Daily Horoscope
✕

ಮಾನವನಿಗೆ ಜೋಡಿಸಲಾಗುತ್ತದೆ ಹಂದಿಯ ಶ್ವಾಸಕೋಶ!

Webdunia
Harini
WD
ಶ್ವಾಸಕೋಶ ದಾನಿಗಳ ಕೊರತೆ ಇರುವುದರಿಂದ ಇದಕ್ಕೆ ಪರ್ಯಾಯವಾಗಿ ಮಾನವನಿಗೆ ಹಂದಿಯ ಪಪ್ಪುಸ ಜೋಡಿಸುವ ಸಾಧ್ಯತೆಗಳು ದಟ್ಟವಾಗಿವೆ. ಇದಕ್ಕೆ ಕಾರಣ, ವೈದ್ಯಕೀಯ ಜಗತ್ತಿನಲ್ಲಾಗುತ್ತಿರುವ ಅಭಿವೃದ್ಧಿ, ಆವಿಷ್ಕಾರಗಳು.

ಆಸ್ಟ್ರೇಲಿಯಾದ ವಿಜ್ಞಾನಿಗಳನ್ನು ಉಲ್ಲೇಖಿಸಿ ಪ್ರಕಟವಾಗಿರುವ ವರದಿಯೊಂದರಲ್ಲಿ, ಈ ಕುರಿತ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಹಂದಿಯ ಶ್ವಾಸಕೋಶವನ್ನು ಮಾನವನ ರಕ್ತದ ಮೂಲಕ ಯಾವುದೇ ತೊಂದರೆಯಿಲ್ಲದೆ ಕಾರ್ಯಾಚರಣೆ ಎಸಗುವ ಕುರಿತ ಪ್ರಯೋಗದ ಮೂಲಕ ಕೇವಲ ಐದು ವರ್ಷಗಳ ಪರಿಶ್ರಮದಿಂದ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಆಸ್ಟ್ರೇಲಿಯಾದ ಮೆಲ್ಬರ್ನ್‌ನ ಸೈಂಟ್ ವಿನ್ಸೆಂಟ್ ಆಸ್ಪತ್ರೆಯ ವಿಜ್ಞಾನಿಗಳು ಈ ಸಾಧನೆ ಮಾಡಿದವರು. ಇವರು ಗಾಲ್ ಜೀನ್ ಎಂದೂ ಕರೆಯಲಾಗುವ ಹಂದಿಯ ಡಿಎನ್ಎಯ ಭಾಗವನ್ನು ತೆಗೆದು ಹಾಕಿದ ಬಳಿಕ, ಹಂದಿಯ ಆಂತರಿಕ ಅಂಗಗಳು ಮಾನವನ ರಕ್ತದೊಂದಿಗೆ ಹೊಂದಿಕೊಳ್ಳಲು ಆರಂಭಿಸಿತ್ತು.

1989 ರಿಂದಲೂ ಹಂದಿಯ ಅಂಗಾಂಗಗಳ ಜೋಡಣೆಗಾಗಿ ಪ್ರೊಫೆಸರ್ ಟೋನಿ ಡಿ ಆಪೈಸ್ ಅವರು ಹಂದಿ ಸಾಕಣೆ ಮಾಡುತ್ತಿದ್ದರು. ಮಾನವ ದೇಹದೊಳಗೆ ಹಂದಿಯ ಅಂಗಾಂಗ ಸೇರಿಸಿದಾಗ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಈ ಅಂಗಗಳ ತಿರಸ್ಕಾರ ಪ್ರಕ್ರಿಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಯೋಗಪಶು ಹಂದಿಗಳ ದೇಹಕ್ಕೆ ಮಾನವನ ಡಿಎನ್ಎ ಸೇರಿಸಲಾಗಿದೆ ಎಂದು ವಿವರ ನೀಡಿದ್ದಾರೆ ಪ್ರೊ.ಟೋನಿ.

ಈ ಕುರಿತು ಐದಾರು ಗಂಟೆಗಳ ಪ್ರಯೋಗ ಮಾಡಲಾಗಿದ್ದು, ಹಂದಿಗಳ ಶ್ವಾಸಕೋಶದೊಳಗೆ ಆಮ್ಲಜನಕವಿಲ್ಲದ ರಕ್ತ ಹಾಯಿಸಿದ ಬಳಿಕ, ಆಮ್ಲಜನಕ ಸಹಿತವಾದ ರಕ್ತವು ಹೊರಬಂತು. ಇದು ಮಾನವನ ಶ್ವಾಸಕೋಶದಂತೆಯೇ ಕಾರ್ಯವೆಸಗಿತು ಎಂದು ಮೆಲ್ಬರ್ನ್‌ನ ಅಲ್ಫ್ರೆಡ್ ಆಸ್ಪತ್ರೆಯ ವಿಜ್ಞಾನಿ ಗ್ಲೆನ್ ವೆಸ್ಟಾಲ್ ತಿಳಿಸಿದ್ದಾರೆ. ಇದು ಕಳೆದ 20 ವರ್ಷಗಳ ಪ್ರಯೋಗಗಳಲ್ಲೇ ಅತ್ಯಂತ ಮಹತ್ವದ ಹೆಜ್ಜೆ ಎಂದವರು ಹೇಳಿದ್ದಾರೆ.

ಅಲ್ಫ್ರೆಡ್ ವಿಜ್ಞಾನಿಗಳು ಮಾಡಿದ್ದೇನೆಂದರೆ, ಹಂದಿಯ ಶ್ವಾಸಕೋಶಗಳನ್ನು ತೆಗೆದು, ಮಾನವನ ರಕ್ತ ಪರಿಚಲನಾ ವ್ಯವಸ್ಥೆ ಕಾರ್ಯಾಚರಣೆಯುಳ್ಳ ಯಂತ್ರಕ್ಕೆ ಜೋಡಿಸಿದ್ದು. ಶ್ವಾಸಕೋಶವು 'ಉಸಿರಾಟ' ನಡೆಸುವಂತೆ ಮಾಡುವ ವೆಂಟಿಲೇಟರನ್ನು ಈ ಯಂತ್ರವು ಬಳಸುತ್ತದೆ ಮತ್ತು ಪಂಪ್ ಒಂದು ಹೃದಯದಂತೆ ಕೆಲಸ ಮಾಡಿ, ಶ್ವಾಸಕೋಶಗಳಿಗೆ ರಕ್ತವನ್ನು ಪಂಪ್ ಮಾಡುತ್ತದೆ.

ಎರಡು ವರ್ಷಗಳ ಹಿಂದೆ ಮಾಡಲಾಗಿದ್ದ ಇದೇ ರೀತಿಯ ಪ್ರಯೋಗ ವಿಫಲವಾಗಿತ್ತು. ಇದಕ್ಕೆ ಕಾರಣವೆಂದರೆ, ರಕ್ತ ಹಾಯಿಸಿದ ತಕ್ಷಣವೇ ಅದು ಹೆಪ್ಪು ಗಟ್ಟಿ ಅಂಗಾಂಗಳೆಲ್ಲವೂ ಬ್ಲಾಕ್ ಆಗಿ, ರಕ್ತವು ಪರಿಚಲನೆಯಾಗಲು ತಡೆಯಾಗಿತ್ತು.

ಆಗಸ್ಟ್ ತಿಂಗಳಲ್ಲಿ ವಾಂಕೂವರ್‌ನಲ್ಲಿ ನಡೆಯುವ ವಿಶ್ವ ಅಂಗಾಂಗ ಜೋಡಣೆ ಸಮಾವೇಶದಲ್ಲಿ ಈ ಸಂಶೋಧನೆಯ ಪೂರ್ಣ ವಿವರಗಳನ್ನು ಬಹಿರಂಗ ಬಹಿರಂಗಪಡಿಸಲಾಗುತ್ತದೆ.

ಆದರೆ ಮಾನವ-ಪ್ರಾಣಿ ನಡುವಣ ಅಂಗಾಂಗ ಜೋಡಣಾ ಪ್ರಕ್ರಿಯೆ ಬಗ್ಗೆ ವೈದ್ಯಕೀಯ ಜಗತ್ತಿನಲ್ಲೇ ಭಿನ್ನ ಅಭಿಪ್ರಾಯಗಳಿವೆ. ಒಂದು ವರ್ಗವು, ಇದರಿಂದ ಪ್ರಾಣಿಗಳ ರೋಗವು ಕೂಡ ಮಾನವ ಜನಾಂಗಕ್ಕೆ ಹರಡಬಹುದಾಗಿದೆ ಎಂಬ ಆತಂಕ ವ್ಯಕ್ತಪಡಿಸಿದೆ.

ಮಾನವ ಸಮುದಾಯವು ಭಾಗಶಃ ಪ್ರಾಣಿಯಾಗಿರಲು ಸಿದ್ಧವೇ? ವೈದ್ಯಶಾಸ್ತ್ರದ ಈ ರೀತಿಯ ಬೆಳವಣಿಗೆಗಳ ಬಗ್ಗೆ ನೀವೇನಂತೀರಿ?

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮಕ್ಕಳ ದೇಹವನ್ನು ಬೆಚ್ಚಗಿಡುವ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ 5 ಅತ್ಯುತ್ತಮ ಆಹಾರಗಳು

ಚಳಿಗಾಲದಲ್ಲಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಉಪಾಯ

ಮಹಿಳೆಯರು ಆಕರ್ಷಕ ಸೊಂಟ ಬೇಕೆಂದರೆ ಯಾವ ಯೋಗಾಸನ ಮಾಡಬೇಕು

ಚರ್ಮದ ತುರಿಕೆಯಿಂದ ಕಪ್ಪು ಕಲೆಗಳು ಬೀಳುತ್ತಿವೆಯೇ, ಶಾಶ್ವತವಾಗಿ ಉಳಿಯದಂತೆ ತಡೆಯಲು ಇಲ್ಲಿದೆ ಟಿಪ್ಸ್

ಫ್ರಿಡ್ಜ್ನಲ್ಲಿ ಹಾಲು ಎಷ್ಟು ದಿನ ತಾಜಾವಾಗಿರುತ್ತದೆ, ಹಾಲನ್ನು ಕೆಡದಂತೆ ಕಾಪಾಡುವ ಸೂಕ್ತ ವಿಧಾನಗಳು

Show comments