ನೆನಪಿನ ಶಕ್ತಿ ವೃದ್ಧಿಸಿಕೊಳ್ಳಬೇಕೆ? ಕೋಳಿ ಮೊಟ್ಟೆ, ಮಾಂಸ ತಿನ್ನಿ
ಮರೆವಿನ ಸಮಸ್ಯೆಯಿಂದ ಬಳಲುತ್ತಿರುವವರು ಕೋಳಿ ಮಾಂಸ ಅಥವಾ ಕೋಳಿ ಮೊಟ್ಟೆ ಸೇವಿಸುವುದರಿಂದ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂಬ ಅಂಶವು ಸಂಶೋಧನೆಯಿಂದ ದೃಢಪಟ್ಟಿದೆ.ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿಮೊಟ್ಟೆಯಲ್ಲಿರುವ ಕೊಲೈನ್ ಎಂಬ ನ್ಯೂಟ್ರಿನ್ ಅಂಶವು ವಯಸ್ಸಾದವರ ಮೆದುಳನ್ನು ಚುರುಕುಗೊಳಿಸುವುದರೊಂದಿಗೆ ನೆನಪಿನ ಶಕ್ತಿಯನ್ನೂ ಹೆಚ್ಚಿಸಲಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ. ಬೋಸ್ಟನ್ ವೈದ್ಯಕೀಯ ವಿಶ್ವವಿದ್ಯಾಲಯದ ರೋಡಾ ಯ್ಯು ಮತ್ತು ಅವರ ತಂಡವು 1,400 ವಯಸ್ಕರನ್ನು ಬಳಸಿಕೊಂಡು 10 ವರ್ಷಗಳ ಕಾಲ ನಡೆಸಿದ ಸಂಶೋಧನೆಯಿಂದಾಗಿ ಈ ಅಂಶವು ದೃಢಪಟ್ಟಿದೆ ಎಂದು ಡೈಲಿ ನ್ಯೂಸ್ ವರದಿ ಮಾಡಿದೆ. ಸಂಶೋಧನೆಯಲ್ಲಿ ಪಾಲ್ಗೊಂಡವರ ಪೈಕಿ ಕೋಲೈನ್ ಅಂಶ ಹೆಚ್ಚಾಗಿರುವ ಮೊಟ್ಟೆಯನ್ನು ಸೇವಿಸಿದವರ ನೆನಪಿನ ಶಕ್ತಿಯನ್ನು ಪರೀಕ್ಷೆ ಮಾಡಿದಾಗ ಸ್ಮರಣ ಶಕ್ತಿ ಹೆಚ್ಚಾಗಿದ್ದು, ಮೊಟ್ಟೆ ಸೇವಿಸದವರ ಸ್ಮರಣ ಶಕ್ತಿ ಕಡಿಮೆಯಾಗಿತ್ತು. ಸೋಯಾಬೀನ್, ಬೀನ್ಸ್, ಸಮುದ್ರದ ಮೀನು ಮತ್ತು ಹಾಲಿನಲ್ಲಿ ಕೋಲಿನ್ ಅಂಶ ಹೆಚ್ಚಾಗಿರುತ್ತದೆ ಎಂದು ಆಸ್ಟ್ರೇಲಿಯಾದ ನೈನ್ಮ್ಸನ್ ವೆಬ್‌ಸೈಟ್ ವರದಿ ಮಾಡಿದೆ.