ಕಚೇರಿಯೊಳಗೆ ಸಸಿ ಇರಿಸಿ, ಉತ್ಪಾದಕತೆ ಹೆಚ್ಚುತ್ತೆ

Webdunia
PTI
ದಿನದ ಸಮಾರು ಶೇ.80ರಷ್ಟು ಸಮಯವನ್ನು ಕಚೇರಿ, ಶಾಲೆ ಹೀಗೆ ಕಟ್ಟಡದ ಒಳಗೇ ಸಮಯ ಕಳೆಯುವವರ ಉದ್ವಿಗ್ನತೆ ಹಾಗೂ ಒತ್ತಡವನ್ನು ಕಡಿಮೆಗೊಳಿಸಲು ಮನೆಯೊಳಗೆ ಇರಿಸುವ ಸಸಿಗಳು ಸಹಾಯ ಮಾಡುತ್ತವಂತೆ.

ಕೆಲಸದಿಂದ ಉಂಟಾಗುವ ಒತ್ತಡ, ಆಯಾಸ, ತಲೆನೋವು ಹಾಗೂ ಗಂಟಲೊಣಗುವಿಕೆ ಮುಂತಾದ ಸಮಸ್ಯೆಗಳನ್ನು ಹೊಡೆದೋಡಿಸಲು ಕಚೇರಿಯೊಳಗಿನ ಹಸಿರು ಸಸಿಗಳು ಸಕಾರಾತ್ಮಕ ಪರಿಣಾಮ ಬೀರುತ್ತವೆ ಇದಲ್ಲದೆ ಒಳಾಂಗಣದಲ್ಲಿರಿಸುವ ಸಸಿಗಳು ಕೆಲಸದ ಉತ್ಪಾದಕತೆಯನ್ನೂ ಹೆಚ್ಚಿಸುತ್ತದೆ. ಸಸಿಗಳನ್ನು ಇರಿಸಿದ್ದ ವೇಳೆ ಕಂಪ್ಯೂಟರ್ ಕಾರ್ಯಗಳನ್ನು ಮಾಡುವವರ ಉತ್ಪಾದಕತೆಯಲ್ಲಿ ಶೇ.12ರಷ್ಟು ಹೆಚ್ಚಳವಿತ್ತು ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ಇದೇ ವೇಳೆ ತರಗತಿಯಲ್ಲಿ ಹಸಿರು ಗಿಡಗಳನ್ನು ಇರಿಸಿದಾಗ ವಿದ್ಯಾರ್ಥಿಗಳ ಕ್ಷಮತೆಯೂ ಸಹ ಹೆಚ್ಚುತ್ತದೆಯಂತೆ. ಇದನ್ನು ಟೆಕ್ಸಾಸ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳಾದ ಜೆನ್ನಿಫರ್ ಎಸ್ ಡಾಕ್ಸಿ ಮತ್ತು ಟೀನಾ ಮೇರಿ ವಾಲಿಜೆಕ್ ಅವರುಗಳು ಕಂಡುಕೊಂಡಿದ್ದಾರೆ. ಇವರು ವಿದ್ಯಾರ್ಥಿಗಳ ಕಾರ್ಯಕ್ಷಮತೆಯ ಮೇಲೆ ಸಸಿಗಳ ಪರಿಣಾಮದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ.

ಅಧ್ಯಯನದ ಪ್ರಮುಖ ಉದ್ದೇಶವೆಂದರೆ, ತರಗತಿಯಲ್ಲಿ ಸಸಿಗಳನ್ನು ಇರಿಸುವುದರಿಂದ ಇದು ಕೋರ್ಸಿನ ಸಾಮರ್ಥ್ಯದ ಮೇಲೆ ಬೀರುವ ಪರಿಣಾಮ ಮತ್ತು ಕೋರ್ಸ್ ಹಾಗೂ ಶಿಕ್ಷಕರ ಮೇಲೆ ವಿದ್ಯಾರ್ಥಿಗಳ ಕಲ್ಪನೆಯ ಮೇಲೆ ಬೀರುವ ಪರಿಣಾಮದ ಕುರಿತು ಕಂಡುಕೊಳ್ಳುವುದಾಗಿತ್ತು.

ಇದಕ್ಕಾಗಿ ಒಂದೇ ತರಗತಿಯಲ್ಲಿ ಸಸಿಗಳನ್ನು ಇರಿಸಿ ಮತ್ತು ಸಸಿಗಳನ್ನು ಇರಿಸದೆ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಗಮನಿಸಲಾಗಿದ್ದು, ಸಸಿ ಇರಿಸಿದಾಗ ಮತ್ತು ಇರಿಸದೇ ಇದ್ದಾಗ ವ್ಯತ್ಯಾಸಗಳನ್ನು ಅಧ್ಯಯನ ನಡೆಸಲಾಗಿತ್ತು. ಸಸಿಗಳನ್ನು ಇರಿಸಿದ್ದವೇಳೆ ವಿದ್ಯಾರ್ಥಿಗಳು, ಕಿಟಿಕಿ ಇಲ್ಲದ, ಸಸಿ ಇರಿಸದ ಕೊಠಡಿಗಳಲ್ಲಿ ಅಧ್ಯಯನ ನಡೆಸಿದ್ದಕ್ಕಿಂತ ಉತ್ತಮ ಫಲಿತಾಂಶ ನೀಡಿದ್ದರು.

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಊಟವಾದ ತಕ್ಷಣ ವಾಕಿಂಗ್ ಮಾಡ್ತೀರಾ, ಹಾಗಿದ್ದರೆ ಇದನ್ನು ತಪ್ಪದೇ ಓದಿ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

Show comments