗಾಗಿಯೇ ಮೀಸಲಾಗಿರುವ ವಿಶಿಷ್ಟವಾದ ಮಾಸಿಕ ಪತ್ರಿಕೆ 'ವಾರೆಕೋರೆ' ಎಂಬ 'ಶುದ್ಧ ತರ‌್ಲೆ ಮಾಸ ಪತ್ರಿಕೆ' ಜನವರಿ 23ರಂದು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ಈ ಪತ್ರಿಕೆಯಲ್ಲಿ ಪ್ರಕಾಶ್ ಶೆಟ್ಟಿ ಅವರ ಸಹೋದರ, ಮತ್ತೊಬ್ಬ ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಹರಿಣಿ, ಜೀವನ್, ಜೇಮ್ಸ್ ವಾಜ್, ಕೆ.ಆರ್.ಸ್ವಾಮಿ, ಶ್ರೀಧರ್, ಸತೀಶ್ ಶೃಂಗೇರಿ, ಗೋಪಾಲ್ ಮುಂತಾದ ಕಾರ್ಟೂನಿಸ್ಟ್‌ಗಳು ತಮ್ಮ ಕೈಚಳಕವನ್ನು ಮೆರೆಯಲಿದ್ದಾರೆ. ಈ ಪತ್ರಿಕೆಯೊಂದಿಗೆ 'ಕಾರ್ಟೂನ್ ಮಾಸ್ಟರ್' ಎಂಬ ವ್ಯಂಗ್ಯ ಚಿತ್ರ ಕಲಿಕಾ ಕೈಪಿಡಿಯು ಉಚಿತವಾಗಿ ದೊರೆಯುತ್ತದೆ.

ಕರ್ನಾಟಕದಾದ್ಯಂತ ಸರಣಿ ನಗೆ ಬಾಂಬ್ ಸ್ಫೋಟಗೊಳ್ಳಲಿದೆ, ಕನ್ನಡ ಪತ್ರಿಕೋದ್ಯಮದಲ್ಲೊಂದು 'ತುಂಟರ' ಗಾಳಿ ಎಂಬ ವಿಶಿಷ್ಟ ಹಾಸ್ಯದ ಒಕ್ಕಣೆಗಳೊಂದಿಗೆ ಈ ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆಯೂ ವಿಶಿಷ್ಟವಾಗಿತ್ತು.

15 ಹರೆಯದಲ್ಲೇ ಕಾರ್ಟೂನ್ ಮಾಡುವುದನ್ನು ಆರಂಭಿಸಿದ್ದ ಪ್ರಕಾಶ್ ಶೆಟ್ಟಿ, ದಿ ವೀಕ್, ತುಷಾರ, ಸಂತೋಷ, ಮುಂಗಾರು ಮತ್ತಿತರ ಪತ್ರಿಕೆಗಳಲ್ಲಿ ತಮ್ಮ ವಿಶಿಷ್ಟ ಗೆರೆಗಳ ಮೂಲಕ ಖ್ಯಾತರಾಗಿದ್ದರು. ಸ್ಥಳದಲ್ಲೇ ಕ್ಯಾರಿಕೇಚರ್ ಬಿಡಿಸುವ, ಟಿ-ಶರ್ಟ್‌ನಲ್ಲಿ ಕ್ಯಾರಿಕೇಚರ್, ಕೌಟುಂಬಿಕ ಕ್ಯಾರಿಕೇಚರ್ ಮುಂತಾದ ವೈಶಿಷ್ಟ್ಯಗಳಿಂದಾಗಿ ಅವರು ಗಮನ ಸೆಳೆಯುತ್ತಿದ್ದು, ಈ-ಟಿವಿಯಲ್ಲಿ 'ಪ್ರಕಾಶ್ ಶೆಟ್ಟಿ ಪಂಚ್' ಎಂಬ ಕಾರ್ಯಕ್ರಮವೂ ಜನಮನ ತಣಿಸುತ್ತಿತ್ತು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

Show comments