Webdunia - Bharat's app for daily news and videos

Install App

ಆಹಾ...ಅಂದದ ಕೈಗಳಿಗಾಗಿ ಸುಂದರ ಉಗುರು

Webdunia
ಮಂಗಳವಾರ, 28 ಫೆಬ್ರವರಿ 2012 (11:24 IST)
PR
ಉಗುರು ದೇಹದ ಒಂದು ಭಾಗವಾಗಿರುವ ಕೆರಾಟಿನ್ ಎಂಬ ಪ್ರೋಟೀನ್‌ನಿಂದ ರಚಿತವಾಗಿವೆ. ದಿನದಲ್ಲಿ 0.01 ಸೆಂಟಿಮೀಟರ್‌ನಷ್ಟು ಬೆಳೆಯುತ್ತವೆ. ದೇಹದ ಇತರ ಭಾಗಗಳಿಗೆ ನಾವೆಷ್ಟು ಗಮನ ಕಾಳಜಿ ನೀಡುತ್ತೇವೆಯೋ, ಅದೇ ರೀತಿಯ ಕಾಳಜಿ ಮತ್ತು ಗಮನವನ್ನು ನಾವು ಉಗುರಿಗೆ ನೀಡುವುದು ಅವಶ್ಯಕ. ಉಗುರುಗಳು ಪ್ರತಿದಿನ ಬೆಳೆಯುವುದರಿಂದ ಅವುಗಳನ್ನು ನಿಯಮಿತವಾಗಿ ಶುಚಿಯಾಗಿಟ್ಟುಕೊಳ್ಳಬೇಕು ಹಾಗೂ ಸುಂದರ ಆಕಾರವನ್ನು ಅವಕ್ಕೆ ನೀಡಬೇಕು.

ಧೂಮಪಾನವು ಉಗುರನ್ನು ಹಾನಿಕಾರವಾಗಿ ಮಾಡುವುದರಿಂದ ಧೂಮಪಾನವನ್ನು ಆದಷ್ಟು ದೂರವಿರಿಸಬೇಕು ಮತ್ತು ವಾರಕ್ಕೊಮ್ಮೆ ಅದನ್ನು ಕತ್ತರಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಾದದ್ದು. ತಮ್ಮ ಬೆರಳುಗಳು ಅಂದವಾಗಿ ತೋರಲು ಹಾಗೂ ತಮ್ಮ ದೇಹವಿನ್ಯಾಸಕ್ಕೆ ತಕ್ಕಂತೆ ಮಹಿಳೆಯರು ಕೃತಕ ಉಗುರನ್ನು ತೊಟ್ಟುಕೊಳ್ಳುತ್ತಾರೆ. ಜೆಲ್, ಬಣ್ಣ ಮೊದಲಾದವುಗಳನ್ನು ಬಳಸಿ ಅವುಗಳನ್ನೂ ಇನ್ನೂ ಸುಂದರವಾಗುವಂತೆ ಮಾಡುತ್ತಾರೆ.

ತಮ್ಮ ಉಗುರುಗಳಲ್ಲಿ ಬಣ್ಣಗಳನ್ನು ಅವರು ಶಾಶ್ವತವಾಗಿ ಇರಿಸುವುದು ತಮ್ಮ ಉಗುರಿನ ಅಂದವನ್ನು ತಾವೇ ಕೆಡೆಸಿಕೊಂಡಂತೆ. ಉಗುರನ್ನು ಕತ್ತರಿಸುವುದು ಮತ್ತು ಅದಕ್ಕೆ ಆಕಾರ ನೀಡುವುದಕ್ಕೆ ಸಣ್ಣ ಅಭ್ಯಾಸ ಮತ್ತು ತಾಳ್ಮೆ ಇರಬೇಕು. ನಿಮ್ಮ ಉಗುರಿಗೆ ಸುಂದರ ಆಕಾರ ನೀಡಿ ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಿಮ್ಮ ಕೈಗಳಿಗೆ ಗ್ಲಾಮರ್ ನೋಟವನ್ನು ನೀಡುತ್ತದೆ.

ನಿಮ್ಮ ಸುಂದರ ಉಗುರಿಗಾಗಿ ಕೆಲವೊಂದು ಸಲಹೆಗಳು ಇಲ್ಲಿವೆ
* ನೀವು ತೆಗೆದುಕೊಳ್ಳುವ ಆಹಾರವನ್ನು ಅವಲಂಬಿಸಿ ನಿಮ್ಮ ಉಗುರು ಸುಂದರವಾಗಿರುತ್ತದೆ.

* ಉಗುರುಗಳಲ್ಲಿ ಹೆಚ್ಚಾಗಿ ಕಾಣಿಸುವ ಬಿಳಿ ಗೆರೆಗಳನ್ನು ಹೋಗಲಾಡಿಸಲು ಪ್ರೋಟೀನ್ ಭರಿತ ಆಹಾರವನ್ನು ಸೇವಿಸಬೇಕು.

*ಹೈಡ್ರೋಕ್ಲೋರಿಕ್ ಆಸಿಡ್‌ನ ಕೊರತೆಯಿಂದ ಉಗುರುಗಳು ತುಂಡಾಗಲು ಕಾರಣ ಆದ್ದರಿಂದ ಸತ್ವಭರಿತ ಆಹಾರವನ್ನು ಸೇವಿಸಬೇಕು.

*ವಿಟಮಿನ್ ಬಿ ಯ ಕೊರತೆಯಿಂದ ಉಗುರುಗಳು ಕಪ್ಪಾಗುತ್ತವೆ ಮತ್ತು ಶುಷ್ಕವಾಗುತ್ತವೆ. ಅದೂ ಅಲ್ಲದೆ ಜಿಂಕ್ ಅಂಶವಿರುವ ಆಹಾರವನ್ನು ಸೇವಿಸುವುದು ಉತ್ತಮ

*ಕೊಬ್ಬಿನ ಆಸಿಡ್‌ನ ಕಾರಣದಿಂದ ಉಂಟಾಗುವ ಮೆಟಾಬಿಲಿಸಂನ ಕೊರತೆಯು ಹೊರಚರ್ಮವನ್ನು ಕೆಂಪಾಗಿಸುತ್ತವೆ.

*ಸಲ್ಫರ್ ಅಂಶ ಹೆಚ್ಚಾಗಿರುವ ಆಹಾರಗಳಾದ ಬ್ರೊಕ್ಕೊಲಿ, ಮೀನು ಮತ್ತು ನೀರುಳ್ಳಿಯನ್ನು ಹೆಚ್ಚಾಗಿ ಸೇವಿಸಬೇಕು.

*ಬಯೋಟಿನ್ ಅಂಶವಿರುವಂತಹ ಸೋಯಾ, ಬ್ರೂವರ್ ಈಸ್ಟ್ ಮತ್ತು ಸಂಸ್ಕರಿಸಿದ ಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು.

*ಹಣ್ಣಿನ ರಸ ಮತ್ತು ಸಾಕಷ್ಟು ನೀರು ಉಗುರನ್ನು ಉತ್ತಮವಾಗಿ ಬೆಳೆಸುವಲ್ಲಿ ಸಹಕಾರಿ.

*ಕ್ಯಾರೆಟ್ ತನ್ನಲ್ಲಿ ಕ್ಯಾಲ್ಶಿಯಂ ಮತ್ತು ಪೋಸ್ಫರಸ್‌ಗಳನ್ನು ಒಳಗೊಂಡಿರಿವುದರಿಂದ ಉಗುರನ್ನು ಗಟ್ಟಿಮುಟ್ಟಾಗಿಸುವಲ್ಲಿ ಇದು ಸಹಕಾರಿ.

*'ಎ' ಸತ್ವ ಮತ್ತು ಕ್ಯಾಲ್ಸಿಯಂನ್ನು ಒಳಗೊಂಡಿರುವ ಆಹಾರವು ಶುಷ್ಕ ಹಾಗೂ ತುಂಡಾಗುವ ಉಗುರಿಗೆ ಉತ್ತಮವಾದುದು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

Show comments