Daily Horoscope
✕

ದುರಾಭ್ಯಾಸಗಳಿಂದ ಸಾವು ಮತ್ತಷ್ಟು ಸನಿಹ

Webdunia
PTI
ಧೂಮಪಾನ, ಮದ್ಯಪಾನ, ದುರ್ಬಲ ಆಹಾರಕ್ರಮ ಮತ್ತು ನಿಷ್ಕ್ರಿಯತೆ - ಈ ನಾಲ್ಕು ದುರಾಭ್ಯಾಸಗಳು ನಮ್ಮ ಜೀವಿತಾವಧಿಯಲ್ಲಿ ಕನಿಷ್ಠ 12 ವರ್ಷಗಳನ್ನು ಕಡಿತ ಮಾಡುತ್ತದೆ ಎನ್ನುತ್ತದೆ ಒಂದು ಸಂಶೋಧನೆ. ಆದರೆ ಜೀವನಕ್ರಮ ಬದಲಾಯಿಸಿಕೊಳ್ಳುವುದರಿಂದ ಇದನ್ನು ತಡೆಗಟ್ಟಲೂಬಹುದಂತೆ.

ಈ ಮೇಲಿನ ನಾಲ್ಕೂ ದುರಾಭ್ಯಾಸಗಳು ಇಲ್ಲದವರಿಗಿಂತ ಇರುವವರು ಕ್ಯಾನ್ಸರ್ ಮತ್ತು ಹೃದ್ರೋಗದಿಂದ ಬಲಿಯಾಗುವ ಸಾಧ್ಯತೆಗಳು ಮೂರು ಪಟ್ಟು ಹಾಗೂ ಇತರ ರೋಗಗಳಿಂದ ಸಾವಿಗೀಡಾಗುವ ಸಾಧ್ಯತೆಗಳು ನಾಲ್ಕು ಪಟ್ಟು ಹೆಚ್ಚು ಎಂದು ಆರ್ಕೈವ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಎಂಬ ಆರೋಗ್ಯ ಸಂಬಂಧಿತ ಸಂಚಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿ ಹೇಳಿದೆ.

1984 ಮತ್ತು 1985ರಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 4,886 ಮಂದಿಯ ಮೇಲೆ ಅಧ್ಯಯನ ನಡೆಸಿದ ಸಂಶೋಧಕರು, ಈ ಕೆಟ್ಟ ಹವ್ಯಾಸಗಳಲ್ಲಿ ತೊಡಗಿಕೊಂಡವರಿಗೆ ಅದರ ಆಧಾರದಲ್ಲಿ ಆರೋಗ್ಯ ವರ್ತನೆಯ ಅಂಕಗಳನ್ನು ಕೊಟ್ಟರು. ಅಂದರೆ, ಎಲ್ಲ ನಾಲ್ಕು ಅಭ್ಯಾಸಗಳನ್ನು ಹೊಂದಿದ್ದವರಿಗೆ ನಾಲ್ಕು ಅಂಕ, ಯಾವುದೂ ಇಲ್ಲದವರಿಗೆ ಸೊನ್ನೆ ಅಂಕ. ಅಂದರೆ ಒಟ್ಟಿನಲ್ಲಿ, ಅಂಕ ಹೆಚ್ಚಿದ್ದಂತೆ, ಮನುಷ್ಯನ ಜೀವಿತಾವಧಿ ಕಡಿಮೆ.

ಸರಿಸುಮಾರು 20 ವರ್ಷಗಳ ಕಾಲ ಈ ಕುರಿತು ಸಂಶೋಧನೆ ನಡೆಸಲಾಗಿದ್ದು, ಈ ಅವಧಿಯಲ್ಲಿ 1,080 ಮಂದಿ ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ 431 ಮಂದಿ ಹೃದ್ರೋಗ ತೊಂದರೆಯಿಂದ, 318 ಮಂದಿ ಕ್ಯಾನ್ಸರ್‌ನಿಂದ ಹಾಗೂ 331 ಮಂದಿ ಇತರ ರೋಗಗಳಿಂದ ಸಾವನ್ನಪ್ಪಿದ್ದರು. ಈ ಮೇಲಿನ ಯಾವುದೇ ದುರಾಭ್ಯಾಸಗಳಿಲ್ಲದವರಿಗೆ ಹೋಲಿಸಿದರೆ, ಪ್ರತೀಯೊಂದು ದುರಾಭ್ಯಾಸ ಸೇರ್ಪಡೆಯಾಗುತ್ತಿದ್ದಂತೆಯೇ, ಅವರ ಜೀವಿತಾವಧಿ ಕಿರಿದಾಗುತ್ತಾ ಬಂದಿರುವುದು ದೃಢವಾಗಿತ್ತು.

ನಾಲ್ಕು ಅಂಕ ಗಳಿಸಿದ ವ್ಯಕ್ತಿಗಿರುವ ಸಾವಿನ ಸಾಧ್ಯತೆಯ ಪ್ರಮಾಣವು, ಏನೂ ದುರಾಭ್ಯಾಸ ಇಲ್ಲದವರಿಗಿಂತ 12 ವರ್ಷ ಹೆಚ್ಚು ವಯಸ್ಸಾಗಿದ್ದಕ್ಕೆ ಸಮ ಎಂದು ಸಂಶೋಧಕರು ತಿಳಿಸಿದ್ದಾರೆ.

ಓಸ್ಲೋ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎಲಿಸಬೆತ್ ಕ್ವಾವಿಕ್ ಅವರು ಈ ಸಂಶೋಧನೆಯ ನೇತೃತ್ವ ವಹಿಸಿದ್ದರು. ಈ ಸಾಧ್ಯತೆಗಳಿಂದ ದೂರವಾಗಲು, ನಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಅವರು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಣ್ಣು ಈ ರೀತಿ ಆಗುತ್ತಿದ್ದರೆ ತಕ್ಷಣ ಮೊಬೈಲ್ ವೀಕ್ಷಿಸುವುದು ನಿಲ್ಲಿಸಬೇಕು

ಚಳಿಗಾಲದಲ್ಲಿ ಮಕ್ಕಳ ದೇಹವನ್ನು ಬೆಚ್ಚಗಿಡುವ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ 5 ಅತ್ಯುತ್ತಮ ಆಹಾರಗಳು

ಚಳಿಗಾಲದಲ್ಲಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಉಪಾಯ

ಮಹಿಳೆಯರು ಆಕರ್ಷಕ ಸೊಂಟ ಬೇಕೆಂದರೆ ಯಾವ ಯೋಗಾಸನ ಮಾಡಬೇಕು

ಚರ್ಮದ ತುರಿಕೆಯಿಂದ ಕಪ್ಪು ಕಲೆಗಳು ಬೀಳುತ್ತಿವೆಯೇ, ಶಾಶ್ವತವಾಗಿ ಉಳಿಯದಂತೆ ತಡೆಯಲು ಇಲ್ಲಿದೆ ಟಿಪ್ಸ್

Show comments