ಸಂಭೋಗದ ಅಡೆತಡೆ ದೂರವಾಗಲು ಇಲ್ಲಿದೆ ಪರಿಹಾರ !
, ಗುರುವಾರ, 30 ಜನವರಿ 2014 (14:14 IST)
ಪ್ರತಿಯೋರ್ವ ಗಂಡಸಿಗೂ ತನ್ನ ವಯೋಮಿತಿ ಐವತ್ತು ವರ್ಷ ಆದ ಬಳಿಕ ಲೈಂಗಿಕ ಸಾಮರ್ಥ್ಯದಲ್ಲಿ ಸಾಕಷ್ಟು ಮಾರ್ಪಾಟುಗಳು ಕಂಡು ಬರುತ್ತವೆ. ಆತನ ಆಸಕ್ತಿಯಲ್ಲಿ ಏರುಪೇರಾಗಿರುವುದು ಅನುಭವಕ್ಕೆ ಬರುತ್ತದೆ. ಅಲ್ಲದೆ ಹಿಂದೆ ಇದ್ದ ದೃಢತ್ವಕ್ಕು ಇಂದಿನ ಸಾಮರ್ಥ್ಯಕ್ಕೂ ನಡುವೆ ಇರುವ ವ್ಯತ್ಯಾಸದ ಅರಿವು ಉಂಟಾಗುತ್ತದೆ. ಈ ಕಾರಣದಿಂದ ಮನದಲ್ಲಿ ಆತಂಕ ಉಂಟಾಗುತ್ತದೆ. ಅಲ್ಲದೆ ಇದರಿಂದ ಹೆಚ್ಚಿನ ಭಯ ಉಂಟಾಗುತ್ತದೆ ತಮ್ಮ ಬದುಕು ಮುಗಿದೇ ಹೋಯಿತು ಎಂದು. ಆದರೆ ಈ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ ಎನ್ನುತ್ತಾರೆ ತಜ್ಞ ವೈದ್ಯರು. ಇಲ್ಲಿ ಅವರು ನೀಡಿರುವ ಚಿಕ್ಕ ಚಿಕ್ಕ ಸಲಹೆಗಳು ನಿಮ್ಮಲ್ಲಿರುವ ಸಮಸ್ಯೆಯನ್ನು ದೂರ ಮಾಡಲ ಸಹಾಯ ಕಾರಿ.ವಾರದಲ್ಲಿ ಹೆಚ್ಚು ಬಾರಿ ಸಂಭೋಗದಲ್ಲಿ ತೊಡಗಿದರೆ ಅಷ್ಟು ಸಾಮರ್ಥ್ಯ ಬೆಳೆಯುತ್ತದೆಯಂತೆ. ಅಂದರೆ ವಾರಕ್ಕೆ ಕನಿಷ್ಠ ನಾಲ್ಕು ಬಾರಿಯಾದರೂ ಮಿಲನ ಕಾರ್ಯದಲ್ಲಿ ತೊಡಗಬೇಕು ಎಂದಿದ್ದಾರೆ ಲೈಂಗಿಕ ತಜ್ಞರು.
ದಿನಕ್ಕೊಂದು ಆಪಲ್ ಇಲ್ಲವೆ ಸ್ಟ್ರಾಬೆರ್ರಿ , ಅದನ್ನು ಸೇವಿಸಲು ಸಾಧ್ಯವಾಗದೆ ಇದ್ದಲ್ಲಿ ಒಟ್ ಮೀಲ್ , ಬೀನ್ಸ್... ಯಾಕೆ ಹೀಗೆ ಹೇಳುತ್ತಿದ್ದಾರೆ ಎನ್ನುವ ಆಶ್ಚರ್ಯ ಆಗುವುದು ಸಹಜ. ಈ ರೀತಿಯ ನಾರಿನ ಪದಾರ್ಥಗಳ ಸೇವನೆಯಿಂದ ಶರೀರದದಲ್ಲಿ ಇರುವ ಕೊಬ್ಬಿನಂಶ ರಕ್ತನಾಳಗಳಲ್ಲಿ ಸೇರ್ಪಡೆ ಆಗದಂತೆ ತಡೆ ಗಟ್ಟುತ್ತದೆ. ಆಗ ವೇಗವಾದ ರಕ್ತದ ಸರಬರಾಜು ಉಂಟಾಗುತ್ತದೆ. ಏರೋಬಿಕ್ ವ್ಯಾಯಾಮ , ಜಾಗಿಂಗ್ ನಂತಹವುಗಳಿಗೆ ಆದ್ಯತೆ ನೀಡಿ. ದಿನಕ್ಕೆ ಇನ್ನು ಕ್ಯಾಲರಿಗಳನ್ನು ಕರಗಿಸಿ ಕೊಂಡರೆ ಸಾಕು . ಸ್ತಂಭನ ಸಮಸ್ಯೆ ಶೇ. ಎಪ್ಪತ್ತರಷ್ಟು ಕಡಿಮೆ ಮಾಡುತ್ತದೆ. ಇವೆಲ್ಲ ಟ್ರೈ ಮಾಡಿ ಸುಖ ನಿಮ್ಮದಾಗಿಸಿಕೊಳ್ಳಿ .