Webdunia - Bharat's app for daily news and videos

Install App

ವೆಬ್‌ದುನಿಯಾದಲ್ಲಿ 'ಹರಿಣಿ' ನಗಿಸುವ ಗೆರೆಗಳು!

Webdunia
WD
ಕನ್ನಡ ಕಾರ್ಟೂನು ಮತ್ತು ಕ್ಯಾರಿಕೇಚರ್ ಪ್ರಪಂಚದಲ್ಲಿ ಸಿದ್ಧ-ಪ್ರಸಿದ್ಧ ಹೆಸರು ಹರಿಣಿ. ಸುಮಾರು 30 ವರ್ಷಗಳ ಸುದೀರ್ಘ ಅವಧಿಯಲ್ಲಿ ಕನ್ನಡ ವಿವಿಧ ನಿಯತಕಾಲಿಕಗಳು, ದೈನಿಕಗಳಲ್ಲಿ ಹರಿಣಿ ಅವರ ಗೆರೆಗಳು ಅದೆಷ್ಟೋ ಓದುಗರ ಮುಖದಲ್ಲಿ ನಗುವರಳಿಸಿವೆ.

ನಿಮ್ಮನ್ನು ನೋಡಿದ ತಕ್ಷಣವೇ ಪೆನ್ನು/ಕುಂಚ ಹಿಡಿದು ತಟಪಟನೆ ಗೆರೆ ಎಳೆದು ಕಾಗದದಲ್ಲಿ ನಿಮ್ಮ ಮುಖ ಮೂಡಿಸುವ ಕಲೆ ಸಿದ್ಧಿಸಿರುವ ಹರಿಣಿಯವರ ನಗಿಸುವ ಗೆರೆಗಳು ಅಥವಾ ಮನರಂಜನಾ ವ್ಯಂಗ್ಯಚಿತ್ರಗಳು (ಅವರೇ ಹೇಳಿಕೊಳ್ಳುವಂತೆ Entertoonment) ಇನ್ನು ಮುಂದೆ ನಿಮ್ಮ ಮೆಚ್ಚಿನ ಕನ್ನಡ ಅಂತರ್ಜಾಲ ತಾಣವಾಗಿರುವ ವೆಬ್‌ದುನಿಯಾದಲ್ಲಿ ಮೂಡಿಬರಲಿದೆ.

ಹರಿಣಿಯವರ ಜನ್ಮಭೂಮಿ ಕೇರಳದ ತಲಚ್ಚೇರಿ ಆದರೂ ಅವರ ಕರ್ಮಭೂಮಿ ಕರ್ನಾಟಕ, ಮಂಗಳೂರಿನ ರಸಗೊಬ್ಬರ ಕಾರ್ಖಾನೆ ಎಂಸಿಎಫ್ ಉದ್ಯೋಗಿಯಾಗಿರುವ ಹರಿಣಿ ಅವರಿಗೆ ಈ ಕಲೆ ಜನ್ಮಜಾತವಾಗಿ ಸಿದ್ಧಿಸಿದ್ದಲ್ಲ. ಸ್ವಂತ ಪರಿಶ್ರಮ, ದಣಿವರಿಯದ ಸಾಧನೆ ಅವರನ್ನು ಈ ಮಟ್ಟಕ್ಕೇರಿಸಿದೆ.

19 ರ ಹರೆಯದಲ್ಲಿ, ಬಿಎಸ್ಸಿ ಓದುತ್ತಿರುವಾಗ ಕಾರ್ಟೂನ್ ಬರೆಯುವುದನ್ನು ಆರಂಭಿಸಿದ್ದ ಹರಿಶ್ಚಂದ್ರ ಶೆಟ್ಟಿ ಅವರ ಮೊದಲ ಕಾರ್ಟೂನು ಪ್ರಕಟವಾಗಿರುವುದು 1977ರಲ್ಲಿ ಕರ್ಮವೀರ ಪತ್ರಿಕೆಯಲ್ಲಿ. ಆ ಬಳಿಕ ಕನ್ನಡದ ಬಹುತೇಕ ಎಲ್ಲ ನಿಯತಕಾಲಿಕಗಳಲ್ಲಿಯೂ ಅವರ ಕೈಚಳಕ ಕಾಣಿಸಿಕೊಂಡಿದೆ. ಸಾವಿರಾರು ಅಭಿಮಾನಿ-ಮಿತ್ರರ ಬಳಗ ಹೊಂದಿರುವ ಹರಿಣಿ ಅವರ 'ಪೋಕ್ರಿ' ಹೆಸರಿನ ಮಕ್ಕಳ ಕಾರ್ಟೂನು ಪುಸ್ತಕವು ಅತ್ಯಂತ ಜನಪ್ರಿಯ.

ಇದೀಗ ವೆಬ್‌ದುನಿಯಾದಲ್ಲಿ ಅವರ ಬೆಳ್ಳಿ ರೇಖೆಗಳು ಮೂಡಿಬರಲಿದ್ದು, ಇದು ಪ್ರೀತಿಯ ಓದುಗರಿಗೆ ಇಷ್ಟವಾಗಬಹುದು ಅಂತ ನಮ್ಮ ಅನಿಸಿಕೆ.

ಅವರ ಕಾರ್ಟೂನುಗಳನ್ನು ಇಲ್ಲಿ ಕ್ಲಿಕ್ ಮಾಡಿ ನೋಡಬಹುದು.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

Show comments