ಒಂದಷ್ಟು ಮನೆ ಮದ್ದು ನಿಮಗಾಗಿ !
, ಶನಿವಾರ, 25 ಜನವರಿ 2014 (09:55 IST)
ಸಾಮಾನ್ಯವಾಗಿ ನಮ್ಮನ್ನು ಕಾಡುವ ಅನೇಕ ಸಮಸ್ಯೆಗಳಿವೆ. ಇಲ್ಲಿ ಅದರ ನಿವಾರಣೆಗೆ ಕೆಲವು ಸರಳ ಮನೆಮದ್ದು ನೀಡಲಾಗಿದೆ. ಅವುಗಳನ್ನು ಅನುಸರಿಸಿ, ಸಮಸ್ಯೆಯಿಂದ ದೂರವಾಗಿ . ಒಂದು ವಿಷ್ಯ ನೆನಪಲ್ಲಿ ಇಡಿ.. ಯಾವುದೇ ಸಮಸ್ಯೆಯ ತೀವ್ರತೆಗೆ ತಜ್ಞ ವೈದ್ಯರ ಬಳಿ ಹೋಗಿ ಚಿಕಿತ್ಸೆ ತೆಗೆದು ಕೊಳ್ಳುವುದು ಅತ್ಯಗತ್ಯ. * ಎರಡು ತುಳಸಿ ಎಲೆ, ಚಿಟುಕೆ ಉಪ್ಪು , ಕರಿಕಾಳು ಮೆಣಸಿನ ಪುಡಿ ಈ ಮೂರನ್ನು ಸೇರಿಸಿ ನೋವಿರುವ ಕಡೆ ಅದನ್ನು ಒತ್ತಿ ಹಿಡಿಯಿರಿ . ಎರಡು ನಿಮಿಷಗಳ ನಂತರ ನೋವು ಕಡಿಮೆ ಆಗುತ್ತದೆ. * ಮುಂಜಾನೆ ಐದು ಲೋಟ ನೀರು ಕುಡಿದರೆ ಬಾಯಿ ದುರ್ವಾಸನೆ ದೂರವಾಗುತ್ತದೆ. *ಖಾಲಿ ಹೊಟ್ಟೆಯಲ್ಲಿ ತುಳಸಿ ರಸ ದಲ್ಲಿ ಜೇನು ಮಿಶ್ರಮಾಡಿ ಕುಡಿದರೆ ಕೆಮ್ಮು-ನೆಗಡಿ ದೂರವಾಗುತ್ತದೆ. *ಶುಂಠಿ ಜೊತೆಗೆ ಸಕ್ಕರೆ ಬೆರಸಿ ತಿಂದರೆ ಕೆಮ್ಮು ದೂರವಾಗುತ್ತದೆ.